ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್ ಅಣೆಕಟ್ಟೆ ಆಸುಪಾಸಿನಲ್ಲಿ ಗುರುವಾರ ಮಧ್ಯಾಹ್ನ 1.45ರ ವೇಳೆಗೆ ಭೂಮಿ ಕಂಪಿಸಿದ ಅನುಭವವಾಗಿದೆ.

ಕೆಆರ್‌ಎಸ್ ಜನವಸತಿ ಪ್ರದೇಶ, ಹುಲಿಕೆರೆ, ಬೆಳಗೊಳ, ಹೊಸ ಉಂಡವಾಡಿ, ಮಜ್ಜಿಗೆಪುರ, ಬಸ್ತಿಪುರ, ಹೊಂಗಹಳ್ಳಿ ಸುತ್ತಮುತ್ತ ಭೂಮಿ ಕಂಪಿಸಿದೆ. ಮೇಲಿಂದ ಮೇಲೆ ಎರಡು ಬಾರಿ ಕೆಲ ಕ್ಷಣ ಭೂಮಿ ನಡುಗಿತು ಎಂದು ಕೆಆರ್‌ಎಸ್ ಗ್ರಾಮ ಪಂಚಾಯಿತಿ ಸದಸ್ಯ ವಿಜಯಕುಮಾರ್, ಬೆಳಗೊಳ ರವಿ ತಿಳಿಸಿದರು.

ಕೆಲ ತಿಂಗಳ ಹಿಂದೆ ಜಲಾಶಯದ ಆಸುಪಾಸಿನಲ್ಲಿ ಭೂಮಿ ಕಂಪಿಸಿದ ಅನುಭವ ಆಗಿತ್ತು. ಇದೀಗ ಮತ್ತೆ ಭೂಮಿ ನಡುಗಿದ್ದು, ಜನರಲ್ಲಿ ಆತಂಕ ಉಂಟಾಗಿದೆ. ಭೂ ವಿಜ್ಞಾನಿಗಳು ಪರಿಶೀಲನೆ ನಡೆಸಿದ್ದಾರೆ.

‘ಕೆಆರ್‌ಎಸ್ ಬಳಿ ಭೂಮಿ ನಡುಗಿದ್ದು ನಿಜ. ಆದರೆ, ಇಲ್ಲಿನ ಭೂಕಂಪ ಮಾಪನ ಕೇಂದ್ರದಲ್ಲಿ ಅದು ದಾಖಲಾಗಿಲ್ಲ. ಈ ಹಿಂದೆ ಅಣೆಕಟ್ಟೆ ಬಳಿ ಭೂಮಿ ನಡುಗಿದ್ದಾಗಲೂ ಕಂಪನದ ತೀವ್ರತೆ ದಾಖಲಾಗಿರಲಿಲ್ಲ. ಆ ಬಗ್ಗೆ ಪರಿಶೀಲನೆ ನಡೆಸಿದ್ದ ತಜ್ಞರು ಯಾವುದೇ ವರದಿ ನೀಡಿರಲಿಲ್ಲ’ ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಎಂಜಿನಿಯರ್ ವಾಸುದೇವ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.