ಬೆಂಗಳೂರು: ಒತ್ತಡ ಮುಕ್ತ ಮತ್ತು ಕಡಿಮೆ ಖರ್ಚಿನ ಉತ್ತಮ ಶಿಕ್ಷಣಕ್ಕಾಗಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂಬ ಅಭಿಯಾನ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಂದಲೇ ಆರಂಭವಾಗಿದೆ.

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸರ್ಕಾರಿ ಪ್ರೌಢ ಶಾಲೆಗಳು ಉತ್ತಮ ಪ್ರಗತಿ ಸಾಧಿಸಿರುವುದು ಮತ್ತು ಯಾವುದೇ ಸರ್ಕಾರಿ ಶಾಲೆಯೂ ಶೂನ್ಯ ಫಲಿತಾಂಶ ಪಡೆದಿಲ್ಲ. ಇದರಿಂದಅಧಿಕಾರಿಗಳ ವಲಯದಲ್ಲಿ ಹುರುಪು ತಂದಿದೆ. ಎಂಟನೇ ತರಗತಿ ಸೇರಬಯಸುವ ವಿದ್ಯಾರ್ಥಿಗಳು ಮತ್ತು ಪೋಷಕರು ಚಿಂತನೆ ನಡೆಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಾಥಮಿಕ ಶಿಕ್ಷಣ ನಿರ್ದೇಶಕ ಎಸ್.ಜಯಕುಮಾರ್ ಅವರು ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವುದರಿಂದ ಏನೆಲ್ಲ ಪ್ರಯೋಜನಗಳಿವೆ ಎಂಬುದನ್ನೂ ವಿವರಿಸಲಾಗಿದೆ. ಪೋಷಕರು 7 ನೇ ತರಗತಿ ಉತ್ತೀರ್ಣರಾದ ಮಕ್ಕಳನ್ನು ಸರ್ಕಾರಿ ಪ್ರೌಢಶಾಲೆಗೆ ಸೇರಿಸುವುದರ ಬಗ್ಗೆ ಚಿಂತನೆ ನಡೆಸಬೇಕು, ಯಾವುದೇ ಖರ್ಚು ಇಲ್ಲದೆ ಉತ್ತಮ ಫಲಿತಾಂಶಗಳಿಸುವ ಅವಕಾಶ ಇದ್ದರೂ, ದುಬಾರಿ ಹಣ ತೆತ್ತು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಅಗತ್ಯ ಇದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಬಾರಿಯ ಫಲಿತಾಂಶ ಇಂತಹದ್ದೊಂದು ಅಭಿಯಾನಕ್ಕೆ ಪ್ರೇರಣೆ ನೀಡಿದೆ ಎಂದು ಜಯಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮಕ್ಕಳಿಗೆ ವಿನಂತಿ: ‘ಮಕ್ಕಳೇ ನಿಮ್ಮ ಸ್ನೇಹಿತ ಯಾವುದೋ ಖಾಸಗಿ ಶಾಲೆ ಸೇರಿದ್ದಾನೆ. ಆದ್ದರಿಂದ ನಾನು ಅಲ್ಲಿಯೇ ಸೇರುತ್ತೇನೆ ಎಂದು ಪೋಷಕರನ್ನು ಒತ್ತಾಯ ಮಾಡದಿರಿ. ಸ್ನೇಹಿತನ ಪ್ರಭಾವದಿಂದ ಹೊರ ಬನ್ನಿ. ನಿಮಗೆ ಮತ್ತು ನಿಮ್ಮ ತಂದೆ– ತಾಯಂದಿರಿಗೆ ಪೂರ್ಣ ಗೌರವ ಮತ್ತು ಮುಕ್ತ ಸ್ವಾತಂತ್ರ್ಯ ಇರುವ, ನಿಮ್ಮ ಹೆತ್ತವರಿಗೆ ಪ್ರತಿ ತಿಂಗಳ ಶುಲ್ಕ ಒದಗಿಸಲು ಹೊರೆಯಾಗದ ಸರಕಾರಿ ಶಾಲೆಗಳನ್ನೇ ಆಯ್ಕೆ ಮಾಡಿಕೊಳ್ಳಿ. ನಂತರ ಪೋಷಕರಿಗೆ ಸರಕಾರಿ ಶಾಲೆಗೆ ಸೇರಿಸಿ ಎಂದು ಮನವಿ ಮಾಡಿ ೆಂದು ಜಯಕುಮಾರ್ ವಿನಂತಿಸಿದ್ದಾರೆ.

ಸರ್ಕಾರಿ ಪ್ರೌಢಶಾಲೆಗೆ ಏಕೆ ಸೇರಿಸಬೇಕು?

* ಪೋಷಕರ ಮಾತಿಗೆ ಹೆಚ್ಚು ಬೆಲೆ ಇದೆ

* ಪೋಷಕರು ಮತ್ತು ಮಕ್ಕಳನ್ನು ಶಾಲೆಗಳು ಮುಕ್ತ ಸ್ವಾತಂತ್ರ್ಯ ನೀಡಿ ಗೌರವಯುತವಾಗಿ ನಡೆಸಿಕೊಳ್ಳುತ್ತಾರೆ

* ಪೋಷಕರೇ ಶಾಲಾಭಿವೃದ್ದಿಯ ಅಧ್ಯಕ್ಷರಾಗಿ/ಸದಸ್ಯರಾಗಿ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಲು ಅವಕಾಶವಿದೆ

* ಪ್ರತಿ ತಿಂಗಳು ಶುಲ್ಕ ಕೊಟ್ಟಿಲ್ಲ ಎಂದು ಶಾಲೆಗಳಿಂದ ಮಕ್ಕಳನ್ನು ಹೊರಗೆ ಕಳುಹಿಸುವ ಪರಿಪಾಠ ಇಲ್ಲ

* ಡೊನೇಷನ್ ನೀಡುವ ಬದಲು ಮನೆಯಲ್ಲಿಯೇ ಆ ಹಣದಿಂದ ಉತ್ತಮ ಪುಸ್ತಕಗಳನ್ನು ಖರೀದಿಸಿ ಒಂದು ಗ್ರಂಥಾಲಯವನ್ನು ಸ್ಥಾಪಿಸಿ ಮುಂದಿನ ಹಲವಾರು ತಲೆಮಾರು ಪ್ರಯೋಜನ ಪಡೆಯಬಹುದು

* ಕ್ರೀಡೆಗೆ ಉತ್ತಮ ಅವಕಾಶ

* ಟ್ಯೂಷನ್ ಹಾವಳಿ ಇಲ್ಲ. ಶಾಲೆಯಲ್ಲಿಯೇ ವಿಶೇಷ ತರಗತಿಗಳನ್ನು ನಡೆಸಲಾಗುತ್ತದೆ.

* ಪ್ರತಿ ತಿಂಗಳು ಶಾಲೆಯಿಂದ ಉಚಿತವಾಗಿ ಪ್ರಗತಿ ಪತ್ರ ಕಳುಹಿಸಿಕೊಡಲಾಗುವುದು.

* ಪರೀಕ್ಷಾ ಪೂರ್ವ ತರಬೇತಿ ವ್ಯವಸ್ಥೆ ಇದೆ

* ಆಂಗ್ಲ ಮಾಧ್ಯಮದಲ್ಲಿ ಕಲಿಯಲೂ ಅವಕಾಶ ಇದೆ

* ಬಿಸಿಯೂಟದ ವ್ಯವಸ್ಥೆ ಇದ್ದು ತಾಯಂದಿರು ಬೇಗನೆ ಎದ್ದು ಡಬ್ಬಿ ತಯಾರು ಮಾಡಿ ಕಳುಹಿಸುವ ಅಗತ್ಯವಿಲ್ಲ

* ಉಚಿತ ಬಸ್ ಪಾಸ್ ವ್ಯವಸ್ಥೆ ಇದೆ

* ಮಕ್ಕಳನ್ನು ಶಾಲೆಗೆ ಸೇರಿಸಲು ದೊಡ್ಡ ಕ್ಯೂಗಳಲ್ಲಿ ಗಂಟೆ ಗಟ್ಟಲೆ ನಿಲ್ಲುವ ಗೋಜಿಲ್ಲ

* ಶುಲ್ಕ ಪಾವತಿ ವಿಷಯದಲ್ಲಿ ಪೋಷಕರು ಆತಂಕ ಪಡುವ ಅಗತ್ಯವಿರುವುದಿಲ್ಲ

ಹೃದಯವಂತಿಕೆ ವಾತಾವರಣ ಕಾಣಬೇಕಿದ್ದರೆ ಸರ್ಕಾರಿ ಪ್ರೌಢಶಾಲೆಗೆ ಸೇರಿಸಿ.
-ಎಸ್ ಜಯಕುಮಾರ್, ನಿರ್ದೇಶಕರು,ಪ್ರಾಥಮಿಕ ಶಿಕ್ಷಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.