ಶನಿವಾರ, 26 ಜುಲೈ 2025
×
ADVERTISEMENT
ADVERTISEMENT

ಕೆಎಎಸ್‌ ಅಧಿಕಾರಿಗಳ ಸಂಘಕ್ಕೆ ಎಲಿಷ ಆಂಡ್ರೂಸ್‌ ಅಧ್ಯಕ್ಷ

Published : 29 ಮಾರ್ಚ್ 2021, 15:47 IST
ಫಾಲೋ ಮಾಡಿ
0
ಕೆಎಎಸ್‌ ಅಧಿಕಾರಿಗಳ ಸಂಘಕ್ಕೆ ಎಲಿಷ ಆಂಡ್ರೂಸ್‌ ಅಧ್ಯಕ್ಷ
ಎಲಿಷ ಆಂಡ್ರೂಸ್‌

ಬೆಂಗಳೂರು: ಕರ್ನಾಟಕ ಆಡಳಿತ ಸೇವೆ (ಕೆಎಎಸ್‌) ಅಧಿಕಾರಿಗಳ ಸಂಘದ ನೂತನ ಅಧ್ಯಕ್ಷರಾಗಿ ಎಲಿಷ ಆಂಡ್ರೂಸ್‌ ಆಯ್ಕೆಯಾಗಿದ್ದಾರೆ.

ADVERTISEMENT
ADVERTISEMENT

ಭಾನುವಾರ ನಡೆದ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಚುನಾವಣಾ ಪ್ರಕ್ರಿಯೆ ಜರುಗಿದ್ದು, ಉಪಾಧ್ಯಕ್ಷರಾಗಿ ಅನಿತಾಲಕ್ಷ್ಮಿ, ಕಾರ್ಯದರ್ಶಿಯಾಗಿ ಸಿ.ಎಲ್‌. ಶಿವಕುಮಾರ್‌, ಜಂಟಿ ಕಾರ್ಯದರ್ಶಿಯಾಗಿ ಬಿ.ಸಿ. ಶಿವಾನಂದಮೂರ್ತಿ ಮತ್ತು ಖಜಾಂಚಿಯಾಗಿ ಬಿ.ಎಸ್‌. ರಾಜೀವ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಿ.ಎನ್‌. ವರಪ್ರಸಾದ್ ರೆಡ್ಡಿ, ಎ. ದೇವರಾಜ್‌, ನಾಗೇಂದ್ರ ಎಫ್‌. ಹೊನ್ನಳ್ಳಿ, ಎಚ್‌. ಕೊಟ್ರೇಶ್‌, ಡಾ.ಬಿ.ಆರ್. ಹರೀಶ್, ಬಸವರಾಜು, ಎಂ.ಕೆ. ಜಗದೀಶ್, ಸಂತೋಷ್‌ ಬಿರಾದಾರ, ಬಸವರೆಡ್ಡೆಪ್ಪ ರೋಣದ, ಡಾ.ರವಿ. ಎಂ. ತಿರ್ಲಾಪೂರ, ಸಿ.ಎನ್. ಮಂಜುನಾಥ್‌, ಎಂ.ಎಸ್‌.ಎನ್‌. ಬಾಬು, ಡಾ.ಕೆ. ದಾಕ್ಷಾಯಣಿ, ಬಿ. ಅಭಿಜಿನ್‌, ಶಾಂತಾ ಎಲ್‌. ಹುಲ್ಮನಿ, ಮೊಹಮ್ಮದ್ ನಹೀಮ್‌ ಮೊಮಿನ್‌, ಪ್ರಭು ರೆಡ್ಡಿ ಮತ್ತು ಎನ್‌. ರಮೇಶ್‌ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0