ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿಯಲ್ಲಿ ಗಣಿ ಇಲಾಖೆ ಅಧಿಕಾರಿ ಕೆ.ಎಸ್‌ ಪ್ರತಿಮಾ ಅಂತ್ಯಸಂಸ್ಕಾರ

ಬೆಂಗಳೂರಿನ ದೊಡ್ಡಕಲ್ಲಸಂದ್ರದ ಮನೆಯಲ್ಲಿ ಕೊಲೆಯಾಗಿದ್ದ ಹಿರಿಯ ಗಣಿ ಮತ್ತು ಭೂ ವಿಜ್ಞಾನಿ ಪ್ರತಿಮಾ
Published 6 ನವೆಂಬರ್ 2023, 14:47 IST
Last Updated 6 ನವೆಂಬರ್ 2023, 14:47 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಬೆಂಗಳೂರಿನ ದೊಡ್ಡಕಲ್ಲಸಂದ್ರದ ಮನೆಯಲ್ಲಿ ಕೊಲೆಯಾಗಿದ್ದ ಹಿರಿಯ ಗಣಿ ಮತ್ತು ಭೂ ವಿಜ್ಞಾನಿ ಪ್ರತಿಮಾ ಅಂತ್ಯಸಂಸ್ಕಾರ ಪಟ್ಟಣದಲ್ಲಿ ಸೋಮವಾರ ನಡೆಯಿತು.

ತುಡ್ಕಿ ಗ್ರಾಮದ ಸ್ವಗೃಹದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಅಂತಿಮ ದರ್ಶನ ಪಡೆದರು. ಪುತ್ರ ಪಾರ್ಥ ಅಗ್ನಿಸ್ಪರ್ಶ ಮಾಡಿದರು. ಪತಿ ಸತ್ಯನಾರಾಯಣ ಸೇರಿದಂತೆ ಕುಟುಂಬದವರು, ಸಾರ್ವಜನಿಕರು ಇದ್ದರು.

ವಿಜಯದಶಮಿಯ ಹಿಂದಿನ ದಿನ ತುಡ್ಕಿಯಲ್ಲಿ ನಿರ್ಮಿಸಿದ್ದ ನೂತನ ಮನೆಯ ಗೃಹಪ್ರವೇಶ ನಡೆದಿತ್ತು. ಸಮಾರಂಭದಲ್ಲಿ ಪ್ರತಿಮಾ ಸಂಭ್ರಮದಿಂದ ಭಾಗವಹಿಸಿದ್ದರು. ಕೇವಲ 15 ದಿನದಲ್ಲೇ ಪ್ರತಿಮಾ ಕೊಲೆಯಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT