ಬೆಂಗಳೂರು: ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಲ್ಲಿ ಇಬ್ಬರು ಶತಾಯುಷಿಗಳು. ಅದೂ ಸಹ ಉಡುಪಿಯ ಹಿರಿಯಡಕದವರು!

ಹಿರಿಯಡಕ ಬಳಿಯ ಗುಡ್ಡೆಯಂಗಡಿ ನಿವಾಸಿಯಾಗಿರುವ ಜಾನಪದ ಕಲಾವಿದ ಗುರುವ ಕೊರಗ 100 ವರ್ಷಗಳನ್ನು ಕಂಡವರು. ಏಪ್ರಿಲ್ 14ರಂದು ಪ್ರಜಾವಾಣಿಗೆ ನೀಡಿದ್ದ ಸಂದರ್ಶನದಲ್ಲಿ ತಮ್ಮ ಶತಮಾನದ ಅನುಭವವನ್ನು ತೆರೆದಿಟ್ಟಿದ್ದಾರೆ.

ಕರಾವಳಿಯ ಬುಡಕಟ್ಟು ಜನಾಂಗದ ಕೊರಗರು ಅಸ್ಪೃಶ್ಯತೆಯನ್ನು ಇನ್ನಿಲ್ಲದಂತೆ ಅನುಭವಿಸಿರುವ ಸಮುದಾಯ. ಈ ಸಮುದಾಯದವರಾದ ಗುರುವ ಕೊರಗ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.

ಸಂದರ್ಶನ ನಿರೂಪಣೆಯ ಪೂರ್ಣ ಪಾಠ: ಗುರುವ ಕೊರಗ ಕರಾವಳಿಯ ನಿಜ ಮಾದರಿ

‘ನನಗೆ ನೂರು ವರ್ಷ ದಾಟಿತಾ? ನನ್ನೊಡನೆ ಇದ್ದವರು ಹಾಗೆ ಹೇಳುತ್ತಾರೆ. ನನ್ನ ಸಮಕಾಲೀನರ ವಯಸ್ಸಿಗೆ ಹೋಲಿಕೆ ಮಾಡಿ ಈ ಲೆಕ್ಕ ಹೇಳುತ್ತಾರೆ. ಆಗಿರಬಹುದೇನೋ!’ ಹೀಗೆಂದು ಪ್ರಜಾವಾಣಿ ಜತೆ ತಮ್ಮ ನೆನಪುಗಳನ್ನು ಈಚೆಗೆ ಹಂಚಿಕೊಂಡಿದ್ದರು ಗುರುವ ಕೊರಗ ಅವರು.

ಇದನ್ನೂ ಓದಿ:ನ್ಯಾಯಮೂರ್ತಿ ಎಚ್.ಎಲ್. ದತ್ತು ಸೇರಿ 63 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

ಇನ್ನೊಬ್ಬ ಹಿರಿಯರು ‘ಮದ್ದಲೆ ಮಾಂತ್ರಿಕ’ ಎಂದೇ ಖ್ಯಾತರಾಗಿರುವ ಹಿರಿಯಡಕ ಗೋಪಾಲ ರಾವ್. 1919ರಲ್ಲಿ ಜನಿಸಿದ ಇವರು ನೂರರ ವಸಂತಕ್ಕೆ ಕಾಲಿಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.