ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳದಲ್ಲಿ ಸಿಲುಕಿರುವ ರಾಜ್ಯದ ಯಾತ್ರಿಗಳ ರಕ್ಷಣೆಗೆ ಸರ್ಕಾರ ಬದ್ಧ: ದೇಶಪಾಂಡೆ

Last Updated 3 ಜುಲೈ 2018, 6:24 IST
ಅಕ್ಷರ ಗಾತ್ರ

ಬೆಂಗಳೂರು:ನೇಪಾಳದಲ್ಲಿ ಸಿಲುಕಿರುವ ರಾಜ್ಯದ ಯಾತ್ರಿಗಳನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನವನ್ನು ಸರ್ಕಾರ ಮಾಡಲಿದೆ ಎಂದು ಕಂದಾಯ ಸಚಿವ ಆರ್. ವಿ. ದೇಶಪಾಂಡೆ ಸದನಕ್ಕೆ ಮಾಹಿತಿ ನೀಡಿದರು.

ಬಜೆಟ್ ಅಧಿವೇಶನದ ವಿಧಾಸಭೆ ಕಲಾಪ ಎರಡನೇ ದಿನವಾದ ಮಂಗಳವಾರ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿ ಮಾತನಾಡಿದ ಬಿಜೆಪಿ ಶಾಸಕವಿಶ್ವೇಶ್ವರ ಹೆಗಡೆ ಕಾಗೇರಿನೇಪಾಳದ ಸಿನಿಕೋಟ್‌ ಪ್ರದೇಶದಲ್ಲಿ ಸಿಲುಕಿರುವ ರಾಜ್ಯದ ಯಾತ್ರಿಗಳ ನೆರವಿಗೆ ಕೂಡಲೇ ಧಾವಿಸುವಂತೆ ಆಗ್ರಹಿಸಿದರು.ಅಗತ್ಯ ಬಿದ್ದರೆ ಹೆಲಿಕಾಫ್ಟರ್‌ ಸೇವೆಯನ್ನು ಕಲ್ಪಿಸುವಂತೆ ಕಾಗೇರಿ ಮನವಿ ಮಾಡಿದರು.

ನೇಪಾಳದಲ್ಲಿ ಸಿಲುಕಿರುವ ರಾಜ್ಯದ ಯಾತ್ರಿಗಳನ್ನು ಕರೆತರುವಲ್ಲಿ ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ, ಈಗಾಗಲೇ ನೇಪಾಳದ ರಾಯಭಾರಿ ಕಚೇರಿ ಜೊತೆಯಲ್ಲಿ ಚರ್ಚಿಸಲಾಗಿದ್ದು ನೇಪಾಳ ಸೇನೆ ಕಾರ್ಯಾಚರಣೆ ಮಾಡುತ್ತಿದ್ದೆ ಎಂದು ಆರ್‌, ವಿ ದೇಶಪಾಂಡೆ ಸದನಕ್ಕೆ ಮಾಹಿತಿ ನೀಡಿದರು. ಯಾತ್ರಿಗಳ ರಕ್ಷಣೆಗೆ ಹೆಲಿಕಾಫ್ಟರ್‌ ಬಳಕೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಅವರು ವಿವರಿಸಿದರು.

ರಾಜ್ಯಪಾಲರ ಭಾಷಣದ ಮೇಲೆ ಸದನದಲ್ಲಿ ಚರ್ಚೆ ಆರಂಭವಾಗಿದ್ದು, ಕಾಂಗ್ರೆಸ್‌ ಶಾಸಕ ಈಶ್ವರ ಖಂಡ್ರೆ ಅವರು ಮಾತನಾಡಿದರು. ರೈತರ ಏಳಿಗೆಯೇ ಸರ್ಕಾರದ ಗುರಿ, ರೈತರೇ ಆತ್ಮಹತ್ಯೆಯತ್ತ ಮುಖಮಾಡಬೇಡಿ’ ಎಂಬ ಸರ್ಕಾರದ ನಿಲುವನ್ನು ಅವರು ಸಮರ್ಥಿಸಿಕೊಂಡರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರ ರೈತರ ಏಳಿಗೆಗೆ ಕಟಿಬದ್ದವಾಗಿದ್ದು, ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಆದ್ಯತೆ ನೀಡಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT