ಒಂದು ದಶಕ ವೇತನ ರಹಿತ ಸೇವೆಯ ನಂತರ ಕೆಲಸ ಕಾಯಂ ಆಗಿತ್ತು. ಕಾರ್ಯಭಾರದ ಕೊರತೆಯ ಕಾರಣ 2018ರಿಂದ ಸರ್ಕಾರಿ ಕಾಲೇಜಿಗೆ ನಿಯೋಜನೆಗೊಂಡಿದ್ದೆ. ಈಗ ಕೆಲಸದಿಂದಲೇ ಬಿಡುಗಡೆ ಮಾಡಿದ್ದಾರೆ. ಬದುಕು ಬೀದಿಗೆ ಬಿದ್ದಿದೆ.
-ಕೆ.ಕೆ. ಗೌಡ, ಬೆಂಗಳೂರು
ಕಾರ್ಯಭಾರ ಕಡಿಮೆ ಇರುವ ಅನುದಾನಿತ ಉಪನ್ಯಾಸಕರನ್ನು ಕೆಲಸದಿಂದ ಬಿಡುಗಡೆ ಮಾಡುವಂತೆ ಹೊರಡಿಸಿದ ಆದೇಶ ಹಿಂಪಡೆಯಬೇಕು. ಸೇವಾ ಭದ್ರತೆ ಒದಗಿಸಬೇಕು.
-ಎ.ಎಚ್. ನಿಂಗೇಗೌಡ, ಅಧ್ಯಕ್ಷ, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ