ಹಾವೇರಿ: ರಾಜ್ಯದ ವಿವಿಧ ಗ್ರಾಮ ಪಂಚಾಯಿತಿಗಳು, ಕುಡಿಯುವ ನೀರು ಸರಬರಾಜು ಮತ್ತು ಬೀದಿದೀಪ ಸ್ಥಾವರಗಳಿಗೆ ಸಂಬಂಧಿಸಿದಂತೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ₹3,139 ಕೋಟಿ ಬಾಕಿ ಉಳಿಸಿಕೊಂಡಿವೆ.

ರಾಜ್ಯದಲ್ಲಿ ಒಟ್ಟು 6022 ಗ್ರಾಮ ಪಂಚಾಯಿತಿಗಳಿದ್ದು, ಈ ಪೈಕಿ ಬೆರಳೆಣಿಕೆಯಷ್ಟು ಮಾತ್ರ ವಿದ್ಯುತ್ ಬಿಲ್ ಪಾವತಿಸಿವೆ.

ಕೋಲಾರದಲ್ಲಿ ಅತಿ ಹೆಚ್ಚು ಬಾಕಿ: ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಕೋಲಾರ ಜಿಲ್ಲೆ ₹349 ಕೋಟಿ, ಚಿಕ್ಕಬಳ್ಳಾಪುರ ಜಿಲ್ಲೆ ₹310 ಕೋಟಿ ಹಾಗೂ ತುಮಕೂರು ಜಿಲ್ಲೆಯ ಗ್ರಾಮ ಪಂಚಾಯಿತಿಗಳು ₹282 ಕೋಟಿ ಬಾಕಿ ಉಳಿಸಿಕೊಂಡಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಬಾಕಿ ಉಳಿಸಿಕೊಂಡ ಅಗ್ರ ಮೂರು ಸ್ಥಾನ ಪಡೆದಜಿಲ್ಲೆಗಳಾಗಿವೆ.

ವಿದ್ಯುತ್ ಸರಬರಾಜು ಕಂಪನಿಗಳಿಗೆ ಬಾಕಿ ಮೊತ್ತ ಪಾವತಿಸಲುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಜನವರಿಯಿಂದ ಹಲವಾರು ಬಾರಿ ಸೂಚನೆ ನೀಡಿದ್ದರೂ ಗ್ರಾಮ ಪಂಚಾಯಿತಿಗಳು ಕ್ರಮವಹಿಸಿಲ್ಲ.‘ಪಂಚತಂತ್ರ’ ತಂತ್ರಾಂಶದಲ್ಲೂ ಪಾವತಿಸಬೇಕಾದ ಬಾಕಿ ಮೊತ್ತದ ವಿವರವನ್ನು ತಪ್ಪಾಗಿ ನಮೂದಿಸಲಾಗಿದೆ ಎಂದು ಹೆಸ್ಕಾಂ ಅಧಿಕಾರಿಯೊಬ್ಬರು ದೂರಿದರು.

ಬಾಕಿ ಮೊತ್ತ ಪಾವತಿಸಿ: ಪ್ರಸ್ತುತ ಗ್ರಾಮ ಪಂಚಾಯಿತಿಗಳ ‘ಎಸ್ಕ್ರೊ’ ಖಾತೆಗಳಲ್ಲಿ ಸುಮಾರು ₹425 ಕೋಟಿ ಅನುದಾನವಿದೆ. ಇದರ ಜತೆಗೆ 14 ಮತ್ತು 15ನೇ ಹಣಕಾಸು ಆಯೋಗದಡಿ ವಿದ್ಯುತ್ ಬಿಲ್ ಬಾಕಿ ಪಾವತಿಗಾಗಿ ನಿಗದಿಪಡಿಸಿರುವ ಒಟ್ಟು ₹796 ಕೋಟಿ ಅನುದಾನವನ್ನು ಸೇರಿಸಿ, ಒಟ್ಟು ₹1,222 ಕೋಟಿಯನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ಶೀಘ್ರ ಪಾವತಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅನುದಾನದ ಕೊರತೆ: ಒಟ್ಟು ವಿದ್ಯುತ್ ಬಾಕಿ ಮೊತ್ತ ₹3,139 ಕೋಟಿಯಲ್ಲಿ ಗ್ರಾಮ ಪಂಚಾಯಿತಿಗಳು ₹1,222 ಕೋಟಿ ಪಾವತಿಸಿದರೂ, ಇನ್ನೂ ₹1,917 ಕೋಟಿ ಅನುದಾನದ ಕೊರತೆ ಕಾಡುತ್ತದೆ. ಬಾಕಿ ಅನುದಾನವನ್ನು ಯಾವ ರೀತಿ ಸರಿದೂಗಿಸಬೇಕು ಎಂಬ ಚಿಂತೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒಗಳು ತೊಡಗಿದ್ದಾರೆ ಎನ್ನಲಾಗುತ್ತಿದೆ.

ಪರಿಷ್ಕೃತ ಬಿಲ್ ನೀಡಲು ಮನವಿ
ಬೀದಿದೀಪ ಮತ್ತು ಕುಡಿಯುವ ನೀರು ಸರಬರಾಜಿಗೆ ಸಂಬಂಧಪಟ್ಟಂತೆ ಕೆಲವೊಂದು ಕಡೆ ‘ಹೆಸ್ಕಾಂ’ನವರು ಮೀಟರ್ ಅಳವಡಿಸಿರಲಿಲ್ಲ. ಹೀಗಾಗಿ ಅಂದಾಜು ಬಿಲ್ ಅನ್ನೇ ಇಷ್ಟು ದಿನ ಕೊಡುತ್ತಿದ್ದರು. ಮೋಟಾರ್ ಚಾಲನೆಯಲ್ಲಿ ಇಲ್ಲದಿದ್ದರೂ ಹಾಗೂ ಬೀದಿದೀಪ ಬೆಳಗದಿದ್ದರೂ ಬಿಲ್ ಮಾತ್ರ ಬರುತ್ತಿತ್ತು. ಹೀಗಾಗಿ ಬಿಲ್ ಅನ್ನು ಪುನರ್ ಪರಿಶೀಲಿಸಲು ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹಾವೇರಿ ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ ಹೇಳಿದರು.

ಪರಿಷ್ಕೃತ ಬಿಲ್ ನೀಡಿದರೆ, ಹಾವೇರಿ ಜಿಲ್ಲೆಯಿಂದ ಕೊಡಬೇಕಿರುವ ₹100 ಕೋಟಿ ಬಾಕಿ ಮೊತ್ತ ಕಡಿಮೆಯಾಗಲಿದೆ. ಒಟ್ಟು 224 ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು ವಿದ್ಯುತ್ ಬಿಲ್ ಬಾಕಿ ಮೊತ್ತ ಪಾವತಿಸಿವೆ ಎಂದು ತಿಳಿಸಿದರು.

ಯಾವ ನಿಗಮಕ್ಕೆ ಎಷ್ಟು ಬಾಕಿ? (ಕೋಟಿಗಳಲ್ಲಿ)
ಬೆಸ್ಕಾಂ ₹1854
ಮೆಸ್ಕಾಂ ₹60
ಹೆಸ್ಕಾಂ ₹292
ಜೆಸ್ಕಾಂ ₹743
ಸೆಸ್ಕ್ಗೆ ₹188

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.