ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೂರಕ ಅಂದಾಜು: ಮಠ, ದೇವಸ್ಥಾನಕ್ಕೆ ₹30 ಕೋಟಿ ಅನುದಾನ

₹11,803 ಕೋಟಿ ಪೂರಕ ಅಂದಾಜು ಮಂಡನೆ
Published : 17 ಮಾರ್ಚ್ 2020, 21:45 IST
ಫಾಲೋ ಮಾಡಿ
Comments

ಬೆಂಗಳೂರು: ಮುಂದಿನ ವರ್ಷದ ಬಜೆಟ್‌ನಲ್ಲಿ ಮಠ, ದೇವಸ್ಥಾನಗಳಿಗೆ ಅನುದಾನ ಘೋಷಣೆ ಮಾಡದೇ ಇರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, 2019–20ನೇ ಸಾಲಿನ ಮೂರನೇ ಪೂರಕ ಅಂದಾಜಿನಲ್ಲಿ ಮಠಗಳ ಮೇಲೆ ಮಮಕಾರ ತೋರಿದ್ದಾರೆ.

ಬಜೆಟ್‌ನಲ್ಲಿ ಅನುಮೋದನೆ ಪಡೆದಿದ್ದಕ್ಕಿಂತ ಹೆಚ್ಚುವರಿಯಾಗಿ ಖರ್ಚು ಮಾಡಬೇಕಾಗಿರುವ ₹11,803 ಕೋಟಿ ಮೊತ್ತದ ಪೂರಕ ಅಂದಾಜನ್ನು ಯಡಿಯೂರಪ್ಪ ಅವರು ವಿಧಾನಮಂಡಲದಲ್ಲಿ ಮಂಗಳವಾರ ಮಂಡಿಸಿದರು.

ಚಿತ್ರದುರ್ಗದ ಭೋವಿ ಗುರುಪೀಠದ ಶ್ರೀ ಸಿದ್ದರಾಮೇಶ್ವರ ಮಹಾಸಂಸ್ಥಾನಕ್ಕೆ ₹5 ಕೋಟಿ, ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಜೀವನ, ಆದರ್ಶ, ಸಾಧನೆಗಳ ಪರಿಚಯಿಸುವ ವಸ್ತು ಸಂಗ್ರಹಾಲಯ ಕಟ್ಟಡಕ್ಕೆ ₹10 ಕೋಟಿ,ಗುರುಗುಂಡ ಬ್ರಹ್ಮೇಶ್ವರ ಮಠದ ಅಭಿವೃದಧಿಗೆ ₹5 ಕೋಟಿ ಹಾಗೂಕಲಬುರ್ಗಿ ಜಿಲ್ಲೆ ಅಫಜಲ್‌ಪುರ ತಾಲ್ಲೂಕಿನ ದೇವಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ಅಭಿವೃದ್ಧಿಗೆ ₹10 ಕೋಟಿ ಒದಗಿಸಲಾಗಿದೆ.

ತಮ್ಮ ಸ್ವಕ್ಷೇತ್ರ ಶಿಕಾರಿಪುರ ತಾಲ್ಲೂಕು ವ್ಯಾಪ್ತಿಯಲ್ಲಿ ದೇವರಾಜು ಅರಸು ನಿಗಮದ ಯೋಜನೆಗಳ ಅನುಷ್ಠಾನಕ್ಕೆ ಯಡಿಯೂರಪ್ಪ ₹3.27 ಕೋಟಿ ನೀಡಿದ್ದಾರೆ.

ನಾಲ್ಕು ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತರು, 30 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಹೊಸ ವಾಹನ ಖರೀದಿಸಲು ₹4.76 ಕೋಟಿ, ಶಾಸಕರಿಗೆ ವಾಹನ ಖರೀದಿಸಲು ₹4.99 ಕೋಟಿ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ವಾಹನ ಖರೀದಿಸಲು ₹1.47 ಕೋಟಿಯನ್ನು‍‍ಪೂರಕ ಅಂದಾಜಿನಲ್ಲಿ ಒದಗಿಸಲಾಗಿದೆ.

ಸಾಲುಮರದ ತಿಮ್ಮಕ್ಕ ಅವರಿಗೆ ಸಾಲು ಮರ ಬೆಳೆಸಿದ್ದಕ್ಕೆ ಧನ ಸಹಾಯ ನೀಡಲು ₹2 ಕೋಟಿ, ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ₹3 ಕೋಟಿ ಹಾಗೂ ಸರ್ಕಾರಿ ನೌಕರರ ಜಿಲ್ಲಾ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟ–₹1 ಕೋಟಿ ಒದಗಿಸಲಾಗಿದೆ.

ಕೆರೆ ಪುನರ್‌ನಿರ್ಮಾಣಕ್ಕೆ 670 ಕೋಟಿ: ಮಹಾಮಳೆಯಿಂದ ಹಾನಿಗೊಳಗಾದ ಕೆರೆಗಳ ಪುನರ್‌ನಿರ್ಮಾಣ ಕಾಮಗಾರಿಗೆ ಒಟ್ಟು ₹670 ಕೋಟಿ ಒದಗಿಸಲಾಗಿದೆ.

ಈ ಪೈಕಿ ಹೊಸ ಕೆರೆಗಳ ಕಾಮಗಾರಿಗಳಡಿ ₹44.70 ಕೋಟಿ, ಕೆರೆ ಆಧುನೀಕರಣ ಕಾಮಗಾರಿಗಳಡಿ ₹118 ಕೋಟಿ, ಏತನೀರಾವರಿ ಕಾಮಗಾರಿಗಳಡಿ ₹145.30 ಕೋಟಿ, ಅಣೆಕಟ್ಟು ನಿರ್ಮಾಣ ಕಾಮಗಾರಿಗಳಡಿ ₹285 ಕೋಟಿ, ಪ್ರವಾಹ ನಿಯಂತ್ರಣ ಸಣ್ಣ ಕಾಮಗಾರಿಗಳಡಿ ₹77 ಕೋಟಿ ಮೊತ್ತದ ಯೋಜನೆಗಳು ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT