ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಂಜಿನ್‌ ಬೇ ಡೋರ್‌’ ತಂತ್ರಜ್ಞಾನ ವರ್ಗಾವಣೆ

Published 22 ಏಪ್ರಿಲ್ 2024, 22:00 IST
Last Updated 22 ಏಪ್ರಿಲ್ 2024, 22:00 IST
ಅಕ್ಷರ ಗಾತ್ರ

ಬೆಂಗಳೂರು: ತೇಜಸ್‌ ಎಂಕೆ 1 ಎ ಲಘು ಯುದ್ಧ ವಿಮಾನಕ್ಕೆ ‘ಎಂಜಿನ್‌ ಬೇ ಡೋರ್‌’ ತಯಾರಿಸುವ ತಂತ್ರಜ್ಞಾನವನ್ನು ಸಿಎಸ್‌ಐಆರ್‌–ಎನ್‌ಎಎಲ್‌  ಹಿಂದುಸ್ಥಾನ್ ಏರೋನಾಟಿಕಲ್ ಸಂಸ್ಥೆಗೆ (ಎಚ್‌ಎಎಲ್‌) ವರ್ಗಾವಣೆ ಮಾಡಿದೆ.

ಸಿಎಸ್‌ಐಆರ್‌– ಎನ್‌ಎಎಲ್‌ ನಿರ್ದೇಶಕ ಡಾ. ಅಭಯ್‌ ಎ ಪಾಶಿಲ್ಕರ್‌ ಅವರು ಎಚ್‌ಎಎಲ್‌ ಹೆಲಿಕಾಪ್ಟರ್‌ ಕಾಂಪ್ಲೆಕ್ಸ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ಬುವೇಲನ್ ಅವರಿಗೆ ತಂತ್ರಜ್ಞಾನ ವರ್ಗಾವಣೆ ಪತ್ರ ಹಸ್ತಾಂತರಿಸಿದರು.

ಕಳೆದ ಮೂರು ದಶಕಗಳಿಂದ ಸಿಎಸ್‌ಐಆರ್‌– ಎನ್‌ಎಎಲ್‌ ತೇಜಸ್‌ ಯುದ್ಧ ವಿಮಾನಕ್ಕೆ ಹಲವು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿಕೊಟ್ಟಿದೆ. ಈಗ ಅತ್ಯಂತ ಸೂಕ್ಷ್ಮ ತಂತ್ರಜ್ಞಾನದ ವರ್ಗಾವಣೆ ಮಾಡಲಾಗಿದೆ ಎಂದು ಸಿಎಸ್‌ಐಆರ್‌ ಪ್ರಕಟಣೆ ತಿಳಿಸಿದೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT