ಪ್ರತಿವಾದಿ ಕೇಂದ್ರ ಗೃಹ ಸಚಿವಾಲಯದ ಪರ ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಮಂಡಿಸಿದ್ದ, ‘ಕೊಲೆಯಾದ ಹರ್ಷ, ಗೋ ಸಂರಕ್ಷಣೆ ಹಾಗೂ ಭಜರಂಗದಳದ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ಇದೇ ಕಾರಣಕ್ಕೆ ಆತನನ್ನು ಸಂಚು ರೂಪಿಸಿ ಹತ್ಯೆ ಮಾಡಲಾಗಿದೆ. ನಾಗರಿಕ ಸಮಾಜವನ್ನು ಭಯದ ಕೂಪಕ್ಕೆ ದೂಡುವಂತಹ ವಾತಾವರಣ ನಿರ್ಮಿಸುವುದು ಆರೋಪಿಗಳ ಉದ್ದೇಶವಾಗಿತ್ತು. ಇದೊಂದು ಭಯೋತ್ಪಾದಕ ಕೃತ್ಯ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ, ಎನ್ಐಎ ತನಿಖೆ ನಡೆಸಲು ಇದು ಯೊಗ್ಯವಾದ ಪ್ರಕರಣ’ ಎಂಬ ವಾದವನ್ನು ನ್ಯಾಯಪೀಠ ಎತ್ತಿ ಹಿಡಿದಿದೆ. ಎನ್‌ಐಎ ಪರ ಪಿ.ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು.