ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಐಐಎಸ್‌ಸಿ ಉತೃಷ್ಟತಾ ಕೇಂದ್ರಕ್ಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಭೇಟಿ

Published : 2 ಅಕ್ಟೋಬರ್ 2024, 15:29 IST
Last Updated : 2 ಅಕ್ಟೋಬರ್ 2024, 15:29 IST
ಫಾಲೋ ಮಾಡಿ
Comments

ಬೆಂಗಳೂರು: ನಗರದ ಎಚ್‌ಎಂಟಿ ಕ್ಯಾಂಪಸ್‌ನಲ್ಲಿ ಇರುವ, ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಉತ್ಕೃಷ್ಟತಾ ಕೇಂದ್ರಕ್ಕೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಭೇಟಿ ನೀಡಿ, ವಿಜ್ಞಾನಿಗಳ ಜತೆಗೆ ಮಾತುಕತೆ ನಡೆಸಿದರು.

ಗಾಂಧಿ ಜಯಂತಿಯ ಭಾಗವಾಗಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ಉತ್ಕೃಷ್ಟತಾ ಕೇಂದ್ರದಲ್ಲಿ ವಿಜ್ಞಾನಿಗಳ ಜತೆಗೆ ಸಂವಾದ ನಡೆಸಿದರು. ಕೇಂದ್ರದಲ್ಲಿ ಇರುವ ‘ಆರ್ಟ್‌ ಪಾರ್ಕ್‌’ನಲ್ಲಿ ಪ್ರದರ್ಶಿಸಲಾಗಿದ್ದ ಡ್ರೋನ್‌, ರೋಬೊಗಳನ್ನು ವೀಕ್ಷಿಸಿದರು. ತಂತ್ರಜ್ಞರ ನೆರವಿನೊಂದಿಗೆ ಡ್ರೋನ್‌ ಚಲಾಯಿಸಿದರು.

ಪ್ರದರ್ಶನದಲ್ಲಿ ಇರಿಸಲಾಗಿದ್ದ ಏಥಾನ್‌ ಕಂಪನಿಯ ಅದ್ಭುತ್ 6x6 ಎಟಿವಿ (ಆಲ್‌ ಟೆರೇನ್‌ ವೆಹಿಕಲ್‌) ಕುರಿತು ಕುಮಾರಸ್ವಾಮಿ ಮಾಹಿತಿ ಪಡೆದುಕೊಂಡರು. ಕೃಷಿ ಉದ್ದೇಶಕ್ಕೆ ಬಳಸಬಹುದಾದ ಈ ವಾಹನವನ್ನು ಎಂತಹುದೇ ದುರ್ಗಮ ಪ್ರದೇಶದಲ್ಲಿಯೂ ಬಳಸಬಹುದು.  ಅಡಿಕೆ, ಕಾಫಿ, ಚಹಾ, ತೆಂಗು ಸೇರಿದಂತೆ ವಾಣಿಜ್ಯ ಬೆಳೆಗಳ ರೈತರಿಗೆ ಈ ವಾಹನ ಅನುಕೂಲವಾಗುತ್ತದೆ ಎಂದು ತಂತ್ರಜ್ಞರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT