ಕಾರವಾರ: ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ಮೂರು ದಿನಗಳ ಹಿಂದೆ ಅಸ್ವಸ್ಥ ಸ್ಥಿತಿಯಲ್ಲಿ ಉಪಗ್ರಹ ಟ್ಯಾಗಿಂಗ್ ಮತ್ತು ಜಿಪಿಎಸ್ ಟ್ರಾನ್ಸ್ಮೀಟರ್ ಸಹಿತ ಪತ್ತೆಯಾಗಿದ್ದ ಹ್ಯೂಗ್ಲಿನ್ಸ್ ಸೀ ಗಲ್ ಗುರುವಾರ ಸಾವನ್ನಪ್ಪಿದೆ.

ಶ್ರೀಲಂಕಾದ ವನ್ಯಜೀವಿ ಸಂರಕ್ಷಣಾ ಸಂಸ್ಥೆ ಸೀ ಗಲ್ನ ಚಲನವಲನ ಸಂಶೋಧನೆಗೆ ಬಳಸಿದ್ದ ಪಕ್ಷಿ ಇದಾಗಿತ್ತು. ಉಪಗ್ರಹ ಟ್ಯಾಗಿಂಗ್ ಮತ್ತು ಜಿಪಿಎಸ್ ಟ್ರಾನ್ಸ್ಮೀಟರ್ ಹೊತ್ತುಕೊಂಡೇ 9 ತಿಂಗಳಿನಿಂದ 12 ಸಾವಿರ ಕಿ.ಮೀ ದೂರದವರೆಗೆ ಹಾರಾಟ ನಡೆಸಿದ್ದ ಪಕ್ಷಿಯು ಇಲ್ಲಿನ ಅರಣ್ಯ ಇಲಾಖೆಯ ಕೋಸ್ಟಲ್ ಮರೈನ್ ವಿಭಾಗದ ಸಪರ್ದಿಯಲ್ಲಿ ಚಿಕಿತ್ಸೆ ಪಡೆಯುವಾಗಲೇ ಅಸುನೀಗಿದೆ.
.ಟ್ರಾನ್ಸ್ಮೀಟರ್ ಹೊತ್ತು 12 ಸಾವಿರ ಕಿ.ಮೀ ಹಾರಿದ ಹಕ್ಕಿ .
‘ಪಕ್ಷಿಯು ಹಾರಲಾಗದೆ ಒದ್ದಾಡುತ್ತಿದ್ದ ವೇಳೆ ಸಂರಕ್ಷಣೆಗೆ ಕರೆತರಲಾಯಿತು. ಪಶು ವೈದ್ಯರು ಚಿಕಿತ್ಸೆ ನೀಡಿದ್ದರು. ಶ್ರೀಲಂಕಾದ ವನ್ಯಜೀವಿ ಸಂರಕ್ಷಣೆ ಸಂಸ್ಥೆಯ ಒಪ್ಪಿಗೆ ಮೇರೆಗೆ ಅದಕ್ಕೆ ಅಳವಡಿಸಿದ್ದ ಉಪಕರಣ ತೆರವುಗೊಳಿಸಲಾಯಿತು. ಆದರೂ, ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಅನ್ನನಾಳಕ್ಕೆ ಗಂಭೀರ ಗಾಯವಾಗಿದ್ದರಿಂದ ಪಕ್ಷಿಗೆ ಆಹಾರ ಸೇವಿಸಲು ಆಗುತ್ತಿರಲಿಲ್ಲ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಪಶು ವೈದ್ಯರು ತಿಳಿಸಿದ್ದಾರೆ’ ಎಂದು ಅರಣ್ಯ ಇಲಾಖೆ ಕೋಸ್ಟಲ್ ಮರೈನ್ ವಿಭಾಗದ ಆರ್ಎಫ್ಒ ಕಿರಣ್ ಮನವಾಚಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.