ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪದವಿ ಮಧ್ಯೆ ಕಾಲೇಜು ಬದಲಾವಣೆಗೆ ಅವಕಾಶ ಕಲ್ಪಿಸಿದ ಉನ್ನತ ಶಿಕ್ಷಣ ಇಲಾಖೆ

Last Updated 1 ಮಾರ್ಚ್ 2023, 0:15 IST
ಅಕ್ಷರ ಗಾತ್ರ

ಬೆಂಗಳೂರು: ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮೂರು, ಐದು, ಏಳನೇ ಸೆಮಿಸ್ಟರ್‌ಗಳ ಪ್ರವೇಶಕ್ಕೂ ಮೊದಲು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳು ಅಥವಾ ಇತರೆ ಯಾವುದೇ ಸಾರ್ವಜನಿಕ ವಿಶ್ವವಿದ್ಯಾಲಯಗಳ ಕಾಲೇಜುಗಳಿಗೆ ವರ್ಗಾವಣೆ ಪಡೆಯಲು ಉನ್ನತ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ.

ಈ ಕುರಿತು ಇಲಾಖೆ ಆದೇಶ ಹೊರಡಿಸಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಎರಡು ಸೆಮಿಸ್ಟರ್‌ ಪೂರೈಸಿದವರು ಓದು ಅರ್ಧಕ್ಕೆ ನಿಲ್ಲಿಸಿದರೆ ಅವರಿಗೆ ಕೆಳಹಂತದ ಪದವಿ ಪ್ರಮಾಣಪತ್ರ, ನಾಲ್ಕು ಸೆಮಿಸ್ಟರ್‌ ಪೂರೈಸಿದವರಿಗೆ ಡಿಪ್ಲೊಮಾ ಪದವಿ, ಆರು ಸೆಮಿಸ್ಟರ್‌ ಪೂರೈಸಿದರೆ ಪದವಿ, ಎಂಟು ಸೆಮಿಸ್ಟರ್‌ ಪೂರೈಸಿದರೆ ಆನರ್ಸ್‌ ಪದವಿ ಪ್ರದಾನ ಮಾಡಲು ಸೂಚಿಸಲಾಗಿದೆ.

ಯಾವುದೇ ಸೆಮಿಸ್ಟರ್‌ನ ಮಧ್ಯದಲ್ಲೇ ಓದು ನಿಲ್ಲಿಸಿದವರು ಪ್ರವೇಶ ಪಡೆದ ದಿನದಿಂದ ಏಳು ವರ್ಷಗಳ ಒಳಗೆ ಮರು ಪ್ರವೇಶ ಪಡೆಯಬಹುದು. ಎಲ್ಲ ಪ್ರಕ್ರಿಯೆಗಳನ್ನೂ ಯುಯುಸಿಎಂಎಸ್‌ ತಂತ್ರಾಂಶದ ಮೂಲಕ ನಿರ್ವಹಿಸಬೇಕು. ಪ್ರತಿ ವಿದ್ಯಾರ್ಥಿಯ ಕ್ರೆಡಿಟ್‌ ಪಾಯಿಂಟ್‌ಗಳನ್ನು ‘ಅಕಾಡೆಮಿಕ್‌ ಕ್ರೆಡಿಟ್‌ ಬ್ಯಾಂಕ್‌’ ಖಾತೆಯ ಜತೆ ಸಂಯೋಜಿಸಬೇಕು. ವಿದ್ಯಾರ್ಥಿ ಬಯಸಿದರೆ ಏಕ ಕಾಲಕ್ಕೆ ಎರಡು ಪದವಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT