ಬೆಂಗಳೂರು: 'ರಾಜ್ಯದಲ್ಲಿ ಇಬ್ಬರು ಮಕ್ಕಳಲ್ಲಿ ಪತ್ತೆಯಾಗಿರುವ ಹ್ಯೂಮನ್ ಮೆಟಾನ್ಯುಮೊ ವೈರಸ್ (ಎಚ್ಎಂಪಿವಿ) ಹೊಸದಲ್ಲ. ಇದು 2001ರಿಂದ ನಮ್ಮ ದೇಶದಲ್ಲಿದೆ. ಇದರಿಂದ ಯಾವುದೇ ಅಪಾಯವಿಲ್ಲ. ಸಾರ್ವಜನಿಕರು' ಆತಂಕಪಡುವ ಅಗತ್ಯವಿಲ್ಲ' ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

'ಈ ಸಂಬಂಧ ರಾಜ್ಯದಲ್ಲಿ ಆರೋಗ್ಯ ಇಲಾಖೆ ಯಾವುದೇ ಕಠಿಣಕ್ರಮಗಳನ್ನು ಕೈಗೊಳ್ಳುವುದಿಲ್ಲ. ಕೇಂದ್ರದಿಂದಲೂ ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಸೂಚನೆಗಳಿಲ್ಲ. ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ಐಸಿಎಂಆರ್ ಸೂಚನೆಗಳನ್ನು ಅನುಸರಿಸುತ್ತೇವೆ' ಎಂದು ತಿಳಿಸಿದರು.
.ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ HMP ವೈರಸ್ ಪತ್ತೆ: ಆತಂಕ ಇಲ್ಲ ಎಂದ ವೈದ್ಯರು.HMP ವೈರಾಣು ಸೋಂಕು: ಅಹಮದಾಬಾದ್ನ ಆಸ್ಪತ್ರೆಯಲ್ಲಿ 2 ತಿಂಗಳ ಮಗುವಿನಲ್ಲಿ ಪತ್ತೆ.
ಎಚ್ಎಂಪಿವಿ ಎರಡು ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸೋಮವಾರ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಸಾಮಾನ್ಯವಾಗಿ ಐಎಲ್ಐ ಪ್ರಕರಣಗಳಲ್ಲಿ ಶೇ 1 ರಷ್ಟು ಜನರಲ್ಲಿ ಈ ವೈರಸ್ ಕಂಡು ಬರುತ್ತದೆ. ಇಂಥದ್ದೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಕ್ಕಳನ್ನು ಪರೀಕ್ಷೆ ಮಾಡಿದಾಗ, ಎಚ್ಎಂಪಿ ವೈರಾಣು ಪತ್ತೆಯಾಗಿದೆ. ಇಬ್ಬರು ಮಕ್ಕಳಲ್ಲಿ ಮೂರು ತಿಂಗಳ ಮಗು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಡೆಯಾಗಿದೆ. ಎಂಟು ತಿಂಗಳ ಮಗು ಇವತ್ತು ಅಥವಾ ನಾಳೆ ಬಿಡುಗಡೆಯಾಗುತ್ತದೆ. ವೈರಸ್ ಕುರಿತು ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ' ಎಂದು ಸ್ಪಷ್ಟಪಡಿಸಿದರು.

'ಚೀನಾದಲ್ಲಿ ಕಾಣಿಸಿಕೊಂಡಿರುವ ವೈರಸ್ ಬಗ್ಗೆ ಮಾಹಿತಿ ಇಲ್ಲ. ಇಲ್ಲಿ ಕಾಣಿಸಿರುವ ವೈರಸ್ ಅಪಾಯಕಾರಿಯಲ್ಲ. ಆದರೆ ಉಸಿರಾಟದ ಸಮಸ್ಯೆ ಇರುವವರು, ಮಕ್ಕಳು, ಹಿರಿಯ ನಾಗರಿಕರ ಬಗ್ಗೆ ಎಚ್ಚರವಹಿಸಬೇಕು' ಎಂದು ಸಲಹೆ ನೀಡಿದರು.

'ಇದು ಮಾರಣಾಂತಿಕವೂ ಅಲ್ಲ. ಉಸಿರಾಟದ ತೊಂದರೆ ಇರುವವರಿಗೆ, ನ್ಯುಮೋನಿಯಾ ಸಮಸ್ಯೆ ಇರುವವರಿಗೆ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು ಮತ್ತು ಹಿರಿಯರಲ್ಲಿ ಈ ವೈರಸ್ನಿಂದ ಸ್ಬಲ್ಪ ತೊಂದರೆಯಾಗಬಹುದು. ಅಷ್ಟನ್ನು ಹೊರತುಪಡಿಸಿ, ಬೇರೆ ಯಾವುದೇ ಸಮಸ್ಯೆ ಇಲ್ಲ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
.ರಾಜ್ಯದಲ್ಲಿ HMP ವೈರಾಣು ಸೋಂಕು ಪತ್ತೆ ಪ್ರಕರಣ; ಮುಂಜಾಗ್ರತೆಗೆ CM ಸೂಚನೆ.ಕೋವಿಡ್–19 ಹೋಲುವ ಹೊಸ HMP ವೈರಾಣು ಸೋಂಕು ಚೀನಾದಲ್ಲಿ ಉಲ್ಬಣ; ಹೆಚ್ಚಿದ ಆತಂಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.