ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿಯೇ ಹನಿಟ್ರ್ಯಾಪ್‌ನ ಪಿತಾಮಹ’ ಎಂಬ ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ‘ರಾಜ್ಯ ರಾಜಕಾರಣದಲ್ಲಿ ಯಾವ ಪ್ರಾಮುಖ್ಯವೂ ಇಲ್ಲದ ನಾಯಕ’ ಎಂದು ಹರಿಪ್ರಸಾದ್ ಅವರನ್ನು ಜರೆದಿದ್ದಾರೆ. ಇಬ್ಬರೂ ನಾಯಕರು ‘ಎಕ್ಸ್’ನಲ್ಲಿ ಪರಸ್ಪರ ವಿರುದ್ಧ ಕಟು ವಾಕ್ಸಮರ ನಡೆಸಿದ್ದಾರೆ