ಬೆಂಗಳೂರು: ಅವಿಭಜಿತ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ 2006–07ರಿಂದ 2010ರ ಅವಧಿಯಲ್ಲಿ ಒಟ್ಟು 19.07 ಕೋಟಿ ಟನ್ ಕಬ್ಬಿಣದ ಅದಿರು ಅಕ್ರಮ ಸಾಗಣೆಯಿಂದ ₹52,453 ಕೋಟಿ ನಷ್ಟ ಆಗಿದೆ ಎಂದು ಸಚಿವ ಸಂಪುಟ ಉಪ ಸಮಿತಿ ಅಂದಾಜಿಸಿದೆ.

ಗಣಿಗಾರಿಕೆಯಲ್ಲಿ ನಡೆದ ಅಕ್ರಮಗಳ ಕುರಿತು ಲೋಕಾಯುಕ್ತ ನೀಡಿದ್ದ ವರದಿಯ ಅನ್ವಯ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾನೂನು ಸಚಿವ ಎಚ್.ಕೆ. ಪಾಟೀಲ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಈ ವಿವರಗಳಿವೆ.

2006–07ರಿಂದ 2010ರ ಅವಧಿಯಲ್ಲಿ ಅಂದಾಜು 2.98 ಕೋಟಿ ಟನ್ ಕಬ್ಬಿಣದ ಅದಿರು ಅಕ್ರಮವಾಗಿ ರಫ್ತಾಗಿದ್ದು ಅದರಿಂದ ಸರ್ಕಾರಕ್ಕೆ ₹12,228 ಕೋಟಿ ನಷ್ಟವಾಗಿದೆ ಎಂದು ನ್ಯಾಯಮೂರ್ತಿ ಸಂತೋಷ ಹೆಗ್ಡೆ ನೇತೃತ್ವದ ಅಂದಿನ ಲೋಕಾಯುಕ್ತದ ವರದಿ ಹೇಳಿತ್ತು.

ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಿದ್ದ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ 16.09 ಕೋಟಿ ಟನ್ ಅಕ್ರಮ ರಫ್ತಾಗಿದೆ ಎಂದು 2006-07 ಮತ್ತು 2018-19ನೇ ಸಾಲಿನ ಉಪಗ್ರಹ ಚಿತ್ರಗಳ ಮಾಹಿತಿ ಆಧರಿಸಿ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರವು (ಕೆಎಸ್ಆರ್ಎಸ್ಎಸಿ) ಪತ್ತೆ ಮಾಡಿದೆ. ಈ 16.09 ಕೋಟಿ ಟನ್ ಕಬ್ಬಿಣದ ಅದಿರನ್ನು ಸ್ಥಳೀಯವಾಗಿ ಬಳಸಲಾಗಿದೆ ಎಂದು ಪರಿಗಣಿಸಿದರೆ (ಲೋಕಾಯುಕ್ತರ ವರದಿಯಲ್ಲಿ ಪರಿಗಣಿಸಿದಂತೆ ಪ್ರತಿ ಟನ್ಗೆ ಇದ್ದ ರಾಯಧನ ₹2,500) ಸರ್ಕಾರಕ್ಕೆ ₹40,225 ಕೋಟಿ ಆಗಿದೆ. ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಿದ ಪ್ರಮಾಣವನ್ನೂ ಸೇರಿಸಿದರೆ ಸರ್ಕಾರಕ್ಕೆ ಒಟ್ಟು ₹52,453 ಕೋಟಿ ನಷ್ಟ ಆಗಿರುವ ಸಾಧ್ಯತೆ ಇದೆ ಎಂದು ಸಮಿತಿ ಅಂದಾಜಿಸಿದೆ.

ಲೋಕಾಯುಕ್ತರ ವರದಿಯಲ್ಲಿ ಪರಿಗಣಿಸಿದ ಸರಾಸರಿ ರಾಯಧನ ಪ್ರತಿ ಟನ್ಗೆ ₹4,103ರಂತೆ ಲೆಕ್ಕ ಹಾಕಿದರೆ 16.09 ಕೋಟಿ ಟನ್ ಅಕ್ರಮ ಸಾಗಣೆಯಿಂದ ಸರ್ಕಾರಕ್ಕೆ ಆಗಿರುವ ನಷ್ಟ ಒಟ್ಟು ₹66,017.27 ಕೋಟಿ ಎಂದು ಸಮಿತಿಯ ವರದಿ ಉಲ್ಲೇಖಿಸಿದೆ.

ರಾಜ್ಯದಲ್ಲಿ ‘ಬಿ’ ವರ್ಗದ 60 ಮತ್ತು ‘ಸಿ’ ವರ್ಗದ 51 ಸೇರಿ ಒಟ್ಟು 111 ಗಣಿ ಗುತ್ತಿಗೆಗಳಿವೆ. ಕಬ್ಬಿಣದ ಅದಿರನ್ನು ಅಂದಾಜಿಸಲು ಕೇಂದ್ರ ಉನ್ನತಾಧಿಕಾರ ಸಮಿತಿಯ ಸದಸ್ಯ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ರಚಿಸಿದ ‘ಅದಿರು ಮೌಲ್ಯಮಾಪನ ಸಮಿತಿ’ಯು 'ಸಿ' ವರ್ಗದ 51 ಗಣಿಗುತ್ತಿಗೆಗಳ ಪೈಕಿ 13 ಗಣಿ ಗುತ್ತಿಗೆಗಳಲ್ಲಿ ಹೆಚ್ಚುವರಿಯಾಗಿ 4.56 ಕೋಟಿ ಟನ್ ಕಬ್ಬಿಣದ ಅದಿರು ತೆಗೆದಿರುವುದಾಗಿ ಅಂದಾಜಿಸಿದೆ. ಇನ್ನುಳಿದ ‘ಸಿ’ ವರ್ಗದ 38 ಗಣಿ ಗುತ್ತಿಗೆಗಳಿಂದ ರಾಜಧನ ಪಾವತಿಸದೆ 5.14 ಕೋಟಿ ಟನ್ ಅದಿರು ತೆಗೆಯಲಾಗಿದೆ ಎಂದು ಕೆಎಸ್ಆರ್ಎಸ್ಎಸಿ ಅಂದಾಜಿಸಿದೆ.

ಅದಿರು ಮೌಲ್ಯಮಾಪನ ಸಮಿತಿಯು ‘ಬಿ’ ವರ್ಗದ 19 ಗಣಿ ಗುತ್ತಿಗೆಗಳಿಂದ 2.44 ಕೋಟಿ ಟನ್ ಕಬ್ಬಿಣದ ಅದಿರನ್ನು ಅನುಮತಿ ಇಲ್ಲದೆ ಹೆಚ್ಚುವರಿಯಾಗಿ ಹೊರತೆಗೆಯಲಾಗಿದೆ ಎಂದು ಅಂದಾಜಿಸಿದೆ. ಇನ್ನುಳಿದ 'ಬಿ' ವರ್ಗದ 43 ಗಣಿಗುತ್ತಿಗೆಗಳಿಂದ 6.93 ಕೋಟಿ ಟನ್ ಅದಿರು ತೆಗೆದಿರುವುದನ್ನು ಉಪಗ್ರಹ ಚಿತ್ರಗಳ ಮಾಹಿತಿ ಆಧರಿಸಿ ಕೆಎಸ್ಆರ್ಎಸ್ಎಸಿ ಅಂದಾಜಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕಬ್ಬಿಣದ ಅದಿರಿನ ಪ್ರಮಾಣ ಅಂದಾಜಿಸಲು ಕೆಎಸ್ಆರ್ಎಸ್ಎಸಿ ಸಾಕಷ್ಟು ಕಾಲಾವಕಾಶ ತೆಗೆದುಕೊಂಡಿರುವುದು ಅಕ್ರಮದ ತನಿಖೆಯ ಮೇಲೆ ಪರಿಣಾಮ ಬೀರಿದೆ. ಈ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಈ ಸಂಸ್ಥೆಯ ಜವಾಬ್ದಾರಿಯುತ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ‘ಸಿ’ ವರ್ಗದ ಗಣಿ ಗುತ್ತಿಗೆಗಳಿಗೆ ಸಂಬಂಧಿಸಿದ ವರದಿಗಳನ್ನು ಮೂರು ತಿಂಗಳ ಒಳಗಾಗಿ ಅಂತಿಮಗೊಳಿಸಲು ಸೂಚಿಸಬಹುದು ಎಂದೂ ವರದಿ ಹೇಳಿದೆ.

ಗಣಿ ಲೂಟಿಯಿಂದ ಬೊಕ್ಕಸಕ್ಕೆ ಆಗಿರುವ ಕೋಟ್ಯಂತರ ರೂಪಾಯಿ ನಷ್ಟವನ್ನು ಮರಳಿ ಪಡೆಯಲು ವಸೂಲಿ ಆಯುಕ್ತರನ್ನು ನೇಮಿಸಲು ಸರ್ಕಾರ ಉದ್ದೇಶಿಸಿದೆ

-ಎಚ್.ಕೆ. ಪಾಟೀಲ ಕಾನೂನು ಸಚಿವ

ಸ್ವತ್ತು ವಶ ಜಪ್ತಿಗೆ ಮಸೂದೆ

ಅಕ್ರಮ ಗಣಿಗಾರಿಕೆಯಿಂದ ಗಳಿಸಿದ ಸ್ವತ್ತನ್ನು ವಶಪಡಿಸಿಕೊಳ್ಳಲು ಮತ್ತು ಜಪ್ತಿಗಾಗಿ ವಸೂಲಿ ಆಯುಕ್ತರನ್ನು ನೇಮಿಸುವ ಉದ್ದೇಶದಿಂದ ರೂಪಿಸಿದ ಮಸೂದೆಗೆ ವಿಧಾನಸಭೆ ಗುರುವಾರ ಅಂಗೀಕಾರ ನೀಡಿತು. ಗಣಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಪರ ಕಾನೂನು ಸಚಿವ ಎಚ್. ಕೆ .ಪಾಟೀಲ ಅವರು ಈ ಮಸೂದೆಯನ್ನು ಮಂಡಿಸಿದರು. ಮಸೂದೆ ಕುರಿತು ವಿವರಿಸಿದ ಎಚ್.ಕೆ. ಪಾಟೀಲ ‘ಅಕ್ರಮವಾಗಿ ಗಳಿಸಿದ ಸಂಪತ್ತನ್ನು 1964ರ ಕ್ರಿಮಿನಲ್ ವಿಶೇಷ ಆಜ್ಞೆ ಪ್ರಕಾರ ವಶಪಡಿಸಿಕೊಳ್ಳಬಹುದು. ಯಾವುದೇ ಅಕ್ರಮ ಅಥವಾ ಅಪರಾಧದಿಂದ ಸರ್ಕಾರದ ಸ್ವತ್ತುಗಳು ಲೂಟಿಯಾದ ಪ್ರಕರಣಗಳಲ್ಲಿ ಪೊಲೀಸರು ಅಥವಾ ಸರ್ಕಾರದ ತನಿಖಾ ಸಂಸ್ಥೆಗಳು ಪ್ರಕರಣ ದಾಖಲಿಸುತ್ತವೆ ಮತ್ತು ಆರೋಪಿಗಳನ್ನು ಬಂಧಿಸುತ್ತವೆ. ಆದರೆ ಲೂಟಿಯಾದ ಸ್ವತ್ತಿನ ಮರು ಜಪ್ತಿ ಆಗುತ್ತಿಲ್ಲ. ಈ ಕಾರಣಕ್ಕೆ ಹೊಸ ಕಾಯ್ದೆ ಜಾರಿಗೆ ತರಲು ಈ ಮಸೂದೆ ರೂಪಿಸಲಾಗಿದೆ’ ಎಂದರು. ವಿರೋಧ ಪಕ್ಷಗಳ ಸದಸ್ಯರು ಆಕ್ಷೇಪ ವ್ಯಕ್ತಪಡಿಸದ ಕಾರಣ ಯಾವುದೇ ಚರ್ಚೆ ಇಲ್ಲದೆ ಮಸೂದೆ ಅಂಗೀಕಾರಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.