ದೇಶವೊಂದರ ಅಭಿವೃದ್ಧಿಯ ವೇಗವನ್ನು ನಿರ್ಧರಿಸುವುದು ದುಡಿಯುವ ಕೈಗಳ ಕ್ಷಮತೆ ಮತ್ತು ದಕ್ಷತೆ. ಹಗಲಿರುಳೆನ್ನದೆ ರಾಷ್ಟ್ರನಿರ್ಮಾಣದಲ್ಲಿ ಅರ್ಪಿಸಿಕೊಂಡಿರುವ ಕಾರ್ಮಿಕರ ಘನತೆಯ ಬದುಕು ಮತ್ತು ಕೆಲಸಕ್ಕೆ ತಕ್ಕ ಕೂಲಿಯ ಕೂಗಿಗೆ ನಾವು ದನಿಗೂಡಿಸೋಣ.
— Siddaramaiah (@siddaramaiah) May 1, 2025
ನಾಡಿನ ಸಮಸ್ತ ಶ್ರಮಜೀವಿಗಳಿಗೆ ಕಾರ್ಮಿಕ ದಿನದ ಶುಭಾಶಯಗಳು. ನಮ್ಮ ಸರ್ಕಾರ ನಿಮ್ಮೊಂದಿಗೆ ಸದಾ… pic.twitter.com/TDnOaOlhqV
ನಾವು ಪ್ರತಿದಿನ ಕ್ರಮಿಸುವ ರಸ್ತೆಗಳು, ಪ್ರವೇಶಿಸುವ ಕಟ್ಟಡಗಳು, ಉಣ್ಣುವ ಅನ್ನದ ಹಿಂದೆ ಕಾರ್ಮಿಕರ ಬೆವರಿನ ಹನಿ ಇದೆ. ಕಾರ್ಮಿಕರು ದೇಶದ ಪ್ರಗತಿಯ ಬೆನ್ನೆಲುಬು. ಕಠಿಣ ಪರಿಶ್ರಮ, ಘನತೆಯ ದುಡಿಮೆಯ ಮೂಲಕ ಅವರು ಹಾಕುವ ಪ್ರತಿಯೊಂದು ಅಡಿಪಾಯವೂ ನಮ್ಮ ಸುಂದರ ನಾಳೆಗಳನ್ನು ನಿರ್ಮಿಸುತ್ತದೆ. ನಮ್ಮ ಸರ್ಕಾರ ಸದಾ ಕಾರ್ಮಿಕರ ಪರವಾಗಿದ್ದು, ಅವರ… pic.twitter.com/VKc0Ua7Sdk
— DK Shivakumar (@DKShivakumar) May 1, 2025
ಪೌರಕಾರ್ಮಿಕರ ಕಲ್ಯಾಣ
— DK Shivakumar (@DKShivakumar) May 1, 2025
ಸಬಲ ರಾಷ್ಟ್ರ ನಿರ್ಮಾಣ!
ಕಾರ್ಮಿಕ ದಿನಾಚರಣೆಯ ಶುಭಸಂದರ್ಭದಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 12,692 ಪೌರಕಾರ್ಮಿಕರ ಕೆಲಸವನ್ನು ಖಾಯಂಮಾತಿಗೊಳಿಸಿ, ಅವರಿಗೆ ಸೇವಾ ಖಾಯಂ ಪತ್ರ ವಿತರಿಸುವ ಮಹತ್ವಪೂರ್ಣವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ನಮ್ಮ ಸರ್ಕಾರ ಶ್ರಮಿಕರ ಕಲ್ಯಾಣಕ್ಕಾಗಿ ಹಲವಾರು… pic.twitter.com/04u5TJc5lC
ಸಮಸ್ತ ಕಾರ್ಮಿಕ ಬಂಧುಗಳಿಗೆ #MayDay ಹಾರ್ದಿಕ ಶುಭಾಶಯಗಳು.
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) May 1, 2025
ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಅವಿರತ ಕೊಡುಗೆ ನೀಡುತ್ತಿರುವ ಪ್ರತಿಯೊಬ್ಬ ಕಾರ್ಮಿಕರು ನಮಗೆ ಪ್ರಾತಃಸ್ಮರಣೀಯರೇ. ಅವರ ಶ್ರೇಯೋಭಿವೃದ್ಧಿಯೇ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.#ಮೇ_ದಿನ#ಕಾರ್ಮಿಕರ_ದಿನ pic.twitter.com/qVkeeWI25B
“ಶ್ರಮ ಏವ ಜಯತೆ”
— H D Devegowda (@H_D_Devegowda) May 1, 2025
ಸಮಸ್ತ ಕಾರ್ಮಿಕ ವರ್ಗಕ್ಕೆ ವಿಶ್ವ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.
ಪ್ರತಿಯೊಬ್ಬ ಕಾರ್ಮಿಕನೂ ದೇಶದ ಆಸ್ತಿ.
ರಾಷ್ಟ್ರದ ಅಭಿವೃದ್ಧಿ ಮತ್ತು ಆರ್ಥಿಕತೆಯ ಬೆಳವಣಿಗೆಯಲ್ಲಿ ಕಾರ್ಮಿಕರ ಪಾಲು ಬಹು ದೊಡ್ಡದು.
ದುಡಿಯುವ ಕೈಗಳನ್ನು ಗೌರವಿಸೋಣ, ಕಾರ್ಮಿಕರಿಗೆ ಬಲ ತುಂಬೋಣ. pic.twitter.com/iAoUXNzknJ
"ಶ್ರಮಮೇವ ಜಯತೇ"
— Vijayendra Yediyurappa (@BYVijayendra) May 1, 2025
ದೇಶದ ಅಭಿವೃದ್ಧಿಗಾಗಿ ಶ್ರಮವಹಿಸಿ ದುಡಿಯುತ್ತಿರುವ ಎಲ್ಲಾ ವರ್ಗದ ಶ್ರಮಿಕರಿಗೆ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ದೇಶದ ಅರ್ಥವ್ಯವಸ್ಥೆ ಉನ್ನತಿಯಡೆಗೆ ಕೊಂಡೊಯ್ಯುವುದಕ್ಕೆ ಹಗಲಿರುಳು ಶ್ರಮಿಸಿಸುತ್ತಿರುವ ಕಾರ್ಮಿಕರ ತ್ಯಾಗ, ಸೇವೆಯನ್ನು ಗೌರವಿಸೋಣ. ದುಡಿಯುವ ಕೈಗಳು ಎಂದಿಗೂ ಶ್ರೇಷ್ಠ.… pic.twitter.com/qS8JBVnQdB
ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.
— R. Ashoka (@RAshokaBJP) May 1, 2025
ದೇಶದ ಪ್ರಗತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರ ಪರಿಶ್ರಮವನ್ನು ಸ್ಮರಿಸುತ್ತಾ, ಕಾರ್ಮಿಕರ ಶ್ರಮವನ್ನು ಗುರುತಿಸಿ, ಗೌರವಿಸುವ ಸಲುವಾಗಿ ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ.#ShramevJayate #LabourDay pic.twitter.com/fZAFLZsMke
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.