ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪತ್ರಕರ್ತ ಜಯಕುಮಾರ್ ಇನ್ನಿಲ್ಲ

Published 25 ಮೇ 2024, 13:51 IST
Last Updated 25 ಮೇ 2024, 13:51 IST
ಅಕ್ಷರ ಗಾತ್ರ

ಬೆಂಗಳೂರು: ಪತ್ರಕರ್ತ ಆರ್.ಜಯಕುಮಾರ್ (64)ಅವರು ಅನಾರೋಗ್ಯದಿಂದ ಶನಿವಾರ ಮಧ್ಯಾಹ್ನ ನಿಧನರಾದರು.

ಕೊಡಗಿನವರಾದ ಜಯಕುಮಾರ್, ಚಳವಳಿ ಮೂಲಕವೇ ಪತ್ರಕರ್ತರಾಗಿ ರೂಪುಗೊಂಡವರು.
ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ ಪತ್ರಿಕೆ, ಉದಯ ಟಿ.ವಿ ಸೇರಿದಂತೆ ಮೂರು ದಶಕ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು. ಅವರಿಗೆ ಪತ್ನಿ ಡಾ.ಲೀಲಾ ಸಂಪಿಗೆ, ಪುತ್ರಿ ದೀಪಿಕಾ ಇದ್ದಾರೆ.

ಜಯಕುಮಾರ್ ಅವರ ‘ಗಾಂಧಿ ಮರೆತ ನಾಡಿನಲ್ಲಿ’ ಮತ್ತು ‘ಕಾಡು ಹಾದಿಯ ಬೆಳಕಿನ ಜಾಡಿನಲ್ಲಿ’ ಪುಸ್ತಕಗಳು ಇತ್ತೀಚೆಗೆ ಬಿಡುಗಡೆಯಾಗಿದ್ದವು. ಜಯಕುಮಾರ್‌ ದೇಹವನ್ನು ಬೆಂಗಳೂರು ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT