ಬೆಂಗಳೂರು: ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ನ್ಯಾಯಾಲಯಗಳಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಕೆ, ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ತ್ವರಿತ ನ್ಯಾಯಾಲಯ ಸ್ಥಾಪಿಸುವುದೂ ಸೇರಿದಂತೆ ಜಿಲ್ಲಾ ನ್ಯಾಯಾಂಗಕ್ಕೆ ಸಮಗ್ರ ಸುಧಾರಣೆ ತರಲು ಸರ್ಕಾರ ಮುಂದಡಿ ಇಟ್ಟಿದೆ.

ಈ ಉದ್ದೇಶದಿಂದ ‘ಕರ್ನಾಟಕ ಜಿಲ್ಲಾ ನ್ಯಾಯಾಂಗ ಸುಧಾರಣೆಗಳ ಮಸೂದೆ– 2025’ರ ಕರಡು ಸಿದ್ಧಗೊಂಡಿದೆ. ಬೆಳಗಾವಿ ಅಧಿವೇಶನದಲ್ಲಿ ಈ ಮಸೂದೆ ಮಂಡಿಸುವ ತಯಾರಿಯೂ ನಡೆದಿದೆ.

ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ವೇಗ, ನಿಖರತೆ, ಪಾರದರ್ಶಕತೆ ಮತ್ತು ವಸ್ತುನಿಷ್ಠತೆ ಹೆಚ್ಚಿಸಲು ಕೃತಕ ಬುದ್ಧಿಮತ್ತೆ (ಎಐ) ಸಾಧನಗಳ ಬಳಕೆ ಮತ್ತು ಡಿಜಿಟಲ್ ತಂತ್ರಜ್ಞಾನಗಳನ್ನು ಪರಿಚಯಿಸಬೇಕು. ಆ ಮೂಲಕ ಜಿಲ್ಲಾ ನ್ಯಾಯಾಂಗದಲ್ಲಿ ನ್ಯಾಯದಾನ ವ್ಯವಸ್ಥೆಯನ್ನು ವ್ಯವಸ್ಥಿತಗೊಳಿಸಲು ರಾಜ್ಯ ಸರ್ಕಾರ ಮತ್ತು ಹೈಕೋರ್ಟ್ ಸಮನ್ವಯದಿಂದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಪ್ರಸ್ತಾವ ಮಸೂದೆಯಲ್ಲಿದೆ.

ಮಸೂದೆಯಲ್ಲಿ ಏನಿದೆ?: ರೈತರು, ನಿರುದ್ಯೋಗಿಗಳು, ಉದ್ಯೋಗ ವಂಚಿತರು, ಭೂ ವಿವಾದಗಳು, ಕೃಷಿ ಸಾಲಗಳು, ಬೆಳೆ ವಿಮೆ ಮತ್ತು ಹಿಡುವಳಿ ಸಮಸ್ಯೆಗಳು ಸೇರಿದಂತೆ ಕೃಷಿ ವಿವಾದಗಳನ್ನು ಒಳಗೊಂಡ ಸಿವಿಲ್ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದಕ್ಕೆ ಅನುಗುಣವಾಗಿ ಪ್ರತಿ ಜಿಲ್ಲೆಗೆ ಕನಿಷ್ಠ ಒಂದು ‘ತ್ವರಿತ ನ್ಯಾಯಾಲಯ’ ಸ್ಥಾಪಿಸಬೇಕು. ಈ ನ್ಯಾಯಾಲಯಗಳ ಮುಂದಿರುವ ಎಲ್ಲ ಪ್ರಕರಣಗಳಿಗೆ ಮಧ್ಯಸ್ಥಿಕೆ ಕೇಂದ್ರಗಳು, ಲೋಕ ಅದಾಲತ್ಗಳು ಅಥವಾ ಪರ್ಯಾಯ ವಿವಾದ ಪರಿಹಾರ ಕೇಂದ್ರಗಳ ಮೂಲಕ ಪೂರ್ವ ವಿಚಾರಣೆಯ ಮಧ್ಯಸ್ಥಿಕೆ ಕಡ್ಡಾಯವಾಗಿ ಮಾಡಬೇಕು.

ತ್ವರಿತ ನ್ಯಾಯಾಲಯಗಳ ಕಾರ್ಯಕ್ಷಮತೆಯ ಬಗ್ಗೆ ಜಿಲ್ಲಾ ನ್ಯಾಯಾಂಗ ಮೇಲ್ವಿಚಾರಣಾ ಸಮಿತಿಯು ತ್ರೈಮಾಸಿಕ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸಬೇಕು. ಈ ನ್ಯಾಯಾಲಯಗಳ ಪೀಠಾಸೀನ ಅಧಿಕಾರಿಯು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದೊಂದಿಗೆ ಸಮನ್ವಯ ಸಾಧಿಸಿ, ರೈತರಿಗೆ, ನಿರುದ್ಯೋಗಿಗಳಿಗೆ ಮತ್ತು ಉದ್ಯೋಗ ವಂಚಿತರಿಗೆ ಕಾನೂನು ನೆರವಿನ ಲಭ್ಯತೆಯನ್ನು ಖಾತರಿಪಡಿಸಬೇಕು.

10 ವರ್ಷಗಳಿಗಿಂತ ಹೆಚ್ಚು ಅವಧಿಯಿಂದ ಬಾಕಿ ಇರುವ ಪ್ರಕರಣಗಳನ್ನು (ವಿಶೇಷ ಕಾರಣಗಳಿಗಾಗಿ ಹೈಕೋರ್ಟ್ ನಿರ್ದೇಶನ ನೀಡದ ಹೊರತು) ಪ್ರಾದೇಶಿಕ ಮತ್ತು ವಿಷಯದ ಅಧಿಕಾರ ವ್ಯಾಪ್ತಿ ಹೊಂದಿರುವ ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಬೇಕು. ಐದು ಮತ್ತು ಹತ್ತು ವರ್ಷಗಳ ನಡುವೆ ಬಾಕಿ ಉಳಿದಿರುವ ಪ್ರಕರಣಗಳನ್ನು ಜಿಲ್ಲಾ ನ್ಯಾಯಾಧೀಶರ ಶಿಫಾರಸಿನ ಆಧಾರದಲ್ಲಿ ಅಥವಾ ಹೈಕೋರ್ಟ್ ನಿರ್ದೇಶನದ ಮೂಲಕ ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಬಹುದು. ಹೀಗೆ ವರ್ಗಾಯಿಸಿದ ಪ್ರತಿಯೊಂದು ಪ್ರಕರಣವನ್ನು ಸಾಧ್ಯವಾದಷ್ಟು ಮಟ್ಟಿಗೆ ವರ್ಗಾವಣೆಯಾದ ದಿನದಿಂದ 12 ತಿಂಗಳ ಒಳಗೆ ವಿಲೇವಾರಿ ಮಾಡಬೇಕು. ಈ ಬಗ್ಗೆ ಹೈಕೋರ್ಟ್ಗೆ ಪ್ರಗತಿ ವರದಿ ಸಲ್ಲಿಸಬೇಕು.

ಮೇಲ್ವಿಚಾರಣಾ ಸಮಿತಿ ರಚನೆ: ಪ್ರತಿ ಜಿಲ್ಲೆಯಲ್ಲಿ ಪ್ರಧಾನ ಜಿಲ್ಲಾ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ, ಇಬ್ಬರು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ವಕೀಲರ ಸಂಘದ ಒಬ್ಬ ಪ್ರತಿನಿಧಿಯನ್ನು ಒಳಗೊಂಡ ‘ಜಿಲ್ಲಾ ನ್ಯಾಯಾಂಗ ಮೇಲ್ವಿಚಾರಣಾ ಸಮಿತಿ'ಯನ್ನು ಹೈಕೋರ್ಟ್ ಸ್ಥಾಪಿಸಬೇಕು. ಈ ಸಮಿತಿಯು, ಜಿಲ್ಲಾ ನ್ಯಾಯಾಂಗದ ಕಾರ್ಯಕ್ಷಮತೆಯ ತ್ರೈಮಾಸಿಕ ವರದಿಗಳನ್ನು ಹೈಕೋರ್ಟ್ಗೆ ಸಲ್ಲಿಸಬೇಕು ಎಂದೂ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

ಮಸೂದೆಯ ಪ್ರಮುಖ ಅಂಶಗಳು

l ಎಲ್ಲ ಜಿಲ್ಲಾ ನ್ಯಾಯಾಲಯಗಳು ಹೈಕೋರ್ಟ್ಗೆ ಸಂಯೋಜಿತವಾದ ‘ಸಮಗ್ರ ಪ್ರಕರಣ ನಿರ್ವಹಣಾ ವ್ಯವಸ್ಥೆ’ (ಐಸಿಎಎಂಎಸ್) ಜಾರಿಗೆ ತರಬೇಕು

l ಕಾಗದ ರಹಿತ ವ್ಯವಸ್ಥೆ ಮತ್ತು ಇ- ನ್ಯಾಯಾಲಯಗಳ ಮೂಲಕ ಪ್ರಕ್ರಿಯೆಗಳನ್ನು ನಡೆಸಬೇಕು

l ಪ್ರಕರಣದ ದತ್ತಾಂಶವನ್ನು ಗೋಪ್ಯತೆಯ ಸುರಕ್ಷತೆಗಳಿಗೆ ಒಳಪಟ್ಟು, ಆನ್ಲೈನ್ ಪೋರ್ಟಲ್ ಮೂಲಕ ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಬೇಕು

l ಪ್ರಕರಣಗಳ ಮುಂದೂಡಿಕೆಗೆ ಕೊಟ್ಟ ಕಾರಣ ಕ್ಷುಲ್ಲಕವೆಂದು ಕಂಡುಬಂದರೆ ನ್ಯಾಯಾಲಯಗಳು ಕನಿಷ್ಠ ₹ 5 ಸಾವಿರ ವೆಚ್ಚ ವಿಧಿಸಬಹುದು

l ಗಂಭೀರ ಉಲ್ಲಂಘನೆಗಳು ಸಾಬೀತಾದರೆ ಮಾತ್ರ ಮಧ್ಯಂತರ ತಡೆಯಾಜ್ಞೆ ಅಥವಾ ತಡೆಯಾಜ್ಞೆ ನೀಡಲಾಗುವುದು

l ಮಧ್ಯಂತರ ತಡೆಯಾಜ್ಞೆ ಅಥವಾ ತಡೆಯಾಜ್ಞೆ ವಿರುದ್ಧ 15 ದಿನಗಳೊಳಗೆ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಬೇಕು

l ಜಿಲ್ಲಾ ನ್ಯಾಯಾಂಗದ ನ್ಯಾಯಾಧೀಶರು ತಮ್ಮ ಆಸ್ತಿಯನ್ನು ವರ್ಷಕ್ಕೊಮ್ಮೆ ಘೋಷಣೆ ಮಾಡುವುದು ಕಡ್ಡಾಯ

‘ಬಿಡಿಜೆಆರ್’ ಸ್ಥಾಪನೆ ಪ್ರಸ್ತಾಪ

‘ಜಿಲ್ಲಾ ನ್ಯಾಯಾಂಗ ಸುಧಾರಣೆಗಳ ಬ್ಯೂರೊ’ (ಬಿಡಿಜೆಆರ್) ಎಂಬ ಶಾಶ್ವತ ಸಂಸ್ಥೆಯನ್ನು ಸರ್ಕಾರ ರಚಿಸಬೇಕು. ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿ ಅಥವಾ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಈ ಬ್ಯುರೊ ಅಧ್ಯಕ್ಷರಾಗಿರುತ್ತಾರೆ. ಹೈಕೋರ್ಟ್ನಿಂದ ನಾಮನಿರ್ದೇಶನಗೊಂಡ ಇಬ್ಬರು ಜಿಲ್ಲಾ ನ್ಯಾಯಾಧೀಶರು, ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಒಬ್ಬ ಪ್ರತಿನಿಧಿ, ಮೂವರು ಕಾನೂನು ತಜ್ಞರು ಅಥವಾ ನ್ಯಾಯಾಂಗ ಆಡಳಿತದ ತಜ್ಞರು ಇದರ ಸದಸ್ಯರು. ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಶ್ರೇಣಿಯವರು ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ಈ ಬ್ಯುರೊ ಜಿಲ್ಲಾ ನ್ಯಾಯಾಂಗದಲ್ಲಿ ಸಮಗ್ರ ಸುಧಾರಣೆಗಾಗಿ ನೇಮಕಾತಿ, ತರಬೇತಿ, ಮೂಲಸೌಕರ್ಯ, ಪ್ರಕರಣಗಳ ನಿರ್ವಹಣೆ ಮತ್ತು ಕಾರ್ಯಕ್ಷಮತೆಯ ಮೌಲ್ಯ

ಮಾಪನದಲ್ಲಿ ಸುಧಾರಣೆಗಳನ್ನು ಪರಿಶೀಲಿಸಬೇಕು ಮತ್ತು ಶಿಫಾರಸು ಮಾಡಬೇಕು ಎಂದು ಕರಡು ಮಸೂದೆ ಹೇಳಿದೆ.

‘ಜಿಲ್ಲಾ ನ್ಯಾಯಾಂಗ’ ಎಂದರೆ ಯಾವುದು?

ಪ್ರಧಾನ ಜಿಲ್ಲಾ ನ್ಯಾಯಾಧೀಶರು, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು, ಸಿವಿಲ್ ನ್ಯಾಯಾಧೀಶರು,
ಮ್ಯಾಜಿಸ್ಟ್ರೇಟ್ಗಳು ಮತ್ತು ತ್ವರಿತ ನ್ಯಾಯಾಲಯಗಳು ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು
ಮಟ್ಟದಲ್ಲಿರುವ ನ್ಯಾಯಾಲಯಗಳನ್ನು ಒಳಗೊಂಡ ವ್ಯವಸ್ಥೆಯೇ ಜಿಲ್ಲಾ ನ್ಯಾಯಾಂಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.