ಧಾರವಾಡ: ‘ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ ಅನುತ್ತೀರ್ಣರಾಗುವ ಕಾರಣ ತಿಳಿಯಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಜುಲೈ 23ರಂದು ಸಭೆ ನಡೆಸಿ, ಉಪಸಮಿತಿ ರಚಿಸಲಿದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ತಿಳಿಸಿದರು.

‘ಸಮಿತಿಯಲ್ಲಿ ಶಿಕ್ಷಣ ತಜ್ಞರು, ಶಿಕ್ಷಕರು ಸೇರಿ ಐವರು ಸದಸ್ಯರು ಇರುತ್ತಾರೆ. ವರದಿ ಸಲ್ಲಿಸಲು ಮೂರು ತಿಂಗಳ ಗಡುವು ವಿಧಿಸಲಾಗುವುದು. ಕನ್ನಡದಲ್ಲಿ ಅನುತ್ತೀರ್ಣರಾದವರ ತಾಲ್ಲೂಕುವಾರು ವಿವರ ನೀಡಲು ಶಾಲಾ ಶಿಕ್ಷಣ ಇಲಾಖೆಗೆ ಕೋರಲಾಗಿದೆ’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ಕನ್ನಡ ಶಿಕ್ಷಕರಿಗೆ ಅಗತ್ಯ ತರಬೇತಿ ಹಾಗೂ ಪಠ್ಯಕ್ರಮ, ಕಲಿಕೆಯನ್ನು ಸರಳಗೊಳಿಸಿದರೆ ಕನ್ನಡ ಪ್ರಥಮಭಾಷೆ ಅಂಕವನ್ನು 100ಕ್ಕೆ ಇಳಿಸಿದ್ದನ್ನು ಒಪ್ಪಬಹುದು’ ಎಂದರು.

‘ರಾಜ್ಯ ಶಿಕ್ಷಣ ನೀತಿ (ಎಸ್ಇಪಿ) ಸಮಿತಿ ಜುಲೈ ಅಂತ್ಯದ ವೇಳೆಗೆ ಸರ್ಕಾರಕ್ಕೆ ವರದಿ ಸಲ್ಲಿಸುವ ನಿರೀಕ್ಷೆಯಿದೆ. ದ್ವಿಭಾಷಾ ಸೂತ್ರ ಕುರಿತ ಶಿಫಾರಸು ಕುರಿತು ಚರ್ಚಿಸಿ ಪ್ರಾಧಿಕಾರದ ತನ್ನ ನಿರ್ಧಾರ ತಿಳಿಸಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.