ಹೆದ್ದಾರಿ ಸುತ್ತ ಕ್ರಷರ್ ಹಾವಳಿ
ರಾಷ್ಟ್ರೀಯ ಹೆದ್ದಾರಿ ಆಸುಪಾಸಿನಲ್ಲಿ ಏಳೆಂಟು ಕ್ರಷರ್‌ಗಳಿದ್ದು, ಕರಡಿಬೆಟ್ಟದಿಂದಲೇ ಕಲ್ಲು ರವಾನೆ ಆಗುತ್ತಿದೆ. ನೆಲಮಟ್ಟದಿಂದ ತಳ, ಮೇಲ್ಭಾಗಕ್ಕೆ ತಲಾ 200 ಅಡಿ ಕೊರೆಯಲಾಗಿದೆ. ‘ ಅನುಮತಿ ಪಡೆದು 30 ವರ್ಷಗಳಿಂದ ಗಣಿಗಾರಿಕೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಅಕ್ರಮ ಗಣಿಗಳಿಲ್ಲ’ ಎಂದು ಗಣಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ‘ಬೆಟ್ಟದ ಸುತ್ತಲೂ ಜನವಸತಿ, ಶಾಲೆ, ಮಠಗಳಿರುವ ಕಾರಣ ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಕಲ್ಲು ಗಣಿ ನಿಂತಿಲ್ಲ’ ಎಂದು ಸಾಮಾಜಿಕ ಹೋರಾಟಗಾರ ಜೆ.ಯಾದವರೆಡ್ಡಿ ಹೇಳಿದರು.