ಬೆಂಗಳೂರು: ರಾಜ್ಯ ಸರ್ಕಾರವು ಎಂಟು ವರ್ಷಗಳ ಬಳಿಕ ಪುಸ್ತಕಗಳ ಪುಟವಾರು ದರ ಪರಿಷ್ಕರಣೆಗೆ ಕ್ರಮ ಕೈಗೊಂಡಿದೆ. ಇದೇ ಮೊದಲ ಬಾರಿಗೆ ದರ ಪರಿಷ್ಕರಣೆಯ ಹೊಣೆ ಹೊತ್ತಿರುವ ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆ ಮೂರು ತಿಂಗಳು ಕಳೆದರೂ ಗೊತ್ತುಪಡಿಸಬಹುದಾದ ಬೆಲೆಯ ವಿವರವನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ.

ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯು ಸರ್ಕಾರಿ ಮುದ್ರಣಾಲಯವನ್ನು ನಿರ್ವಹಣೆ ಮಾಡುತ್ತಿದೆ. ಪುಸ್ತಕದ ಪುಟಗಳ ದರ ನಿಗದಿ ಮಾಡಿದ ಅನುಭವ ಈ ಇಲಾಖೆಗೆ ಇಲ್ಲ. 2017ರಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದಲೇ ದರ ಪರಿಷ್ಕರಣೆ ಮಾಡಲಾಗಿತ್ತು. ಈ ಬಾರಿ ಗ್ರಂಥಾಲಯ ಇಲಾಖೆಯು ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಗೆ ದರ ಪರಿಷ್ಕರಣೆಯ ಜವಾಬ್ದಾರಿ ನೀಡಿರುವುದು ಪ್ರಕಾಶಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದಕ್ಕೆ ಪೂರಕ ಎಂಬಂತೆ ಆದೇಶ ಮಾಡಿ ಮೂರು ತಿಂಗಳು ಕಳೆದರೂ ನಿಗದಿಪಡಿಸಬಹುದಾದ ಬೆಲೆಯ ಮಾಹಿತಿಯನ್ನು ಇಲಾಖೆ ಒದಗಿಸಿಲ್ಲ.

ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಖರೀದಿಸುವ ಪುಸ್ತಕಗಳಿಗೆ ಸದ್ಯ ಪುಟವೊಂದಕ್ಕೆ 70 ಪೈಸೆಯಿದೆ. ಕಾಗದ ಹಾಗೂ ಮುದ್ರಣದ ದರ, ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ, ಸಾಗಾಣಿಕೆ ವೆಚ್ಚ ಹೆಚ್ಚಳ ಹಾಗೂ ಕಾಗದಕ್ಕೆ ಶೇ 18ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸುತ್ತಿರುವ ಕಾರಣ ಪುಟವಾರು ದರ ಏರಿಕೆಗೆ ಪ್ರಕಾಶಕರು ಪಟ್ಟು ಹಿಡಿದಿದ್ದಾರೆ. ಪ್ರತಿ ಪುಟಕ್ಕೆ 50 ಪೈಸೆ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಾ ಬಂದಿದ್ದಾರೆ.

ದರದ ಗೊಂದಲ: ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯ ಮುದ್ರಣಾಲಯವು ಸರ್ಕಾರಿ ಕಿರು ಹೊತ್ತಿಗೆಗಳು ಸೇರಿ ಆಯ್ದ ಸರ್ಕಾರಿ ಪುಸ್ತಕಗಳನ್ನು ಮಾತ್ರ ಮುದ್ರಿಸುತ್ತಿದೆ. ಪುಸ್ತಕಗಳ ಖರೀದಿಗೆ ಸಂಬಂಧಿಸಿದಂತೆ ಪುಟವಾರು ದರ ಪರಿಷ್ಕರಣೆಗೆ ಸೂಕ್ತ ಮಾನದಂಡ ಗೊತ್ತುಪಡಿಸದ ಕಾರಣ, ಇಲಾಖೆಯ ಅಧಿಕಾರಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಈವರೆಗೂ ದರದ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದಾಗಿ ದರ ಪರಿಷ್ಕರಣೆ ಕಗ್ಗಂಟಾಗಿ ಪರಿಣಮಿಸಿದೆ.

‘ಮುದ್ರಣ ಸೇರಿ ವಿವಿಧ ಬೆಲೆಗಳು ಹೆಚ್ಚಿರುವ ಪರಿಣಾಮ, ಪುಟವಾರು ದರ ಹೆಚ್ಚಳಕ್ಕೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತಿದೆ. ಕಾಗದದ ಅಳತೆ ಹಾಗೂ ಗುಣಮಟ್ಟಕ್ಕೆ ಅನುಗುಣವಾಗಿ ದರ ನಿಗದಿ ಮಾಡಬೇಕಿದೆ. ಈ ದರ ನಿಗದಿಯನ್ನು ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಗೆ ನೀಡುವ ಮೂಲಕ ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ’ ಎಂದು ಪ್ರಕಾಶಕ ಸೃಷ್ಠಿ ನಾಗೇಶ್ ಬೇಸರ ವ್ಯಕ್ತಪಡಿಸಿದರು.

ಖರೀದಿಯಾಗದ ಪುಸ್ತಕಗಳು: ರಾಜ್ಯದಲ್ಲಿ ಸುಮಾರು 500 ಪ್ರಕಾಶನ ಸಂಸ್ಥೆಗಳಿವೆ. ಕೆಲವು ಲೇಖಕರು ಕೂಡ ಪ್ರಕಾಶನ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರತಿ ವರ್ಷ ಸುಮಾರು 8 ಸಾವಿರ ಪುಸ್ತಕಗಳು ಪ್ರಕಟವಾಗುತ್ತಿವೆ. ಬಹುತೇಕ ಪ್ರಕಾಶಕರು ಗ್ರಂಥಾಲಯ ಇಲಾಖೆಯ ಸಗಟು ಖರೀದಿಯನ್ನೇ ಅವಲಂಬಿಸಿದ್ದಾರೆ. ಇಲಾಖೆಯ ಏಕಗವಾಕ್ಷಿ ಯೋಜನೆಯಡಿ ಖರೀದಿಸಲಾದ 2020ನೇ ಸಾಲಿನ ಪುಸ್ತಕಗಳ ಹಣ ಪೂರ್ಣ ಪ್ರಮಾಣದಲ್ಲಿ ಇನ್ನೂ ಪಾವತಿಯಾಗಿಲ್ಲ. ಈ ಯೋಜನೆಗೆ ಪ್ರತ್ಯೇಕ ಲೆಕ್ಕ ಶೀರ್ಷಿಕೆಯಿರದ ಕಾರಣ ಯೋಜನೆಯನ್ನು ಸ್ಥಗಿತ ಮಾಡಲಾಗಿದೆ. 2022ನೇ ಸಾಲಿಗೆ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ ಆಯ್ಕೆ ಮಾಡಿದ ಪುಸ್ತಕಗಳನ್ನು ಪ್ರದರ್ಶಿಸಿದ್ದರೂ ಅಂತಿಮ ಪಟ್ಟಿ ಬಿಡುಗಡೆ ಮಾಡಿಲ್ಲ. ಯೋಜನೆಯಡಿ ಕೃತಿಯೊಂದರ 300 ಪ್ರತಿಗಳನ್ನು ಖರೀದಿಸಲಾಗುತ್ತಿತ್ತು. ಈಗ ಖರೀದಿ ನಡೆಯದ ಪರಿಣಾಮ ಯೋಜನೆಯನ್ನೇ ನಂಬಿದ್ದ ಪ್ರಕಾಶಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯು ಪುಟವಾರು ದರದ ವಿವರ ಸಲ್ಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
ಬಸವರಾಜೇಂದ್ರ ಎಚ್., ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತ