ಬೆಂಗಳೂರು: ಮಾತೃಶ್ರೀ ಯೋಜನೆ ಅಡಿಯಲ್ಲಿ ನೀಡುತ್ತಿದ್ದ ₹ 1000 ಸಹಾಯಧನವನ್ನು ₹ 2000ಕ್ಕೆ ಏರಿಕೆ ಮಾಡಲಾಗಿದ್ದು ಮಹಿಳೆಯರು, ಅಂಗವಿಕಲರು ಮತ್ತು ಸಮಾಜ ಕಲ್ಯಾಣಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವೇತನವನ್ನು ಕ್ರಮವಾಗಿ ₹ 500 ಮತ್ತು 250 ರೂಪಾಯಿಗಳನ್ನು ಹೆಚ್ಚಳ ಮಾಡಲಾಗಿದೆ. ಇದು 2019ರ ನವೆಂಬರ್ ತಿಂಗಳಿಂದ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಕರ್ಮಚಾರಿಗಳಿಗೆ ತರಬೇತಿ ನೀಡುವ ಸಲುವಾಗಿ ಕಲುಬುರ್ಗಿ, ಚಿತ್ರದುರ್ಗ, ಮೈಸೂರು, ಬಳ್ಳಾರಿ ಮತ್ತು ಬೆಳಗಾವಿಯಲ್ಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ₹ 5 ಕೋಟಿ ತೆಗೆದಿರಿಸಲಾಗಿದೆ. ನಗರ ಪ್ರದೇಶದಲ್ಲಿ 100 ಅಂಗನವಾಡಿ ಕೇಂದ್ರಗಳ ಸ್ಥಾಪನೆ ಹಾಗೂ ರಾಜ್ಯದ ಹಲವೆಡೆ 1000 ಅಂಗನವಾಡಿ ಕೇಂದ್ರಗಳ ಕಟ್ಟಡಗಳನ್ನು ದುರಸ್ತಿ ಮಾಡುವುದಕ್ಕೆ ₹10 ಕೋಟಿ ಮೀಸಲಿರಿಸಲಾಗಿದೆ.

ಚಿಕ್ಕಮಗಳೂರಿನಲ್ಲಿ ಹೊಸ ಬಾಲ ಮಂದಿರ ಸ್ಥಾಪಿಸಲಾಗುವುದು. ರಾಜ್ಯದ 10 ಜಿಲ್ಲೆಗಳಲ್ಲಿ ಮಕ್ಕಳ ಸ್ನೇಹಿ ನ್ಯಾಯಾಲಯ ರೂಪಿಸಲು 3 ಕೋಟಿ ಅನುದಾನ ನೀಡಲಾಗುವುದು ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.

ದಮನಿತ ಮಹಿಳೆಯರ ಕಲ್ಯಾಣಕ್ಕಾಗಿ ತರಬೇತಿ ಕೇಂದ್ರಗಳ ಸ್ಥಾಪನೆ ಹಾಗೂ 1000 ಮಹಿಳೆಯರಿಗೆ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ₹ 11 ಕೋಟಿ ವೆಚ್ಚ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.

ಅಂಗವಿಕಲರ ಕಲ್ಯಾಣ...

ಅರ್ಥೋಟಿಕ್ಸ್ ಕೋರ್ಸ್ ಹಾಗೂ ವಿಶೇಷ ಮಕ್ಕಳ ಶಿಕ್ಷಕರತರಬೇತಿ ಕೇಂದ್ರಗಳಲ್ಲಿ ಶ್ರಮಣ ದೋಷಹಾಗೂ ಬುದ್ಧಿಮಾಂದ್ಯಮಕ್ಕಳ ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಬಜೆಟ್‌ನಲ್ಲಿ ಹೇಳಲಾಗಿದೆ.

2000 ಅಂಗವಿಕಲರಿಗೆ ಯಂತ್ರ ಚಾಲಿತದ್ವಿಚಕ್ರ ವಾಹನ ನೀಡಲು 15 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ಅಪಘಾತದಿಂದ ಬೆನ್ನುಹುರಿ ತೊಂದರೆ ಅನುಭವಿಸುತ್ತಿರುವವರಪುನರ್ವಸತಿಗಾಗಿ 2 ಕೋಟಿ ಮೀಸಲಿಡಲಾಗಿದೆ.

ಸಮಾಜ ಕಲ್ಯಾಣ

ಪರಿಶಿಷ್ಟಜಾತಿ ಹಾಗೂ ಗಿರಿಜನ ಉಪಯೋಜನೆಗೆ ₹ 30 ಕೋಟಿ ಅನುದಾನ ಮೀಸಲಿಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರು ಹಾಗೂ ಸಾಮಾನ್ಯ ವರ್ಗದವರ ಸಂಯುಕ್ತ ವಿದ್ಯಾರ್ಥಿ ನಿಲಯಕ್ಕೆ 100 ಕೋಟಿ ಅನುದಾನ ನೀಡಲಾಗಿದೆ. ಇಂತಹ ವಿದ್ಯಾರ್ಥಿ ನಿಲಯಗಳನ್ನು ಪ್ರತಿ ಜಿಲ್ಲೆಗೊಂದು ಸ್ಥಾಪನೆ ಮಾಡಲಾಗುವುದು.

ಸಂವಿಧಾನ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಬೆಂಗಳೂರು ನಗರದಲ್ಲಿ ₹ 30 ಕೋಟಿ ವೆಚ್ಚದಲ್ಲಿ ಮ್ಯೂಸಿಯಂ ಸ್ಥಾಪನೆ ಮಾಡಲಾಗುವುದು.

ಹಿಂದುಳಿದ ವರ್ಗಗಳಕಲ್ಯಾಣ..

ಬಾಡಿಗೆ ಕಟ್ಟಡಗಳಲ್ಲಿರುವ ಹಿಂದುಳಿದ ಕಲ್ಯಾಣ ವರ್ಗಗಳ ವಸತಿನಿಲಯಗಳಿಗೆ ಸ್ವಂತ ಕಟ್ಟಡಕ್ಕಾಗಿ ನೂರು ಕೋಟಿ ಅನುದಾನ ನೀಡಲಾಗಿದೆ, ಅಲೆಮಾರಿ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ 25 ಕೋಟಿ ನೀಡಲಾಗಿದೆ.

ವಿಶ್ವಕರ್ಮ ಹಾಗೂ ಧೋಬಿ ಸಮುದಾಯದ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ಅನುದಾನ, ಸವಿತಾ ಸಮಾಜ ಅಭಿವೃದ್ಧಿನಿಗಮ ಸ್ಥಾಪನೆಗೆ ಸರ್ಕಾರ ನಿರ್ಧಾರ ಮಾಡಿದೆ ಎಂದು ಪ್ರಕಟಿಸಲಾಗಿದೆ. ಸಮಾಜದಲ್ಲಿ ತೀರ ಹಿಂದುಳಿದಿರುವ ಸಮುದಾಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.

ಅಲ್ಪಸಂಖ್ಯಾತರ ಕಲ್ಯಾಣ...

ಅಲ್ಪಸಂಖ್ಯಾತರು ವಾಸ ಮಾಡುವ ಪ್ರದೇಶಗಳನ್ನು ₹400 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದುಎಂದು ಬಜೆಟ್‌ನಲ್ಲಿ ಹೇಳಲಾಗಿದೆ.

ಮೌಲಾನಾ ಆಜಾದ್ ಟ್ರಸ್ಟ್ ಸ್ಥಾಪನೆಗೆ ₹ 25 ಕೋಟಿ ಅನುದಾನ, ದಾವಣಗೆರೆ, ತುಮಕೂರು, ಗದಗ, ಕಲುಬುರ್ಗಿಯಲ್ಲಿ ಮೊರಾರ್ಜಿ ಮುಸ್ಲಿಂ ಹೆಣ್ಣು ಮಕ್ಕಳ ವಸತಿ ಶಾಲೆ ಸ್ಥಾಪನೆ ಮಾಡಲಾಗುವುದು.

ಬೀದರ್ ಮತ್ತು ಬೆಂಗಳೂರಿನ ಗುರುದ್ವಾರಕ್ಕೆ 35 ಕೋಟಿ ಅನುದಾನ ಹಾಗೂ ಕ್ರೈಸ್ತರ ಅಭಿವೃದ್ಧಿಗಾಗಿ 200 ಕೋಟಿ ಮೀಸಲಿಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.