ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ, ಅಂಬಾನಿಗಳ ಮೇಲಿರುವ ಅರ್ಧದಷ್ಟು ಕಾಳಜಿ ಬಡವರ ಮೇಲೆ ಇಲ್ಲವೇ? ಕಾಂಗ್ರೆಸ್‌

Published 13 ಜೂನ್ 2023, 9:02 IST
Last Updated 13 ಜೂನ್ 2023, 9:02 IST
ಅಕ್ಷರ ಗಾತ್ರ

ಬೆಂಗಳೂರು: ಮೋದಿಯವರಿಗೆ ಅದಾನಿ ಅಂಬಾನಿಗಳ ಮೇಲಿರುವ ಅರ್ಧದಷ್ಟು ಕಾಳಜಿ ಈ ದೇಶದ ಬಡವರ ಮೇಲೆ ಇಲ್ಲವೇಕೆ ಎಂದು ಕಾಂಗ್ರೆಸ್‌ ಟೀಕೆ ಮಾಡಿದೆ.

‘ಉದ್ಯೋಗ ಖಾತರಿಯಲ್ಲಿ ಕತ್ತರಿ‘ ಎಂದು ‘ಪ್ರಜಾವಾಣಿ‘ಯಲ್ಲಿ ಪ್ರಕಟವಾದ ವಿಶೇಷ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಟ್ವೀಟ್‌ ಮಾಡಿದೆ.

ಅಲ್ಲದೇ ಮೋದಿ ಸರ್ಕಾರ ಉದ್ಯೋಗ ಸೃಷ್ಠಿ ಮಾಡುತ್ತೇನೆ ಎಂದು ಹೇಳಿಕೊಂಡು ಉದ್ಯೋಗ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಕಿಡಿ ಕಾರಿದೆ.

ಕಾಂಗ್ರೆಸ್‌ ಮಾಡಿರುವ ಟ್ವೀಟ್‌ ಹೀಗಿದೆ.

‘ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದ ಮೋದಿ ಸರ್ಕಾರ ಇಂದು ಇರುವ ಉದ್ಯೋಗವನ್ನೂ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ.

ಉದ್ಯೋಗ ಖಾತ್ರಿ ಯೋಜನೆಯಲ್ಲಿ

– ಸರಾಸರಿ ಉದ್ಯೋಗದ ದಿನಗಳು ಖೋತಾ ಆಗಿದೆ

– ನರೇಗಾ ಫಲಾನುಭವಿಗಳ ಸಂಖ್ಯೆ ಕುಸಿದಿದೆ

– ನರೇಗಾ ಅನುದಾನ ಕಡಿತಗೊಳಿಸಲಾಗಿದೆ

ಮೋದಿಯವರಿಗೆ ಅದಾನಿ ಅಂಬಾನಿಗಳ ಮೇಲಿರುವ ಅರ್ಧದಷ್ಟು ಕಾಳಜಿ ಈ ದೇಶದ ಬಡವರ ಮೇಲೆ ಇಲ್ಲವೇಕೆ?‘.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT