ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಂದಾಣಿಕೆ ರಾಜಕೀಯ ಭ್ರಷ್ಟಾಚಾರಕ್ಕೆ ಪರವಾನಗಿ: ಸಿ.ಟಿ. ರವಿ

Published 14 ಆಗಸ್ಟ್ 2024, 2:15 IST
Last Updated 14 ಆಗಸ್ಟ್ 2024, 2:15 IST
ಅಕ್ಷರ ಗಾತ್ರ

ಬೆಂಗಳೂರು: ಯಾವುದೇ ಪಕ್ಷಗಳ ನಡುವೆ ನಡೆಯುವ ಹೊಂದಾಣಿಕೆ ರಾಜಕೀಯ ಭ್ರಷ್ಟಾಚಾರಕ್ಕೆ ಪರವಾನಗಿ ಇದ್ದಂತೆ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಸಿ.ಟಿ. ರವಿ ಹೇಳಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಹೊಂದಾಣಿಕೆ ರಾಜಕೀಯ ಕೆಲ ಸಂದರ್ಭಗಳಲ್ಲಿ ಲಾಭ ತಂದುಕೊಡಬಹುದು. ಆದರೆ, ಅಂತಹ ನಡೆ ಎಲ್ಲ ಪಕ್ಷದವರಿಗೂ ತೊಂದರೆ ಮಾಡುತ್ತದೆ. ರಾಜ್ಯದ ಹಿತಕ್ಕೂ ಮಾರಕ. ಸಿದ್ಧಾಂತ ರಾಜಕಾರಣ ಮಾಡುವವರು ಸುಲಭವಾಗಿ ಬಲಿಯಾಗುತ್ತಾರೆ. ನಾನೂ ಅಂತಹ ಪಿತೂರಿ ರಾಜಕಾರಣಕ್ಕೆ ಬಲಿಯಾದೆ. 2023ರ ಚುನಾವಣೆಯಲ್ಲಿ ಸೋಲಿಸಿದರು. ಇಂತಹ ರಾಜಕಾರಣಕ್ಕೆ ಮುಕ್ತಿ ಹಾಡಬೇಕು’ ಎಂದರು.

‘ಬಿಜೆಪಿ ಭಿನ್ನಮತದ ವಿಚಾರ ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ. ಪಾದಯಾತ್ರೆ ಯಶಸ್ವಿಯಾಗಿದೆ. ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯಕ್ಕೆ ಬಂದದ್ದು ಅದಕ್ಕೆ ಸಾಕ್ಷಿ. ಬಿಜೆಪಿ ಅವಧಿಯಲ್ಲೂ ಭ್ರಷ್ಟಾಚಾರ ನಡೆದಿತ್ತು ಎನ್ನುವ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಏಕೆ ಕೈಕಟ್ಟಿಕೊಂಡು ಕುಳಿತಿದೆ. ಇದೂ ಒಂದು ರೀತಿ ಹೊಂದಾಣಿಕೆ ರಾಜಕೀಯವೇ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT