ಬೆಂಗಳೂರು: ಅಧಿಕಾರದ ಗದ್ದುಗೆಗಾಗಿ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳೆರಡರಲ್ಲೂ ಆಂತರಿಕ ಬೇಗುದಿ ಬಲಗೊಳ್ಳುತ್ತಿರುವುದರ ಮಧ್ಯೆಯೇ ವಿಧಾನಮಂಡಲದ ಪ್ರಸಕ್ತ ವರ್ಷದ ಮೊದಲ ಅಧಿವೇಶನ ಸೋಮವಾರ ಆರಂಭವಾಗಲಿದೆ. ಆಂತರಿಕ ಸಂಘರ್ಷವನ್ನೇ ಪ್ರಬಲ ಅಸ್ತ್ರವನ್ನಾಗಿಸಿ ಎದುರಾಳಿಗಳನ್ನು ಸದನದಲ್ಲಿ ಕಟ್ಟಿಹಾಕುವ ಉಮೇದಿನಲ್ಲಿ ಆಡಳಿತ– ವಿರೋಧಪಕ್ಷಗಳ ನಾಯಕರು ಇದ್ದಾರೆ.

ವಿಧಾನಮಂಡಲದ ಬೆಳಗಾವಿ ಅಧಿವೇಶನದ ಬಳಿಕ ರಾಜ್ಯ ರಾಜಕಾರಣದಲ್ಲಿನ ಪರಿಸ್ಥಿತಿ ತುಸು ಬದಲಾಗಿದೆ. ದರ ಏರಿಕೆ, ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ವಿಳಂಬ, ಕಾನೂನು ಸುವ್ಯವಸ್ಥೆ ರಕ್ಷಣೆಯಲ್ಲಿ ವೈಫಲ್ಯ, ಭ್ರಷ್ಟಾಚಾರದ ಆರೋಪಗಳು, ಮೈಕ್ರೊ ಫೈನಾನ್ಸ್ ಕಂಪನಿಗಳ ಹಾವಳಿ ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸಿದ್ಧತೆ ನಡೆಸಿವೆ.

ಬಿಜೆಪಿ ಮತ್ತು ಜೆಡಿಎಸ್ನ ಪ್ರಮುಖ ನಾಯಕರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಜಂಟಿ ಹೋರಾಟದ ಕಾರ್ಯತಂತ್ರ ರೂಪಿಸುವ ತಾಲೀಮು ನಡೆದಿದೆ. ಮೈಸೂರಿನ ಉದಯಗಿರಿಯಲ್ಲಿ ಪೊಲೀಸ್ ಠಾಣೆ ಮೇಲಿನ ಕಲ್ಲು ತೂರಾಟದ ಪ್ರಕರಣವನ್ನು ಸದನದಲ್ಲಿ ಪ್ರಸ್ತಾಪಿಸಿ ಆಡಳಿತರೂಢ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ನಿರ್ಧಾರಕ್ಕೆ ವಿರೋಧ ಪಕ್ಷಗಳು ಬಂದಿವೆ.

ಮೈಕ್ರೊ ಫೈನಾನ್ಸ್ ಕಂಪನಿಗಳು ಸಾಲ ವಸೂಲಿಗಾಗಿ ನಡೆಸಿದ ದೌರ್ಜನ್ಯಕ್ಕೆ ಬೇಸತ್ತು ರಾಜ್ಯದ ವಿವಿಧೆಡೆ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ಮೈಕ್ರೊ ಫೈನಾನ್ಸ್ ಕಂಪನಿಗಳು ಮತ್ತು ಅನಧಿಕೃತ ಲೇವಾದೇವಿದಾರರ ನಿಯಂತ್ರಣಕ್ಕೆ ಸುಗ್ರೀವಾಜ್ಞೆ ಹೊರಡಿಸಿದೆ. ಆದರೂ, ಅಲ್ಲಲ್ಲಿ ದೌರ್ಜನ್ಯದ ಪ್ರಕರಣಗಳು ವರದಿಯಾಗುತ್ತಲೇ ಇವೆ. ಈ ವಿಷಯವನ್ನೇ ಪ್ರಧಾನವಾಗಿ ವಿಧಾನಮಂಡಲದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಯೋಜನೆ ವಿರೋಧ ಪಕ್ಷಗಳಲ್ಲಿದೆ.

‘ನಮ್ಮ ಮೆಟ್ರೊ’ ಪ್ರಯಾಣ ದರ ಏರಿಕೆ, ರಾಜ್ಯ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಏರಿಕೆ ಬೆನ್ನಲ್ಲೇ ವಿದ್ಯುತ್, ನೀರಿನ ದರ ಏರಿಕೆಗೂ ಪ್ರಸ್ತಾವಗಳು ಸಲ್ಲಿಕೆಯಾಗಿವೆ. ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸಿದ ಪರೀಕ್ಷೆಯಲ್ಲಿ ಆಗಿರುವ ಲೋಪ, ರೈತರ ಆತ್ಮಹತ್ಯೆ ಪ್ರಕರಣಗಳು, ಬೆಳಗಾವಿಯಲ್ಲಿ ಕನ್ನಡ ಭಾಷಿಕ ಬಸ್ ನಿರ್ವಾಹಕನ ಮೇಲೆ ನಡೆದಿರುವ ದಾಳಿ ಸೇರಿ ಹಲವು ಪ್ರಕರಣಗಳನ್ನು ಸದನದ ಪ್ರಸ್ತಾಪಿಸಲು ಬಿಜೆಪಿ ಮತ್ತು ಜೆಡಿಎಸ್ ತಯಾರಿ ಮಾಡಿಕೊಂಡಿವೆ.

‘ಗ್ಯಾರಂಟಿ’ ಗೊಂದಲವೂ ಅಸ್ತ್ರ: ಗ್ಯಾರಂಟಿ ಯೋಜನೆಗಳ ಕುರಿತು ಸಚಿವರು ನೀಡುತ್ತಿರುವ ವಿಭಿನ್ನ ಹೇಳಿಕೆಗಳನ್ನೂ ಪ್ರಸ್ತಾಪಿಸಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಲೂ ವಿರೋಧ ಪಕ್ಷಗಳು ಸಜ್ಜಾಗಿವೆ. ಗ್ಯಾರಂಟಿ ಯೋಜನೆಗಳ ಸಹಾಯಧನ ಬಿಡುಗಡೆ ವಿಳಂಬ ಆಗಿರುವುದು, ಯೋಜನೆಗಳ ಭವಿಷ್ಯದ ಕುರಿತು ಕೆಲವು ಸಚಿವರು ನೀಡಿರುವ ಹೇಳಿಕೆಗಳನ್ನು ವಿರೋಧಪಕ್ಷಗಳು ಅಸ್ತ್ರವಾಗಿ ಬಳಸುವ ಸಾಧ್ಯತೆಗಳಿವೆ.

ಪ್ರತ್ಯುತ್ತರಕ್ಕೆ ಸರ್ಕಾರ ಸಜ್ಜು: ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆ ಮತ್ತು ಬಜೆಟ್ ಮೇಲಿನ ಚರ್ಚೆಯೂ ಸೇರಿದಂತೆ ವಿಧಾನಮಂಡಲದಲ್ಲಿ ವಿರೋಧ ಪಕ್ಷಗಳು ಪ್ರಸ್ತಾಪಿಸಬಹುದಾದ ವಿಷಯಗಳ ಕುರಿತು ಬಲವಾದ ಉತ್ತರ ನೀಡುವ ತಯಾರಿಯನ್ನು ಸರ್ಕಾರ ಮಾಡಿಕೊಳ್ಳುತ್ತಿದೆ. ಹಿಂದೆ ಬಿಜೆಪಿ ಹಾಗೂ ಜೆಡಿಎಸ್ ನೇತೃತ್ವದ ಸರ್ಕಾರಗಳ ಅವಧಿಯಲ್ಲಿ ನಡೆದ ಪ್ರಕರಣಗಳನ್ನೇ ಆಧಾರವಾಗಿಟ್ಟುಕೊಂಡು ಪ್ರತಿಪಕ್ಷಗಳ ಬಾಯಿ ಮುಚ್ಚಿಸುವ ತಂತ್ರಗಾರಿಕೆಯನ್ನು ಆಡಳಿತರೂಢ ‘ಕೈ’ ಪಾಳಯ ಮಾಡುತ್ತಿದೆ.

ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚು ಅನುದಾನ ದೊರಕದೇ ಇರುವುದು, ತೆರಿಗೆ ಪಾಲು ಹಂಚಿಕೆಯಲ್ಲಿ ಮುಂದುವರಿದ ನಷ್ಟ ಸೇರಿದಂತೆ ಹಲವು ವಿಷಯಗಳನ್ನು ಪ್ರತಿಪಕ್ಷಗಳ ವಿರುದ್ಧದ ಅಸ್ತ್ರವಾಗಿ ಸರ್ಕಾರ ಬಳಸಿಕೊಳ್ಳುವ ಸಂಭವವಿದೆ.

ವಿವಿಧ ಮಸೂದೆಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರ ಜತೆಗಿನ ಸಂಘರ್ಷವೂ ಚರ್ಚೆಗೆ ಬರುವ ಸಾಧ್ಯತೆ ಇದೆ. ಬೆಳಗಾವಿ ಅಧಿವೇಶನ ಕೊನೆಯ ದಿನ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮತ್ತು ಸಚಿವೆ ಲಕ್ಷ್ಮಿಹೆಬ್ಬಾಳಕರ ಅವರ ಮಧ್ಯೆ ನಡೆದ ಮಾತಿನ ಚಕಮಕಿ, ಅದರ ಬೆನ್ನಲ್ಲೇ ನಡೆದ ವಿದ್ಯಮಾನಗಳು ಈ ಬಾರಿಯೂ ಪ್ರತಿಧ್ವನಿಸುವ ಸಾಧ್ಯತೆ ಇದೆ.

ಇಬ್ಬರ ಚಿತ್ತವೂ ಸಂಘರ್ಷದತ್ತ: ಆಡಳಿತಾರೂಢ ಕಾಂಗ್ರೆಸ್ನಲ್ಲಿ ಕೆಲವು ದಿನಗಳಿಂದ ಅಧಿಕಾರ ಹಂಚಿಕೆ ಕುರಿತ ಚರ್ಚೆ ಬಿರುಸು ಪಡೆದಿದೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವರಾದ ಸತೀಶ ಜಾರಕಿಹೊಳಿ, ಕೆ.ಎನ್. ರಾಜಣ್ಣ, ಜಿ. ಪರಮೇಶ್ವರ ಮತ್ತಿತರ ಮಧ್ಯೆ ಮುನಿಸು ಬಲಗೊಳ್ಳುತ್ತಲೇ ಇದೆ. ‘ಕೈ’ ಪಾಳಯದಲ್ಲಿನ ಆಂತರಿಕ ಸಂಘರ್ಷ ಸದನದೊಳಗೆ ಮೇಲುಗೈ ಸಾಧಿಸಲು ತಮಗೆ ಅನುಕೂಲ ಮಾಡಿಕೊಡಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ, ಜೆಡಿಎಸ್ ನಾಯಕರಿದ್ದಾರೆ.

ಅತ್ತ ಬಿಜೆಪಿಯಲ್ಲಿ ಆಂತರಿಕ ಬೇಗುದಿಯ ಬೆಂಕಿ ಆರುತ್ತಲೇ ಇಲ್ಲ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಭಿನ್ನಮತೀಯರ ಗುಂಪು ಬಂಡಾಯದ ಕಹಳೆ ಮೊಳಗಿಸುತ್ತಲೇ ಇದೆ. ಜೆಡಿಎಸ್ನಲ್ಲೂ ನಾಯಕತ್ವದ ವಿರುದ್ಧದ ಅಸಮಾಧಾನ ಹೊಗೆಯಾಡುತ್ತಿದೆ. ಜಿ.ಟಿ. ದೇವೇಗೌಡ ಅವರು ಮೌನಕ್ಕೆ ಜಾರಿದ್ದು, ಸರ್ಕಾರದ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡುವವರೇ ಇಲ್ಲದ ಸ್ಥಿತಿ ಇದೆ. ವಿಪಕ್ಷಗಳೊಳಗಿನ ಬಿಕ್ಕಟ್ಟು ಅಧಿವೇಶನದಲ್ಲಿ ಮೇಲುಗೈ ಸಾಧಿಸಲು ನೆರವಾಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ಆಡಳಿತಾರೂಢ ಕಾಂಗ್ರೆಸ್ ನಾಯಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.