ಬೆಂಗಳೂರು: ದಿನಗಳು ಕಳೆದಂತೆಲ್ಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ‘ಸರಳತೆ’ಯ ಬಣ್ಣ ತೊಳೆಯುತ್ತಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ರಸ್ತೆಗಳಲ್ಲಿ ಹಂಪ್ಸ್ ತೆಗೆದು ಹಾಕಿರುವ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಸವರಾಜ ಬೊಮ್ಮಾಯಿ ಅವರು ಸಿ.ಎಂ ಅಂದರೆ ಕಾಮನ್ ಮ್ಯಾನ್ ಎಂದಿದ್ದರು. ಆದರೆ, ಈಗ ಸಿಎಂ ಪ್ರಯಾಣಿಸುತ್ತಾರೆ ಎನ್ನುವ ಒಂದೇ ಕಾರಣಕ್ಕೆ 50 ಕಡೆ ರಸ್ತೆಯ ಉಬ್ಬುಗಳನ್ನು ತೆಗೆಯಲಾಗಿದೆ. ಇದೇನಾ ಸರಳತೆ?’ ಎಂದು ಪ್ರಶ್ನಿಸಿದೆ.

‘ರಸ್ತೆಯ ಉಬ್ಬು ತೆಗೆಯಲು, ಹಾಕಲು ತಗುಲುವ ಖರ್ಚು ಅನಗತ್ಯವಲ್ಲವೇ?, ಕಾಲ ಕಳೆದಂತೆಲ್ಲ ಸಿ.ಎಂ ಅವರ ‘ಸರಳತೆ’ಯ ಬಣ್ಣ ತೊಳೆಯುತ್ತಿದೆ. ವಿಜೃಂಭಣೆಯ ಬಣ್ಣ ಮಿಂಚುತ್ತಿದೆ’ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಇದನ್ನೂ ಓದಿ... ಆರೋಗ್ಯ ಸಿಬ್ಬಂದಿಗೆ ಭಾನುವಾರ ರಜೆ ಕಡಿತ: ಸರ್ಕಾರದ ಚಿಂತನೆ ಬಗ್ಗೆ ಸಿ.ಎಂ ಸುಳಿವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.