ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀರೊ ಟ್ರಾಫಿಕ್ ಬೇಡವೆಂದು ಸಿದ್ದರಾಮಯ್ಯ ಹೇಳಿದ್ದು ಸುದ್ದಿಗಾಗಿ ಮಾತ್ರ: ಬಿಜೆಪಿ ಲೇವಡಿ

Published 4 ಜೂನ್ 2023, 7:43 IST
Last Updated 4 ಜೂನ್ 2023, 7:43 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗೆ ಜೀರೊ ಟ್ರಾಫಿಕ್‌ ಬೇಡವೆಂದು ಹೇಳಿದ್ದು ಸುದ್ದಿಯಾಗುವುದಕ್ಕೆ ಮಾತ್ರ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಜೀರೊ ಟ್ರಾಫಿಕ್‌ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯ ಅವರು ಸದ್ದಿಲ್ಲದೆ ಮತ್ತೆ ಜೀರೊ ಟ್ರಾಫಿಕ್‌ನಲ್ಲಿ ಓಡಾಡುತ್ತಿದ್ದಾರೆ. ಇದು ರಿವರ್ಸ್ ಗೇರ್ ಕಾಂಗ್ರೆಸ್ ಎಂದು ನಾವು ಅಂದೇ ಹೇಳಿದ್ದೆವು. ಈಗದು ಪ್ರತ್ಯಕ್ಷವಾಗಿ ಸಾಬೀತಾಗುತ್ತಿದೆ ಎನ್ನುವುದು ರಾಜ್ಯದ ಪಾಲಿಗೆ ಖೇದಕರ’ ಎಂದು ಟೀಕಿಸಿದೆ.

200 ಯುನಿಟ್‌ ಉಚಿತ ವಿದ್ಯುತ್‌ ಯೋಜನೆ ದೋಖಾ ಎಂದು ದಿನಹೋದಂತೆ ಸಾಬೀತಾಗುತ್ತಿದೆ. 200 ಯುನಿಟ್‌ ಉಚಿತ ಅಂದಿಲ್ಲವೆಂದು ಇಂಧನ ಸಚಿವರೇ ರಿವರ್ಸ್‌ ಕನೆಕ್ಷನ್‌ ಕೊಡುತ್ತಿದ್ದಾರೆ. ಜನ, ಕೈಗಾರಿಕೆ ಮತ್ತು ಉದ್ಯೋಗ ಸೃಷ್ಟಿಗೆ ಶಾಕ್‌ ಮಾತ್ರವಲ್ಲ ಶಾರ್ಟ್‌ ಸರ್ಕ್ಯೂಟ್‌ನ ಅನುಭವ ಕೊಡಲು ಸಚಿವ ಕೆ.ಜೆ.ಜಾರ್ಜ್ ಅವರು ಸನ್ನದ್ಧರಾಗಿದ್ದಾರೆ ಎಂದು ಬಿಜೆಪಿ ಕುಟುಕಿದೆ.

ಮೇ 20ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ತಮಗಿದ್ದ ಜೀರೊ ಟ್ರಾಫಿಕ್ ಸೌಲಭ್ಯ ತ್ಯಜಿಸಿದ್ದರು.

ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ. ಜೀರೊ ಟ್ರಾಪಿಕ್‌ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು.

ಆದರೆ, ನಿನ್ನೆ (ಶನಿವಾರ) ಸಂಜೆ ಬೆಂಗಳೂರಿನ ಸೌತ್ ಎಂಡ್ ಸರ್ಕಲ್‌ನಿಂದ ಲಾಲ್‌ಬಾಗ್ ವೆಸ್ಟ್ ಗೇಟ್‌ಗೆ ಪ್ರಯಾಣಿಸುವ ವೇಳೆ ಸಿದ್ದರಾಮಯ್ಯ ಅವರಿಗೆ ಜೀರೊ ಟ್ರಾಫಿಕ್ ಸೌಲಭ್ಯವನ್ನು ಪೊಲೀಸರು ಕಲ್ಪಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಈ ಭಾಗದಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಿದ್ದರಿಂದ ಮುಖ್ಯಮಂತ್ರಿ ಬೇರೊಂದು ಕಾರ್ಯಕ್ರಮಕ್ಕೆ ತುರ್ತು ತೆರಳಬೇಕಾಗಿದ್ದರಿಂದ ಟ್ರಾಫಿಕ್ ತೆರವು ಮಾಡಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT