ಬೆಂಗಳೂರು: ರಾಜ್ಯವನ್ನು ಸಮಸ್ಯೆಗಳ ಸರಮಾಲೆಯಲ್ಲಿ ಸಿಲುಕಿಸಿ ಕಾಂಗ್ರೆಸ್ ಶಾಸಕರು ಮಜಾ ಮಾಡಲು ಸಿಂಗಪುರ, ಮಲೇಷ್ಯಾ, ದುಬೈಗೆ ಪ್ರವಾಸ ಹೋಗುವ ಸಿದ್ಧತೆಯಲ್ಲಿದ್ದಾರೆ ಎಂದು ಬಿಜೆಪಿ ಆಕ್ರೋಶ ಹೊರಹಾಕಿದೆ.
ರಾಜ್ಯದಲ್ಲಿ ಮೇವು ಕೊರತೆ ನಿವಾರಣೆಗೆ ಏನು ಕ್ರಮ ಕೈಗೊಳ್ಳಲಾಗಿದೆ, ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಜ್ಯದ ಸ್ಥಿತಿಗತಿ ಅರ್ಥಮಾಡಿಸಲು ಇದುವರೆಗೆ ಏನು ಮಾಡಲಾಗಿದೆ, ಅಧಿಕಾರಕ್ಕೆ ಬಂದು ಐದು ತಿಂಗಳಾದರೂ ಶಾಸಕರು ತಮ್ಮ ಕ್ಷೇತ್ರಗಳಿಗೆ ಯಾವುದೇ ಅನುದಾನ ಕೊಡಿಸಿಲ್ಲವೇಕೆ ಹಾಗೂ ಬರ ನಿರ್ವಹಣೆಗಾಗಿ ₹500 ಕೋಟಿ ಮಾತ್ರವೇ ಉಳಿದಿರುವುದು ಸತ್ಯವೇ ಎಂಬ ಹಲವು ಪ್ರಶ್ನೆಗಳಿಗೆ ಶಾಸಕರು ವಿಮಾನ ಹತ್ತುವ ಮೊದಲು ಉತ್ತರ ನೀಡಲಿ ಎಂದು ಬಿಜೆಪಿ ಆಗ್ರಹಿಸಿದೆ.
ಇವುಗಳಿಗೆ ಉತ್ತರಿಸದೆ ವಿದೇಶಕ್ಕೆ ಹಾರುತ್ತಿರುವ ಕಾಂಗ್ರೆಸ್ ಶಾಸಕರ ಗುರಿ ಭ್ರಷ್ಟಾಚಾರ ಮಾಡಿ, ಹಣ ಸಂಗ್ರಹಿಸುವುದಷ್ಟೇ ಆಗಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.