ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರು ಇಂತಿಷ್ಟೇ ತಿನ್ನಬೇಕು ಎಂಬ ಹೆಗ್ಗಳಿಕೆ ಉಮೇಶ್ ಕತ್ತಿ ಅವರದ್ದು: ಕಾಂಗ್ರೆಸ್

Last Updated 3 ಫೆಬ್ರುವರಿ 2022, 9:37 IST
ಅಕ್ಷರ ಗಾತ್ರ

ಬೆಂಗಳೂರು: ‘ಬಡವರು ‘ಇಂತಿಷ್ಟೇ ತಿನ್ನಬೇಕು’ ಎಂದು ಹಸಿವನ್ನು ನಿಯಂತ್ರಿಸಲು ಹೊರಟ ಜಗತ್ತಿನ ಮೊಟ್ಟ ಮೊದಲ ಸಚಿವರು ಎಂಬ ಹೆಗ್ಗಳಿಕೆ ಉಮೇಶ್‌ ಕತ್ತಿ ಅವರದ್ದು!’ ಎಂದು ಕಾಂಗ್ರೆಸ್ ಆರೋಪಿಸಿದೆ.

‘ಒಬ್ಬರಿಗೆ ತಿಂಗಳಿಗೆ 5 ಕೆ.ಜಿ ಅಕ್ಕಿ ಸಾಕು’ ಎಂಬ ಆಹಾರ ಮತ್ತು‌ ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಅವರ ಹೇಳಿಕೆ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಸಮಾಜದ ಹಾಗೂ ಬಡವರ ಕಷ್ಟನಷ್ಟಗಳ ಬಗ್ಗೆ ಕಿಂಚಿತ್ತೂ ಅರಿವಿರದ ಆಹಾರ ಸಚಿವರಿಗೆ ತಿಳಿದಿರುವುದು ಉಡಾಫೆ ಮಾತುಗಳಷ್ಟೇ’ ಎಂದು ವಾಗ್ದಾಳಿ ನಡೆಸಿದೆ.

‘ಅನ್ನಭಾಗ್ಯದ ಅಕ್ಕಿ ಕಡಿತಗೊಳಿಸಿದ್ದಷ್ಟೇ ಇವರ ಸಾಧನೆ’ ಎಂದು #ಬಿಜೆಪಿಯಅಸಮರ್ಥರು ಹ್ಯಾಷ್‌ಟ್ಯಾಗ್‌ ಬಳಸಿ ಉಮೇಶ್‌ ಕತ್ತಿ ಅವರ ಕಾರ್ಯವೈಖರಿಯನ್ನು ಕಾಂಗ್ರೆಸ್‌ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT