ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆಯಲ್ಲಿ ತಂದಿದ್ದ ಬದಲಾವಣೆಗಳಿಂದಾಗಿ ಪದವಿಪೂರ್ವ ಶಿಕ್ಷಣದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದಾಖಲೆ ಸೃಷ್ಟಿಯಾಗಿದೆ.

2022-23ನೇ ಸಾಲಿನ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಲಾಗಿದ್ದು, 5,24,209 (ಶೇ 74.67) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ಸಾಲಿನ ಫಲಿತಾಂಶಕ್ಕೆ ಹೋಲಿಸಿದರೆ (ಶೇ 61.88) ಈ ಬಾರಿಯ ಫಲಿತಾಂಶದಲ್ಲಿ ಶೇ 12.79ರಷ್ಟು ಹೆಚ್ಚಳವಾಗಿದೆ. ಒಟ್ಟಾರೆ ಫಲಿತಾಂಶವನ್ನು ಗಮನಿಸಿದರೆ ಬಾಲಕಿಯರು ಮೇಲುಗೈ ಸಾಧಿಸಿ, ಫಲಿತಾಂಶದ ಮುನ್ನಡೆ ಸಾಧಿಸುವ ತಮ್ಮ ಹೆಗ್ಗಳಿಕೆಯನ್ನು ಉಳಿಸಿಕೊಂಡಿದ್ದಾರೆ.

ಈ ಬಾರಿಯ ಪ್ರಶ್ನೆಪತ್ರಿಕೆಯಲ್ಲಿ 15ರಿಂದ 20ರಷ್ಟು ಅಂಕಗಳನ್ನು ಬಹು ಆಯ್ಕೆ ಪ್ರಶ್ನೆಗಳಿಗೆ ನೀಡಲಾಗಿತ್ತು. ಜತೆಗೆ, ಶೇ 5ರಷ್ಟು ಉತ್ತೇಜಕ ಅಂಕಗಳನ್ನು ನೀಡಿದ್ದರಿಂದ ಫಲಿತಾಂಶ ಹೆಚ್ಚಳವಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಮೂಲಗಳು ಹೇಳಿವೆ.

ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಅನನ್ಯ ಕೆ.ಎ. 600ಕ್ಕೆ 600 ಅಂಕ ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ ಬೆಂಗಳೂರು ಜಯನಗರದ ಎನ್ಎಂಕೆಆರ್ವಿ ಮಹಿಳಾ ಕಾಲೇಜಿನ ತಬಸ್ಸುಮ್ ಶೇಖ್ 593 ಅಂಕ, ವಿಜ್ಞಾನ ವಿಭಾಗದಲ್ಲಿ ಕೋಲಾರ ಜಿಲ್ಲೆ ಶ್ರೀನಿವಾಸಪುರದ ಜ್ಞಾನಗಂಗೊತ್ರಿ ಕಾಲೇಜಿನ ಎಸ್.ಎಂ.ಕೌಶಿಕ್ ಹಾಗೂ ಜಯನಗರ ಆರ್ವಿ ಪಿಯು ಕಾಲೇಜಿನ ಸುರಭಿ ಎಸ್. ತಲಾ 596 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ
ಪಡೆದಿದ್ದಾರೆ.

ವಿಜ್ಞಾನ ವಿದ್ಯಾರ್ಥಿಗಳೇ ಮುಂದು: ಕಲಾ, ವಿಜ್ಞಾನ, ವಾಣಿಜ್ಯ ವಿಭಾಗ ಸೇರಿದಂತೆ 7,25,821 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು. 7,02,067 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 2,41,616 ವಿದ್ಯಾರ್ಥಿಗಳಲ್ಲಿ 2,07,087 ವಿದ್ಯಾರ್ಥಿಗಳು, ಕಲಾ ವಿಭಾಗದ 2,20,305 ವಿದ್ಯಾರ್ಥಿಗಳಲ್ಲಿ 1,34,876, ವಾಣಿಜ್ಯ ವಿಭಾಗದ 2,40,146 ವಿದ್ಯಾರ್ಥಿಗಳಲ್ಲಿ 1,82,246 ವಿದ್ಯಾರ್ಥಿಗಳು
ತೇರ್ಗಡೆಯಾಗಿದ್ದಾರೆ.

ದ.ಕ ಪ್ರಥಮ, ಯಾದಗಿರಿಗೆ ಕೊನೆ: ದಕ್ಷಿಣ ಕನ್ನಡ ಜಿಲ್ಲೆಯ ಶೇ 95.33ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಈ ಬಾರಿಯೂ ಅಗ್ರ ಸ್ಥಾನಉಳಿಸಿಕೊಂಡಿದೆ. ಶೇ 62.98ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿರುವ ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಕಳೆದ ಬಾರಿ ಕೊನೆಯ ಸ್ಥಾನದಲ್ಲಿದ್ದ ಚಿತ್ರದುರ್ಗ ಜಿಲ್ಲೆ ಶೇ 9ರಷ್ಟು ಫಲಿತಾಂಶ ವೃದ್ಧಿಸಿಕೊಂಡು 28ನೇ ಸ್ಥಾನಕ್ಕೆ ಜಿಗಿದಿದೆ.

1,09,509 ವಿದ್ಯಾರ್ಥಿಗಳು ಉನ್ನತ ಶ್ರೇಣಿ: ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ 1,09,509 ವಿದ್ಯಾರ್ಥಿಗಳು ಉನ್ನತ ಶ್ರೇಣಿ (ಶೇ 85ಕ್ಕಿಂತ ಹೆಚ್ಚು) ಪಡೆದಿದ್ದಾರೆ. 2,47,315 ವಿದ್ಯಾರ್ಥಿಗಳು ಪ್ರಥಮ ದರ್ಜೆ, 90,014 ದ್ವಿತೀಯ ದರ್ಜೆ ಹಾಗೂ 77,371 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ
ತೇರ್ಗಡೆಯಾಗಿದ್ದಾರೆ.

ಉತ್ತೇಜಕ ಅಂಕದ ಲಾಭ: ಕೋವಿಡ್ ಸಮಯದಲ್ಲಿ ನೀಡಿದ್ದ ಗರಿಷ್ಠ 10 ಉತ್ತೇಜಕ ಅಂಕಗಳನ್ನು ಈ ಬಾರಿಯೂ ನೀಡಲಾಗಿದೆ. ಗರಿಷ್ಠ ಎರಡು ವಿಷಯಗಳಿಗೆ ನೀಡಿದ್ದ ತಲಾ ಶೇ 5ರಷ್ಟು ಉತ್ತೇಜಕ ಅಂಕಗಳ ಲಾಭ ಪಡೆದು 10,153 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಪೂರಕ ಪರೀಕ್ಷೆ: ಶುಲ್ಕ ಪಾವತಿಗೆ ಏ. 28 ಕೊನೇ ದಿನ

ಅನುತ್ತೀರ್ಣರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಶುಲ್ಕ ಪಾವತಿಸಲು ಏ.21ರಿಂದ 28ರವರೆಗೆ ಅವಕಾಶ ಕಲ್ಪಿಸಲಾಗಿದೆ. ಮೇ 4ರ ಒಳಗೆ ದಂಡ ಸಹಿತ ಶುಲ್ಕ ಪಾವತಿಸಬಹುದು. ಅರ್ಜಿ ಸಲ್ಲಿಸಲು ಬಯಸುವವರು ಮರು ಮೌಲ್ಯಮಾಪನದ ಫಲಿತಾಂಶಕ್ಕೆ ಕಾಯುವ ಅಗತ್ಯವಿಲ್ಲ ಎಂದು ಮಂಡಳಿ ಅಧ್ಯಕ್ಷ ರಾಮಚಂದ್ರನ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಫಲಿತಾಂಶದ ಪ್ರತಿಯನ್ನು ಪಿಯು ಪರೀಕ್ಷಾ ಪೋರ್ಟಲ್ ಮೂಲಕ ಆಯಾ ವಿದ್ಯಾರ್ಥಿಗಳಿಗೆ ಕಳುಹಿಸಲಾಗುವುದು. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡುವುದಿಲ್ಲ. ಮಂಡಳಿ ನೀಡಿದ ಫಲಿತಾಂಶದ ಪಟ್ಟಿ ಆಧಾರದಲ್ಲಿ ಹಾಗೂ ಉತ್ತೀರ್ಣರಾದವರು ಫಲಿತಾಂಶ ತಿರಸ್ಕರಿಸಿ, ಫಲಿತಾಂಶದ ಪ್ರತಿ ಸಲ್ಲಿಸಿ ಪೂರಕ ಪರೀಕ್ಷೆ ತೆಗೆದುಕೊಳ್ಳಬಹುದು.

78 ಕಾಲೇಜು ಶೂನ್ಯ, 317ರಲ್ಲಿ ಶೇ 100ರಷ್ಟು ಉತ್ತೀರ್ಣ

ರಾಜ್ಯದ 78 ಪದವಿಪೂರ್ವ ಕಾಲೇಜುಗಳ ಒಬ್ಬ ವಿದ್ಯಾರ್ಥಿಯೂ ಉತ್ತೀರ್ಣ ಆಗಿಲ್ಲ. 73 ಖಾಸಗಿ ಹಾಗೂ 5 ಅನುದಾನಿತ ಕಾಲೇಜುಗಳಲ್ಲಿ ಒಬ್ಬ ವಿದ್ಯಾರ್ಥಿಯೂ ತೇರ್ಗಡೆಯಾಗಿಲ್ಲ.

264 ಖಾಸಗಿ, 42 ಸರ್ಕಾರಿ, 10 ಅನುದಾನಿತ ಹಾಗೂ ಒಂದು ವಿಭಜಿತ ಪಿಯು ಕಾಲೇಜುಗಳು ಸೇರಿ 317 ಕಾಲೇಜುಗಳ ಶೇ 100ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.