ಮೈಸೂರು: ಕೋವಿಡ್ ಕಾರಣ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯನ್ನು (ಕೆ–ಸೆಟ್) ಈಗಾಗಲೇ ಎರಡು ಬಾರಿ ಮುಂದೂಡಿರುವ ಮೈಸೂರು ವಿಶ್ವವಿದ್ಯಾಲಯವು ಹೊಸದಾಗಿ ದಿನಾಂಕ ನಿಗದಿ ಮಾಡಲು ಪರದಾಡುತ್ತಿದೆ.

ಸುಮಾರು 85 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಮೂರು ತಿಂಗಳಾಗಿದ್ದು, ಪರೀಕ್ಷೆಯ ದಿನಾಂಕ ಪ್ರಕಟಣೆ ಆಗುವುದನ್ನೇ ಕಾಯುತ್ತಿದ್ದಾರೆ. ಈ ನಡುವೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆ ಭರ್ತಿಗಾಗಿ ಸದ್ಯದಲ್ಲೇ ಅರ್ಜಿ ಆಹ್ವಾನಿಸುವ ಸೂಚನೆಯನ್ನು ರಾಜ್ಯ ಸರ್ಕಾರ ನೀಡಿದೆ. ಅಷ್ಟರೊಳಗೆ ಕೆ–ಸೆಟ್ ಪರೀಕ್ಷೆ ನಡೆದು ಫಲಿತಾಂಶ ಪ್ರಕಟವಾದರೆ ಅರ್ಜಿ ಸಲ್ಲಿಸಲು ಅರ್ಹತೆ ಗಿಟ್ಟಿಸಿಕೊಳ್ಳಬಹುದೆಂಬುದು ಅಭ್ಯರ್ಥಿಗಳ ನಿರೀಕ್ಷೆ.

‘ಪರೀಕ್ಷೆ ನಡೆಸುವ ವಿಚಾರವಾಗಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಜೊತೆ ಚರ್ಚೆ ನಡೆಸಲಾಗಿದೆ. ದಿನಾಂಕ ನಿಗದಿ ಮಾಡಿ ಮತ್ತೆ ಮುಂದೂಡಬೇಕಾದ ಪರಿಸ್ಥಿತಿ ಬಂದರೆ ಕಷ್ಟ. ಈಗಾಗಲೇ ಎರಡು ಬಾರಿ ಮುಂದೂಡಲಾಗಿದೆ. ಕೋವಿಡ್‌ನಿಂದಾಗಿ ತೊಂದರೆ ಉಂಟಾಗಿದೆ’ ಎಂದು ಕೆ–ಸೆಟ್ ಸಂಯೋಜಕ ಪ್ರೊ.ಎಚ್.ರಾಜಶೇಖರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ರಾಜ್ಯ ಸರ್ಕಾರ ಅರ್ಜಿ ಕರೆದು ಪರೀಕ್ಷೆ ನಡೆಸಲು ಹೆಚ್ಚು ಸಮಯ ಬೇಕಾಗುತ್ತದೆ. ಅಷ್ಟರಲ್ಲಿ ನಮ್ಮ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸುತ್ತೇವೆ. ಕೆ–ಸೆಟ್ ಪರೀಕ್ಷೆ ಪ್ರಕ್ರಿಯೆಗೆ ಮೂರು ತಿಂಗಳು ಸಾಕು. ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತೇವೆ’ ಎಂದು ಭರವಸೆ ನೀಡಿದರು.

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸುಪರ್ದಿಯಲ್ಲಿ ನಡೆಯುವ ಈ ಪರೀಕ್ಷೆಗೆ ಮೈಸೂರು ವಿಶ್ವವಿದ್ಯಾಲಯವು ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದುವರೆಗೆ 9 ಬಾರಿ ಪರೀಕ್ಷೆ ನಡೆಸಿದ್ದು, ಈಗ ನಡೆಯಬೇಕಿರುವುದು 10ನೆಯದ್ದು.

ಬೆಂಗಳೂರು, ಮೈಸೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮಂಗಳೂರು, ಶಿವಮೊಗ್ಗ ಮತ್ತು ತುಮಕೂರಿನಲ್ಲಿರುವ ನೋಡೆಲ್ ಕೇಂದ್ರಗಳಲ್ಲಿ 41 ವಿಷಯಗಳಲ್ಲಿ ಪರೀಕ್ಷೆ ನಡೆಯಲಿದೆ.

‘ಈಗಾಗಲೇ ಪ್ರಶ್ನೆ ಪತ್ರಿಕೆ ರೂಪಿಸಿ ಸೀಲ್ ಮಾಡಿದ್ದೇವೆ. ಹೀಗಾಗಿ, ಯಾವ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿದ್ದರೋ ಅಲ್ಲೇ ಬರೆಯಬೇಕು’ ಎಂದು ಪ್ರೊ.ರಾಜಶೇಖರ್ ಹೇಳಿದರು.

ಈಗಾಗಲೇ 2 ಬಾರಿ ಮುಂದೂಡಿಕೆ
ಏ.11ರಂದು ನಿಗದಿಯಾಗಿದ್ದ ಕೆ–ಸೆಟ್ ಪರೀಕ್ಷೆಯನ್ನು ಈಗಾಗಲೇ ಎರಡು ಬಾರಿ ಮುಂದೂಡಲಾಗಿದೆ.

ಸಾರಿಗೆ ನೌಕರರ ಮುಷ್ಕರ ಕಾರಣ 11ರಿಂದ ಏ.25ಕ್ಕೆ ಮುಂದೂಡಲಾಗಿತ್ತು. ಕೊರೊನಾ ಸೋಂಕು ನಿಯಂತ್ರಿಸಲು ಕರ್ಫ್ಯೂ ವಿಧಿಸಿದ ಕಾರಣ ಎರಡನೇ ಬಾರಿ ಮುಂದಕ್ಕೆ ಹಾಕಲಾಯಿತು. 2020ರಲ್ಲೂ ಕೋವಿಡ್ ಕಾರಣ ಕೆ–ಸೆಟ್ ಪರೀಕ್ಷೆಯನ್ನು 3 ಬಾರಿ ಮುಂದೂಡಲಾಗಿತ್ತು.

ಪರೀಕ್ಷೆ ನಡೆಸಲು ಹೆಚ್ಚು ವಿಳಂಬ ಮಾಡುವುದಿಲ್ಲ. ಶೀಘ್ರವೇ ರಾಜ್ಯ ಸರ್ಕಾರದ ಜೊತೆ ಚರ್ಚಿಸಿ ದಿನಾಂಕ ಅಂತಿಮಗೊಳಿಸುತ್ತೇವೆ.
-ಪ್ರೊ.ಎಚ್.ರಾಜಶೇಖರ್,ಕೆ–ಸೆಟ್ ಸಂಯೋಜಕ, ಮೈಸೂರು ವಿ.ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.