ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿವರ್ತನಾ ಸಂಸ್ಥೆ: ರಾಜೀವ್‌ ಗೌಡ ಉಪಾಧ್ಯಕ್ಷ

Published 15 ಆಗಸ್ಟ್ 2023, 16:21 IST
Last Updated 15 ಆಗಸ್ಟ್ 2023, 16:21 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆಯ (ಯೋಜನಾ ಮಂಡಳಿ) ಉಪಾಧ್ಯಕ್ಷರಾಗಿ ರಾಜ್ಯಸಭೆಯ ಮಾಜಿ ಸದಸ್ಯ ಎಂ.ವಿ. ರಾಜೀವ್‌ ಗೌಡ ಅವರನ್ನು ನೇಮಿಸಲಾಗಿದೆ. 

ಅವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಲಾಗಿದೆ. ಆರ್ಥಿಕ ಮತ್ತು ಶಿಕ್ಷಣ ತಜ್ಞರಾದ ರಾಜೀವ್‌ ಗೌಡ ಅವರು ಬೆಂಗಳೂರಿನ ಐಐಎಂ ಪ್ರಾಧ್ಯಾಪಕರಾಗಿ, ಸಾರ್ವಜನಿಕ ನೀತಿ ಕೇಂದ್ರದ ಮುಖ್ಯಸ್ಥರಾಗಿ, ಆರ್‌ಬಿಐ ಕೇಂದ್ರ ಮಂಡಳಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯ ಸಂಚಾಲಕರಾಗಿದ್ದರು.

ಪ್ರಕಾಶ ಹುಕ್ಕೇರಿ ದೆಹಲಿ ಪ್ರತಿನಿಧಿ: 

ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ ಅವರನ್ನು ನೇಮಿಸಲಾಗಿದೆ. ಅವರಿಗೂ ಸಂಪುಟ ದರ್ಜೆಯ ಸ್ಥಾನ ನೀಡಲಾಗಿದೆ. ಹುಕ್ಕೇರಿ ಹಿಂದೆ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. 

ಪ್ರಕಾಶ ಹುಕ್ಕೇರಿ
ಪ್ರಕಾಶ ಹುಕ್ಕೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT