ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಮಳೆ: ಹೆಲಿಕಾಪ್ಟರ್‌ ಏರ್‌ಲಿಫ್ಟ್‌ಗೆ ಈ ಕ್ರಮ ಅನುಸರಿಸಿ

Last Updated 18 ಆಗಸ್ಟ್ 2018, 3:18 IST
ಅಕ್ಷರ ಗಾತ್ರ

ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಪ್ರವಾಹದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸೇನಾ ಹೆಲಿಕ್ಯಾಪ್ಟರ್ ಮೂಲಕಅಗತ್ಯ ವಸ್ತುಗಳ ರವಾನೆ ಮತ್ತು ಏರ್ ಲಿಫ್ಟ್ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ರಕ್ಷಣಾ ತಂಡದ ಗಮನ ಸೆಳೆಯಲು ಈಕೆಳಗಿನ ಕ್ರಮಗಳನ್ನುಅನುಸರಿಸಬೇಕೆಂದು ಭಾರತೀಯ ಸೇನೆ ಪ್ರಕಟಣೆ ಹೊರಡಿಸಿದೆ.

* ಹೆಲಿಕಾಪ್ಟರ್‌ ಹಾರಾಟವನ್ನು ಗಮನಿಸಿ.

* ಹೆಲಿಕಾಪ್ಟರ್‌ನಲ್ಲಿನ ತಂಡದ ಗಮನ ಸೆಳೆಯಲು
1. ಎತ್ತರದ ಪ್ರದೇಶಕ್ಕೆ ಬಂದು ಸೇರಿ.
2.ಬೆಂಕಿ ಅಥವಾ ಹೊಗೆ ಹಾಕಿ
3.ಇಲ್ಲವೇ ಬಣ್ಣದ ಬಟ್ಟೆಗಳನ್ನು ಹಾರಿಸಿ

ಐದಾರು ಹೆಲಿಕಾಪ್ಟರ್‌ಗಳು ತೀವ್ರ ಪ್ರವಾಹ ಪೀಡಿತ ಪ್ರದೇಶದಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಹಾರಾಟ ನಡೆಸಲಿವೆ. ಈ ಹಾರಾಟದ ವೇಳೆ ಕುಡಿಯುವ ನೀರು ಮತ್ತು ಪರಿಹಾರ ಸಾಮಗ್ರಿಗಳನ್ನೂ ವಿತರಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT