ಬೆಂಗಳೂರು: ‘ಭದ್ರಾ ಮೇಲ್ದಂಡೆ ಕಾಮಗಾರಿಯ ₹ 20 ಸಾವಿರ ಕೋಟಿ ಟೆಂಡರ್ನಲ್ಲಿ ಶೇ 10ರಷ್ಟು ಕಿಕ್ ಬ್ಯಾಕ್ ಪಡೆದಿದ್ದಾರೆ’ ಎಂಬ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆರೋಪದ ತನಿಖೆಗೆ ಜಂಟಿ ಸದನ ಸಮಿತಿ ರಚಿಸಬೇಕು’ ಎಂದು ಆಗ್ರಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ಮುಖ್ಯಮಂತ್ರಿ ನೇತೃತ್ವದಲ್ಲಿಯೇ ಸಮಿತಿ ರಚಿಸಲಿ’ ಎಂದು ಸಲಹೆ ನೀಡಿದರು.

‘ಈ ಆರೋಪದ ತನಿಖೆಯನ್ನು ಎಸಿಬಿಗೆ (ಭ್ರಷ್ಟಾಚಾರ ನಿಗ್ರಹ ದಳ) ಒಪ್ಪಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್, ‘ಯಾವ್ಯಾವ ಕೋಡ್
ಗಳಲ್ಲಿ ಬಿಲ್ ಪಾಸ್ ಆಗುತ್ತಿದೆ. ಯಾವ್ಯಾವ ಎಂಜಿನಿಯರ್ ಏನೇನು ಮಾಡುತ್ತಿದ್ದಾರೆ ಎಲ್ಲವೂ ಗೊತ್ತಿದೆ. ₹ 10
ಕೋಟಿಗೂ ಒಂದೊಂದು ಟೆಂಡರ್ ಕರೆ
ಯಲಾಗುತ್ತಿದೆ. ಜಲಸಂಪನ್ಮೂಲ ಖಾತೆ ಮುಖ್ಯಮಂತ್ರಿ ಬಳಿಯಿದೆ. ವಿಶ್ವನಾಥ್ ಆರೋಪಕ್ಕೆ ಮುಖ್ಯಮಂತ್ರಿ ಉತ್ತರ ಕೊಡ
ಬೇಕಿತ್ತು. ಯಾರೋ ಎಂ.ಡಿ ಕೈಯಲ್ಲಿ ಉತ್ತರ ಕೊಡಿಸಿದ್ದಾರೆ’ ಎಂದರು.

ಮುಚ್ಚಿ ಹಾಕುವ ಪ್ರಯತ್ನ: ‘ವಿಶ್ವನಾಥ್ ಮಾಡಿರುವ ಆರೋಪ ಎರಡು ಕಾರಣಗಳಿಗಾಗಿ ಗಂಭೀರ ಸ್ವರೂಪದ್ದು. ಮೊದಲನೆಯದಾಗಿ, ನೇರವಾಗಿ ಮುಖ್ಯಮಂತ್ರಿಯ ಮಗನ ಮೇಲೆ ಆರೋಪ ಮಾಡಲಾಗಿದೆ. ಎರಡನೆಯದಾಗಿ ಆಡಳಿತ ಪಕ್ಷದ ವಿಧಾನಪರಿಷತ್ ಸದಸ್ಯರೇ ಈ ಆರೋಪ ಮಾಡಿದ್ದಾರೆ. ತರಾತುರಿಯಲ್ಲಿ ನೀರಾವರಿ ಇಲಾಖೆ ಸ್ಪಷ್ಟನೆ ನೀಡಿರುವುದನ್ನು ನೋಡಿದರೆ ಹಗರಣ ಮುಚ್ಚಿಹಾಕುವ ಪ್ರಯತ್ನ ಸ್ಪಷ್ಟ’ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

‘ನಗರದ ಬಿಐಇಸಿಯಲ್ಲಿ ನಿರ್ಮಿಸಲಾಗಿದ್ದ ಕೋವಿಡ್ ಕೇರ್ ಸೆಂಟರ್ ಹಾಸಿಗೆ ಮತ್ತು ಬೆಡ್ಗಳ ಖರೀದಿ-ಮಾರಾಟದಲ್ಲಿ ಶಾಸಕ ಎಸ್.ಆರ್. ವಿಶ್ವನಾಥ್ ಭ್ರಷ್ಟಾಚಾರ ಎಸಗಿ
ದ್ದಾರೆ ಮತ್ತು ಭೂಹಗರಣದಲ್ಲಿ
ಭಾಗಿಯಾಗಿದ್ದಾರೆ ಎಂಬ ಎಚ್. ವಿಶ್ವನಾಥ್ ಅವರ ಇನ್ನೊಂದು ಆರೋ
ಪದ ಬಗ್ಗೆಯೂ ತನಿಖೆ ನಡೆಯಬೇಕು. ಸರ್ಕಾರವನ್ನು ಎಚ್.ವಿಶ್ವನಾಥ್ ‘ಗುತ್ತಿಗೆ
ದಾರರ ಸರ್ಕಾರ’ ಎಂದು ಬಣ್ಣಿಸಿರು
ವುದು ನೋಡಿದರೆ ಅವರ ಬಳಿ ಬೇರೆ ಸಚಿವರ ಭ್ರಷ್ಟಾಚಾರದ ಮಾಹಿತಿಯೂ ಇದ್ದಂತಿದೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.