ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಟಾರು ವಾಹನ ನಿರೀಕ್ಷಕರ ಆಯ್ಕೆಯಲ್ಲಿ ಅಕ್ರಮ ಆರೋಪ: ಕಾಂಗ್ರೆಸ್‌ ಆಕ್ರೋಶ

Last Updated 19 ಆಗಸ್ಟ್ 2022, 14:29 IST
ಅಕ್ಷರ ಗಾತ್ರ

ಬೆಂಗಳೂರು: ಮೋಟಾರು ವಾಹನ ನಿರೀಕ್ಷಕರ ಆಯ್ಕೆಯಲ್ಲಿನ ಅಕ್ರಮದ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಹರಿಹಾಯ್ದಿದೆ.

ಈ ಕುರಿತು ‘ಪ್ರಜಾವಾಣಿ’ ವರದಿಯನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿರುವ ಕೆಪಿಸಿಸಿ, ‘ಶೇ 40 ಸರ್ಕಾರದ ಹುದ್ದೆ ಮಾರಾಟ ಪರ್ವ ಮುಂದುವರೆದಿದೆ. ಪಿಎಸ್‌ಐ ಅಕ್ರಮದಂತೆ ಸಾರಿಗೆ ಇಲಾಖೆಯ ಬ್ರೇಕ್ ಇನ್‌ಸ್ಪೆಕ್ಟರ್‌ ಆಯ್ಕೆಯಲ್ಲೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ’ ಎಂದು ಹೇಳಿದೆ.

‘ಭ್ರಷ್ಟಾಚಾರದ ಕೂಪವಾಗಿರುವ ಕೆಪಿಎಸ್‌ಇಯೇ ಅನರ್ಹರೆಂದು ಗುರುತಿಸಿದ್ದ ಅಭ್ಯರ್ಥಿಗಳನ್ನು ಅರ್ಹರೆಂದು ಮುದ್ರೆ ಒತ್ತಿದ್ದೇಕೆ? ಇದರಲ್ಲೂ ಶೇ 40 ವಸೂಲಿ ನಡೆದಿರುವುದು ನಿಶ್ಚಿತ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಮೋಟಾರು ವಾಹನ ನಿರೀಕ್ಷಕ (ಐಎಂವಿ– ಬ್ರೇಕ್‌ ಇನ್‌ಸ್ಪೆಕ್ಟರ್‌) ಹುದ್ದೆಗೆ ಕೆಪಿಎಸ್‌ಸಿ ಪ್ರಕಟಿಸಿರುವ ಪರಿಷ್ಕೃತ ಅಂತಿಮ ಆಯ್ಕೆ ಪಟ್ಟಿಯಲ್ಲಿರುವ 141 ಅಭ್ಯರ್ಥಿಗಳಲ್ಲಿ, ಈ ಹುದ್ದೆಗೆ ‘ಅನರ್ಹ’ರೆಂದು ಕೆಪಿಎಸ್‌ಸಿಯೇ ಗುರುತಿಸಿದ್ದ 107 ಅಭ್ಯರ್ಥಿಗಳ ಹೆಸರುಗಳಿರುವುದು ಸಂಶಯಕ್ಕೆ ಕಾರಣವಾಗಿದೆ.

ಅನರ್ಹರೆಂದು ಗುರುತಿಸಲಾಗಿದ್ದವರ ಪೈಕಿ ಕೆಲವರಿಗೆ ಸಾರಿಗೆ ಇಲಾಖೆಯೇ ‘ಅರ್ಹತೆ’ಯ ಪ್ರಮಾಣಪತ್ರ ನೀಡಲು ಮುಂದಾಗಿದೆ ಎಂದೂ ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT