ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಲಕ್ಷ್ಮೀ: 1.09 ಕೋಟಿ ಕುಟುಂಬಗಳ ನೋಂದಣಿ

Published 15 ಆಗಸ್ಟ್ 2023, 16:25 IST
Last Updated 15 ಆಗಸ್ಟ್ 2023, 16:25 IST
ಅಕ್ಷರ ಗಾತ್ರ

ಉಡುಪಿ: ರಾಜ್ಯದ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ಗೃಹ ಲಕ್ಷ್ಮೀ ಯೋಜನೆಗೆ 1.28 ಕೋಟಿ ಕುಟುಂಬಗಳನ್ನು ಫಲಾನುಭವಿಗಳಾಗಿ ಗುರುತಿಸಲಾಗಿದ್ದು ಇದುವರೆಗೂ 1.09 ಕೋಟಿ ಕುಟುಂಬಗಳು ನೋಂದಣಿ ಮಾಡಿಸಿಕೊಂಡಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಪಡಿತರ ಕಾರ್ಡ್‌ನಲ್ಲಿ ಯಜಮಾನಿ ಹೆಸರಿಲ್ಲದಿದ್ದರೆ, ನಿಧನರಾಗಿದ್ದರೆ, ಯಜಮಾನನ ಹೆಸರಿದ್ದರೆ ಅಂಥಹ ಪಡಿತರ ಕಾರ್ಡ್‌ಗಳಿಗೂ ತಿಂಗಳೊಳಗೆ ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿಗೆ ಅವಕಾಶ ನೀಡಲಾಗುವುದು ಎಂದರು.

ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಸಂಬಂಧ ರಾಜ್ಯದಲ್ಲಿ ನಾಲ್ಕು ವಿಭಾಗಗಳನ್ನು ರಚಿಸಿ ಶೀಘ್ರ ಟೆಂಡರ್ ಆಹ್ವಾನಿಸಲಾಗುವುದು. ಮೊಟ್ಟೆಗಳು ಕೆಡದಂತೆ ವಿಭಾಗವಾರು ಅಥವಾ ಜಿಲ್ಲಾವಾರು ಶೀಥಲೀಕರಣ ಘಟಕ ಸ್ಥಾಪನೆಯ ಚಿಂತನೆ ಇದ್ದು ಮುಖ್ಯಮಂತ್ರಿ ಜತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT