ಬೆಂಗಳೂರು: ಓದು–ಬರವಣಿಗೆಗೆ ತೊಡಕಾಗುವ ಕಲಿಕಾ ನ್ಯೂನತೆ, ಏಕಾಗ್ರತೆ ಕೊರತೆಗೆ ಕಾರಣವಾಗುವ ‘ಹೈಪರ್ ಆ್ಯಕ್ಟಿವಿಟಿ’ಯಂತಹ ಸಮಸ್ಯೆಗಳು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಆರೋಗ್ಯ ಇಲಾಖೆಯು ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ (ಆರ್ಬಿಎಸ್ಕೆ) ನಡೆಸಿದ ತಪಾಸಣೆಯಲ್ಲಿ ದೃಢಪಟ್ಟಿದೆ.

ಈ ಸಮಸ್ಯೆಗಳು ಮಕ್ಕಳ ಕಲಿಕೆ ಮತ್ತು ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿರುವ ಕಾರಣ, ಸಮಸ್ಯೆಯ ತೀವ್ರತೆ ತಿಳಿದು ಚಿಕಿತ್ಸೆ ನೀಡಲು ಮಕ್ಕಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕಲಿಕೆ ಹಾಗೂ ನಡವಳಿಕೆ ಆಧಾರಿತ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಳವಾಗಲು, ದೈಹಿಕ ಚಟುವಟಿಕೆ ಕೊರತೆ, ಪಾಶ್ಚಾತ್ಯ ಆಹಾರ ಪದ್ಧತಿ ಹಾಗೂ ರೀಲ್ಸ್ಗಳ (ಕಿರು ವಿಡಿಯೊ) ಅತಿಯಾದ ವೀಕ್ಷಣೆಯೇ ಪ್ರಮುಖ ಕಾರಣವೆಂದು ಮನೋವೈದ್ಯರು ವಿಶ್ಲೇಷಿಸಿದ್ದಾರೆ.

ಆರ್ಬಿಎಸ್ಕೆ ಕಾರ್ಯಕ್ರಮದಡಿ 18 ವರ್ಷದೊಳಗಿನವರಿಗೆ ತಪಾಸಣೆ ನಡೆಸಲಾಗುತ್ತಿದೆ. ಹುಟ್ಟಿನ ದೋಷಗಳು, ರೋಗಗಳು ಮತ್ತು ಬೆಳವಣಿಗೆ ಕುಂಠಿತವನ್ನು ಗುರುತಿಸಿ, ಚಿಕಿತ್ಸೆ ನೀಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶ. 2024–25ನೇ ಸಾಲಿನಲ್ಲಿ 1.23 ಕೋಟಿ ಮಕ್ಕಳನ್ನು ಆರ್ಬಿಎಸ್ಕೆ ತಂಡ ತಪಾಸಣೆ ನಡೆಸಿದೆ. ಈ ತಪಾಸಣೆಯಲ್ಲಿ ಕೋಪದಂತಹ ನಡವಳಿಕೆ ಆಧಾರಿತ ಸಮಸ್ಯೆ, ಓದುವಿಕೆ, ಬರೆಯುವಿಕೆ ಮತ್ತು ಅರ್ಥಗ್ರಹಣದಲ್ಲಿ ತೊಂದರೆಗಳನ್ನು ಎದುರಿಸುವ ಕಲಿಕಾ ನ್ಯೂನತೆ, ಮಿದುಳಿನ ಸಾಮಾನ್ಯ ಬೆಳವಣಿಗೆಯನ್ನು ಕುಂಠಿತಗೊಳಿಸಿ, ಸಂವಹನ, ಸಾಮಾಜಿಕ ಒಡನಾಟ, ಗ್ರಹಿಕೆ ಮತ್ತು ವರ್ತನೆಗಳ ಮೇಲೆ ಪರಿಣಾಮ ಬೀರುವ ಆಟಿಸಂ, ಬುದ್ಧಿಮಾಂದ್ಯತೆಯಂತಹ ಸಮಸ್ಯೆಯು 23 ಸಾವಿರಕ್ಕೂ ಅಧಿಕ ಮಕ್ಕಳಲ್ಲಿ ದೃಢಪಟ್ಟಿದೆ.

ಗುರುತಿಸದಿದ್ದರೆ ಅಪಾಯ: ಹೈಪರ್ ಆ್ಯಕ್ಟಿವಿಟಿಯಂತಹ ಸಮಸ್ಯೆಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ಹೊರರೋಗಿ ವಿಭಾಗಕ್ಕೆ ಪಾಲಕರು ಮಕ್ಕಳನ್ನು ಕರೆತರುತ್ತಿದ್ದು, ಅವರ ಸಮಸ್ಯೆ ಅನುಸಾರ ಸಮಾಲೋಚನೆ ಮತ್ತು ಥೆರಪಿ ಒದಗಿಸಲಾಗುತ್ತಿದೆ. ಮೊಬೈಲ್ನಂತಹ ಡಿಜಿಟಲ್ ಸಾಧನಗಳ ಅತಿಯಾದ ಬಳಕೆ, ಕಿರು ವಿಡಿಯೊಗಳ ವೀಕ್ಷಣೆ, ಕಾರ್ಬೋಹೈಡ್ರೇಟ್ ಪ್ರಮಾಣ ಅಧಿಕ ಇರುವ ತಿನಿಸುಗಳು, ಚಾಕೊಲೇಟ್ ಹಾಗೂ ತಂಪು ಪಾನೀಯಗಳ ಅತಿಯಾದ ಸೇವನೆಯಿಂದಲೇ ಹೈಪರ್ ಆ್ಯಕ್ಟಿವಿಟಿಯಂತಹ ಸಮಸ್ಯೆಗಳು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಮನೋವೈದ್ಯರು ವಿಶ್ಲೇಷಿಸಿದ್ದಾರೆ.

‘ಇಂತಹ ಸಮಸ್ಯೆಗಳಿಂದ ಹೊರಬರಲು ಮಕ್ಕಳು ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಮೊಬೈಲ್ನಂತಹ ಡಿಜಿಟಲ್ ಸಾಧನಗಳ ಅತಿಯಾದ ಬಳಕೆಗೆ ಕಡಿವಾಣ ಹಾಕಬೇಕು. ಸಿಹಿ ತಿನಿಸಿಗಳು, ಚಾಕೊಲೇಟ್ಗಳ ಸೇವನೆಯು ಮನಸ್ಸಿನ ಉದ್ವೇಗಕ್ಕೆ ಕಾರಣವಾಗಿ, ಹೈಪರ್ ಆ್ಯಕ್ಟಿವಿಟಿಯಂತಹ ಸಮಸ್ಯೆ ಕಾಣಿಸಿಕೊಳ್ಳಲಿದೆ. ಕಲಿಕಾ ನ್ಯೂನತೆ ಸಮಸ್ಯೆ ಎದುರಿಸುತ್ತಿರುವ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ, ಅವರ ಆಸಕ್ತಿಯನ್ನು ಅರಿತು ಪ್ರೋತ್ಸಾಹಿಸಬೇಕು’ ಎಂದು ನಿಮ್ಹಾನ್ಸ್ನ ಸ್ಥಾನಿಕ ವೈದ್ಯಾಧಿಕಾರಿ (ಆರ್ಎಂಒ) ಡಾ. ಶಶಿಧರ್ ಎಚ್.ಎನ್. ತಿಳಿಸಿದರು.

ನಡವಳಿಕೆ ಆಧಾರಿತ ಹಾಗೂ ಕಲಿಕಾ ನ್ಯೂನತೆ ಗುರುತಿಸುವಲ್ಲಿ ಶಿಕ್ಷಕರು ಹಾಗೂ ಪಾಲಕರ ಪಾತ್ರ ಪ್ರಮುಖವಾಗುತ್ತದೆ. ಈ ಸಮಸ್ಯೆ ಹೊಂದಿದ್ದವರನ್ನು ವಿಶೇಷ ಮಕ್ಕಳೆಂದು ಪರಿಗಣಿಸಬೇಕು
ಡಾ. ಶಶಿಧರ್ ಎಚ್.ಎನ್. ನಿಮ್ಹಾನ್ಸ್ ಆರ್ಎಂಒ

ಕಲಿಕೆಯ ಸಮಸ್ಯೆ ಹೊಂದಿರುವ ಮಕ್ಕಳನ್ನು ಹೆಚ್ಚಿನ ಸಹನಶೀಲತೆಯಿಂದ ಸಂಭಾಳಿಸಬೇಕು. ಅವರನ್ನು ಟೀಕಿಸುವ ಬದಲು ಆತ್ಮವಿಶ್ವಾಸ ತುಂಬಿ ಪ್ರೋತ್ಸಾಹಿಸಬೇಕು
ನೇಹಾ ಕಡಬಂ ಕಡಬಮ್ಸ್ ಆಸ್ಪತ್ರೆಯ ಮನೋವೈದ್ಯೆ

7ರಿಂದ 14 ವರ್ಷದವರಲ್ಲಿ ಅಧಿಕ

‘ಹೈಪರ್ ಆ್ಯಕ್ಟಿವಿಟಿ ಸಮಸ್ಯೆಯು ವಿಶೇಷವಾಗಿ 7ರಿಂದ 14 ವರ್ಷದ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ಸಮಸ್ಯೆ ಎದುರಿಸುವ ಮಕ್ಕಳು ಸಾಮಾನ್ಯವಾಗಿ ಒಂದೇ ಕೆಲಸದಲ್ಲಿ ಹೆಚ್ಚು ಹೊತ್ತು ಗಮನ ಕೇಂದ್ರೀಕರಿಸಲು ಸಾಧ್ಯವಾಗದೆ ಅತಿಯಾದ ಚಲನವಲನದ ಜತೆಗೆ ತಾಳ್ಮೆಯ ಕೊರತೆ ಎದುರಿಸುತ್ತಾರೆ. ಕಲಿಕಾ ನ್ಯೂನತೆ ಹೊಂದಿರುವ ಮಕ್ಕಳು ಓದು ಬರಹ ಸೇರಿ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಹೆಚ್ಚಿನ ಕಷ್ಟ ಅನುಭವಿಸುತ್ತಾರೆ. ಇದನ್ನು ಸಾಮಾನ್ಯ ಬೆಳವಣಿಗೆಯ ವರ್ತನೆ ಎಂದು ತಪ್ಪಾಗಿ ಭಾವಿಸಿದರೆ ಮಗುವಿನ ಆತ್ಮವಿಶ್ವಾಸ ಮತ್ತು ವಿದ್ಯಾಭ್ಯಾಸದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಈ ಸಮಸ್ಯೆ ಗುರುತಿಸಿ ಚಿಕಿತ್ಸೆ ಮತ್ತು ಬೆಂಬಲ ನೀಡುವುದು ಮುಖ್ಯ’ ಎಂದು ಕಡಬಮ್ಸ್ ಆಸ್ಪತ್ರೆಯ ಹಿರಿಯ ಮನೋವೈದ್ಯೆ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ನೇಹಾ ಕಡಬಂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.