ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರಿಗೆ ಕುಕ್ಕರ್‌ ಹಂಚಿದರೇ ಸಂಸದ ಡಿ.ಕೆ. ಸುರೇಶ್?: ಫೋಟೊ ಹಂಚಿಕೊಂಡ ಬಿಜೆಪಿ

Published 23 ಫೆಬ್ರುವರಿ 2024, 9:49 IST
Last Updated 23 ಫೆಬ್ರುವರಿ 2024, 9:49 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಇತ್ತ ಬೆಂಗಳೂರು ಗ್ರಾಮಾಂತರ ಲೋಕಸಭಾ ಕೇತ್ರದ ಸಂಸದ ಡಿ.ಕೆ. ಸುರೇಶ್ ಅವರು ಕನಕಪುರ ವ್ಯಾಪ್ತಿಯಲ್ಲಿ ಕುಕ್ಕರ್‌ ಹಂಚಿಕೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಈ ಕುರಿತು ‘ಎಕ್ಸ್‌’ ಪೋಸ್ಟ್‌ ಮಾಡಿರುವ ಬಿಜೆಪಿ, ‘ಕುಕ್ಕರ್‌ ಬಾಂಬ್‌ ಬ್ಲಾಸ್ಟ್ ಮಾಡಿದ ಬ್ರದರ್ಸ್‌ಗಳ ಬ್ರದರ್‌‌ರಿಂದ ಕುಕ್ಕರ್‌ ಹಂಚಿಕೆಯಾಗಿದೆ. ದೇಶದ ವಿಭಜನೆ ಮಾಡುವ ಸಂಚು ರೂಪಿಸಿದ್ದ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಅವರಿಗೆ ಚುನಾವಣೆ ಘೋಷಣೆ ಮುನ್ನವೇ ಸೋಲಿನ ಭೀತಿ ಶುರುವಾಗಿದೆ’ ಎಂದು ವಾಗ್ದಾಳಿ ನಡೆಸಿದೆ.

‘ಡಿ.ಕೆ. ಸುರೇಶ್‌ ಅವರೇ, ಗೂಂಡಾಗಿರಿ ಮಾಡುವ ಜೊತೆಗೆ ಸ್ವಲ್ಪ ಅಭಿವೃದ್ಧಿಯನ್ನು ಮಾಡಿದ್ದರೆ, ಈಗ ಊರಿಗಿಂತ ಮುಂಚೆ ಮತದಾರರಿಗೆ ಕುಕ್ಕರ್‌ ಹಂಚುವ ಪ್ರಮೇಯ ಬರುತ್ತಿರಲಿಲ್ಲ. ಅಂದ ಹಾಗೆ ಕನಕಪುರದಲ್ಲಿ ನೀವು ಪ್ರತಿ ಬಾರಿ ಗೆಲ್ಲುವುದು ಗೂಂಡಾಗಿರಿಯಿಂದ ಎಂದು ತಿಳಿದಿತ್ತು. ಆದರೆ ನಿಮ್ಮ ಗೂಂಡಾ ಮನಸ್ಸಿನೊಳಗೆ ವಾಮಮಾರ್ಗದ ಕುಕ್ಕರ್‌ ವಿಶಲ್‌ ಸಹ ಇದೆ ಎಂಬುದು ಇಂದು ಜಗಜ್ಜಾಹೀರಾಗಿದೆ ಎಂದು ಬಿಜೆಪಿ ಟೀಕಿಸಿದೆ.

ಮತದಾರರಿಗೆ ಕುಕ್ಕರ್‌ ಆಮಿಷ ಒಡ್ಡುತ್ತಿರುವ ಸಂಸದ ಡಿ.ಕೆ. ಸುರೇಶ್‌ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಒತ್ತಾಯಿಸುವುದಾಗಿ ಬಿಜೆಪಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT