ಪುನರ್ವಸತಿ ಕಾರ್ಯಕ್ರಮ ಒಂದು ದೀರ್ಘಕಾಲೀನ ಪ್ರಕ್ರಿಯೆ ಹಾಗೂ ಸಂಪೂರ್ಣ ಸ್ವಯಂಪ್ರೇರಿತ. ಇದಕ್ಕೆ ಯಾವುದೇ ಕಾಲಮಿತಿ ಹಾಕಲು ಬರುವುದಿಲ್ಲ. ಅಲ್ಲದೆ, ಗ್ರಾಮಸಭೆಗಳ ಒಪ್ಪಿಗೆ ಮತ್ತು ಅರಣ್ಯ ಹಕ್ಕು ಕಾಯ್ದೆಯಡಿ ಪ್ರಕ್ರಿಯೆ ಕಡ್ಡಾಯ. ಇವುಗಳನ್ನು ಮಾಡದೆ ಪುನರ್ವಸತಿ ಯೋಜನೆ ರೂಪಿಸಿ ಸಮಿತಿಗೆ ಸಲ್ಲಿಸಿದ್ದು ಸರಿಯಲ್ಲ.