ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ವರ್ಷ ಮಂಗಳೂರು ಸಾಹಿತ್ಯೋತ್ಸವ

‘ಭಾರತದ ಪರಿಕಲ್ಪನೆ’ಯ ಆಶಯಕ್ಕೆ ಉತ್ತಮ ಸ್ಪಂದನೆ
Last Updated 4 ನವೆಂಬರ್ 2018, 20:13 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ಸಾಹಿತ್ಯೋತ್ಸವದ ಯಶಸ್ಸಿನಿಂದ ಪುಳಕಿತರಾಗಿರುವ ಮಂಗಳೂರು ಲಿಟರರಲಿ ಫೌಂಡೇಶನ್‌ ಸದಸ್ಯರು ಪ್ರತಿವರ್ಷವೂ ಈ ಮಾದರಿಯ ಸಾಹಿತ್ಯೋತ್ಸವವನ್ನು ಆಯೋಜಿ ಸುವ ನಿರ್ಧಾರಕ್ಕೆ ಬಂದಿದ್ದಾರೆ.

ಭಾರತದ ಪರಿಕಲ್ಪನೆಯನ್ನು ಪ್ರತಿಪಾದಿಸುವ ಉದ್ದೇಶದಿಂದ ಎರಡು ದಿನಗಳ ಕಾಲ ನಡೆದ ಸಾಹಿತ್ಯೋತ್ಸವಕ್ಕೆ ಭಾನುವಾರ ಸಂಜೆ ತೆರೆ ಬಿದ್ದಿದ್ದು, ಮುಂದಿನ ವರ್ಷ ಮತ್ತೆ ಸಮ್ಮೇಳನದ ಮಾಹಿತಿ ನೀಡುವಂತೆ ಸಾವಿರಾರು ಪ್ರತಿನಿಧಿಗಳು ಪ್ರತಿಕ್ರಿಯಿಸಿದ್ದು, ಈ ಪ್ರಯತ್ನವನ್ನು ಮುಂದುವರಿಸಲು ಆಯೋಜಕರು ನಿರ್ಧರಿಸಿದ್ದಾರೆ.

ಪ್ರತಿವರ್ಷ ನವೆಂಬರ್‌ 1 ಮತ್ತು 2ನೇ ತಾರೀಕಿನಂದೇ ಸಮಾವೇಶ ಆಯೋಜಿಸುವ ನಿರ್ಧಾರಕ್ಕೆ ಬರುವ ಪ್ರಸ್ತಾಪ ಬಂದಿದೆ. ಸಂಘಟನಾತ್ಮಕವಾಗಿ ಹಲವಾರು ವಿಷಯಗಳನ್ನು ಸಭೆ ಸೇರಿ ವಿವರವಾಗಿ ಚರ್ಚಿಸಿದ ಬಳಿಕ ನಿರ್ಧರಿಸಲಾಗುವುದು. ಆದರೆ ಈ ಸಾಹಿತ್ಯೋತ್ಸವವನ್ನು ಪ್ರತಿವರ್ಷ ಆಯೋಜಿಸಲೇಬೇಕು ಎಂಬ ಆಗ್ರಹ ಪ್ರತಿನಿಧಿಗಳಿಂದ ಮತ್ತು ಉಪನ್ಯಾಸಕರಿಂದ ವ್ಯಕ್ತವಾಗಿದೆ ಎಂದು ಸಂಘಟಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT