ಬೆಂಗಳೂರು: ‘ದೇಶದ ಆರ್ಥಿಕತೆ ಶೋಚನೀಯವಾಗಿದ್ದಾಗ ಸರ್ಕಾರವು 130 ಟನ್ ಚಿನ್ನ ಅಡವಿಟ್ಟಿತ್ತು. ಅಂತಹ ಭೀಕರ ಸನ್ನಿವೇಶದಲ್ಲಿ ಮನಮೋಹನ ಸಿಂಗ್ ಹಣಕಾಸು ಸಚಿವರಾಗಿ ಅಧಿಕಾರಕ್ಕೆ ಬಂದರು. ಆರ್ಥಿಕತೆಯನ್ನು ಸರಿದಾರಿಗೆ ತಂದರು’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ಜೆಡಿಎಸ್ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಮನಮೋಹನ ಸಿಂಗ್ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ‘ಪಿ.ವಿ.ನರಸಿಂಹರಾವ್ ಪ್ರಧಾನಿಯಾಗಿದ್ದರು. ನಾನು ಅದೇ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದೆ. ಆರ್ಥಿಕತೆಯನ್ನು ಸರಿದಾರಿಗೆ ತರಲು ಹತ್ತಾರು ತರದ ಯತ್ನಗಳು ನಡೆಯುತ್ತಿದ್ದವು. ಅದೇ ಸಂದರ್ಭದಲ್ಲಿ ಮನಮೋಹನ ಸಿಂಗ್ ಆರ್ಥಿಕ ಸುಧಾರಣೆಗೆ ಮುಂದಾದರು’ ಎಂದು ವಿವರಿಸಿದರು.

‘ಉದಾರೀಕರಣ, ಖಾಸಗೀಕರಣ, ಜಾಗತೀಕರಣಗಳನ್ನು ಜಾರಿಗೆ ತಂದರು. ಆಗ ನಾನು ಆ ನೀತಿಗಳನ್ನು ಟೀಕಿಸಿದ್ದೆ. ಆದರೆ ಅವರು ಬಿಕ್ಕಟ್ಟನ್ನು ಸರಿಯಾಗಿ ನಿಭಾಯಿಸಿದರು. ಆರ್ಥಿಕ ಸುಧಾರಣೆಗಳನ್ನು ತಂದರು. ಅದು ಬಹುದೊಡ್ಡ ಬದಲಾವಣೆಯಾಗಿತ್ತು. ಆ ಮೂಲಕ ದೇಶವನ್ನು ಸಂಕಷ್ಟದಿಂದ ಪಾರು ಮಾಡಿದರು. ಜಾಗತಿಕ ಮಟ್ಟದಲ್ಲಿ ದೇಶದ ಗೌರವ ಉಳಿಸಿದರು’ ಎಂದರು.
.Manmohan Singh: ಅರ್ಥಮಾಂತ್ರಿಕ ಅಸ್ತಂಗತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.