ರಾಮನಗರ:ಬೃಹತ್ ಗಾಂಜಾ ಮಾರಾಟ ದಂಧೆಯೊಂದು ಗಂಡ–ಹೆಂಡತಿಜಗಳದಿಂದಾಗಿ ಬಯಲಾಗಿದ್ದು, ಪೊಲೀಸರು ನಗರದಲ್ಲಿಬರೋಬ್ಬರಿ 44 ಕೆ.ಜಿ ಗಾಂಜಾ ವಶ ಪಡಿಸಿಕೊಂಡಿದ್ದಾರೆ.

ಇಲ್ಲಿನ ಐಜೂರು ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಂತನಗರ ರಾಯರಬೀದಿಯಲ್ಲಿ ವಾಸವಿರುವ ಬೈರೇಗೌಡ ಎಂಬುವರ ಮನೆಯಲ್ಲಿ 20 ಕೆ.ಜಿಹಾಗೂ ಅಲ್ಲಿಂದ ಮಾರಾಟವಾಗಿದ್ದ ಸಾಗಿಸಲ್ಪಡುತ್ತಿದ್ದ 24 ಕೆ.ಜಿ ಗಾಂಜಾವನ್ನು ನಗರದ ಈದ್ಗಮೈದಾನದ ಬಳಿ ವಶಪಡಿಸಿಕೊಳ್ಳಲಾಗಿದೆ.

ಬೈರೇಗೌಡ ಎಂಬುವರ ಮನೆಯಲ್ಲಿ ಅಪಾರ ಪ್ರಮಾಣದಲ್ಲಿ ಗಾಂಜಾ ಸಂಗ್ರಹಿಸಿಟ್ಟು, ನಂತರ ಇಲ್ಲಿಂದ ಮೈಸೂರು, ಕೊಡಗು, ಕೇರಳಕ್ಕೆ ಮಾರಾಟ ಮಾಡಲಾಗುತ್ತಿತ್ತು. ಆಂಧ್ರಪ್ರದೇಶದಿಂದ ಇಲ್ಲಿಗೆ ವ್ಯಕ್ತಿಯೋರ್ವ ಗಾಂಜಾ ತಂದುಕೊಡುತ್ತಿದ್ದ ಎಂದು ಪೊಲೀಸರು ತಿಳಿಸಿದರು.

ಗಂಡ, ಹೆಂಡತಿ ನಡುವೆ ಜಗಳವಾಗಿದೆ. ಇದರಿಂದಾಗಿಹೆಂಡತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ ಮಾಲು ವಶಪಡಿಸಿಕೊಂಡಿದ್ದು, ಖರೀದಿಗೆ ಬಂದಿದ್ದವರೂ ಸೇರಿ ಒಟ್ಟು ನಾಲ್ವರನ್ನು ಬಂಧಿಸಿದರು.ಕೆ.ಜಿ ಪ್ಯಾಕೆಟ್ 10 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಇದು ನಗರದಲ್ಲಿ ನಡೆದ ಅತಿದೊಡ್ಡ ಗಾಂಜಾ ಪ್ರಕರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.