ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೆ. 30ರಿಂದ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಾಮೂಹಿಕ ರಜೆ

Published : 28 ಸೆಪ್ಟೆಂಬರ್ 2024, 15:17 IST
Last Updated : 28 ಸೆಪ್ಟೆಂಬರ್ 2024, 15:17 IST
ಫಾಲೋ ಮಾಡಿ
Comments

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಎಲ್ಲ ಗ್ರಾಮ ಆಡಳಿತಾಧಿಕಾರಿಗಳು ಇದೇ 30ರಿಂದ ಒಂದು ತಿಂಗಳು ಸಾಮೂಹಿಕ ರಜೆ ಹಾಕಿ, ಪ್ರತಿಭಟನೆ ನಡೆಸಲು ಸಿದ್ದತೆ ನಡೆಸಿದ್ದಾರೆ.

‘ಕಂದಾಯ ಇಲಾಖೆಗೆ ಸೇರಿದ್ದರೂ, ಅನ್ಯ ಇಲಾಖೆಗಳ ಕಾರ್ಯದೊತ್ತಡವೇ ಹೆಚ್ಚಾಗಿದೆ. ಎಂದಿನ ಕೆಲಸದ ಜತೆಗೆ 17 ಆ್ಯಪ್‌ಗಳಲ್ಲಿ ವಿವಿಧ ದತ್ತಾಂಶಗಳನ್ನು ನಮೂದಿಸುವ ಕೆಲಸ ನೀಡಲಾಗಿದೆ. ಅಗತ್ಯ ಮೂಲಸೌಕರ್ಯವೂ ಇಲ್ಲ. ಈ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಲು ಪ್ರತಿಭಟಿಸಲಾಗುತ್ತದೆ’ ಎಂದು ಗ್ರಾಮ ಆಡಳಿತಾಧಿಕಾರಿಗಳ ಸಂಘ ತಿಳಿಸಿದೆ.

‘ಇದೇ 26, 27ರಂದು ರಾಜ್ಯದಾದ್ಯಂತ ತಾಲ್ಲೂಕು ಕಚೇರಿಗಳ ಎದುರು, 28ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದೆ. 29ರಂದೂ ಪ್ರತಿಭಟನೆ ನಡೆಸಲಿದ್ದು, 30ರಿಂದ ಒಂದು ತಿಂಗಳು ಸಾಮೂಹಿಕವಾಗಿ ರಜೆ ಹಾಕಲು ನಿರ್ಧರಿಸಲಾಗಿದೆ’ ಎಂದು ಸಂಘವು ತಿಳಿಸಿದೆ.

‘ಕಾರ್ಯಭಾರ ತಗ್ಗಿಸಬೇಕು, ಕೆಲಸದ ಪರಿಮಿತಿ ನಿಗದಿ ಮಾಡಬೇಕು, ಉತ್ತಮ ಸ್ಮಾರ್ಟ್‌ಫೋನ್‌ ಮತ್ತು ಇಂಟರ್‌ನೆಟ್‌ ಸಂಪರ್ಕ ಒದಗಿಸಬೇಕು’ ಎಂದು ಸಂಘವು ಬೇಡಿಕೆ ಇರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT