ಬೆಂಗಳೂರು: ‘ರಾಜ್ಯದಲ್ಲಿ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ (ಜಾತಿವಾರು ಗಣತಿ) ಧರ್ಮ ನಮೂದಿಸುವ ಕಲಂನಲ್ಲಿ ಏನು ಬರೆಸಬೇಕೆಂದು ಲಿಂಗಾಯತ ನಾಯಕರ ಸಭೆ ನಡೆಸಿ 10 ದಿನಗಳಲ್ಲಿ ನಿರ್ಧರಿಸುತ್ತೇವೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾವೆಲ್ಲರೂ ಸಭೆ ಸೇರಿ ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಆ ಸಭೆಗೆ ಸ್ವಾಮೀಜಿಗಳೂ ಬಂದಿದ್ದರು’ ಎಂದರು.

‘ಧರ್ಮ ನಮೂದಿಸುವ ಕಲಂನಲ್ಲಿ ಏನು ಬರೆಸಬೇಕೆಂದು ಚರ್ಚಿಸಿದ್ದೇವೆ. ಈ ಹಿಂದೆ ಕೆಲವರು ವೀರಶೈವ ಎಂದೂ ಇನ್ನೂ ಕೆಲವರು ಲಿಂಗಾಯತ ಎಂದೂ ಬರೆಸಿದ್ದಾರೆ. ಈ ವಿಚಾರದ ಬಗ್ಗೆ ಮತ್ತೆ ಚರ್ಚೆ ಮಾಡುತ್ತೇವೆ’ ಎಂದರು.

‘ಕೇಂದ್ರ ಸರ್ಕಾರದಿಂದಲೂ ಜಾತಿವಾರು ಗಣತಿ ನಡೆಯಲಿದೆ. ನಮ್ಮದು ಸಾಮಾಜಿಕ, ಆರ್ಥಿಕ ಸಮೀಕ್ಷೆ’ ಎಂದರು.
.ಜಾತಿವಾರು ಗಣತಿ: ಬಿಲ್ಲವರು, ಈಡಿಗರು ಎಂದೇ ಬರೆಸಲು ಸಲಹೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.