ಹುಬ್ಬಳ್ಳಿ: ರಾಜ್ಯದ ಉಗ್ರಾಣದಲ್ಲಿ ಔಷಧಗಳ ಕೊರತೆ ಉಂಟಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆಗೆ ಅಗತ್ಯ ಔಷಧಗಳೇ ಸಿಗುತ್ತಿಲ್ಲ. ಹೀಗಾಗಿ ಹೊರಗಡೆಯೇ ಔಷಧ ಖರೀದಿಸುವಂತೆ ವೈದ್ಯರು ಚೀಟಿ ಬರೆದು ಕೊಡುತ್ತಿದ್ದಾರೆ.

ತೀವ್ರ ಸೋಂಕಿಗೆ ಒಳಗಾದಾಗ ನೀಡುವ ‘ಹೈಯರ್ ಆ್ಯಂಟಿಬಯಾಟಿಕ್’ ಇಂಜೆಕ್ಷನ್ ಮತ್ತು ಮಾತ್ರೆಗಳು, ‘ಆ್ಯಂಟಿ ಹೆಮಾರಾಜಿಕ್’, ‘ಕಾರ್ಡಿಯೊ ವ್ಯಾಸ್ಕುಲರ್’, ‘ಆ್ಯಂಟಿಡೊಟ್ಸ್ ಆ್ಯಂಡ್ ವ್ಯಾಕ್ಸಿನ್’ ಸೇರಿ ಬಹುತೇಕ ಜೀವರಕ್ಷಕ ಔಷಧಗಳ ಕೊರತೆ ಇದೆ. ಜ್ವರ ನಿಯಂತ್ರಿಸುವ ‘ಪ್ಯಾರಾಸಿಟಮೋಲ್’ನಂತಹ ಮಾತ್ರೆಗಳೂ ಬಹುತೇಕ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಇಲ್ಲ. ಕಳೆದ ವರ್ಷದ ಟೆಂಡರ್ನಲ್ಲಿ ಖರೀದಿಸಿದ್ದ ಕೆಲ ಔಷಧಗಳು ರಾಜ್ಯ ಉಗ್ರಾಣದಲ್ಲಿ ಈಗಾಗಲೇ ಖಾಲಿಯಾಗಿವೆ.

ಕಂಪನಿಗಳಿಂದ ಪೂರೈಕೆಯಾಗುವ 800ಕ್ಕೂ ಹೆಚ್ಚು ಬಗೆಯ ಔಷಧಗಳನ್ನು ಪರಿಶೀಲಿಸಿ, ರಾಜ್ಯ ಔಷಧ ಉಗ್ರಾಣವು ವಿವಿಧ ಜಿಲ್ಲೆಗಳ ಔಷಧ ಉಗ್ರಾಣಕ್ಕೆ ಕಳುಹಿಸುತ್ತದೆ. ಅಲ್ಲಿಂದ ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳಿಗೆ ಅಲ್ಲದೇ ವಿವಿಧ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಅಗತ್ಯಕ್ಕೆ ಅನುಸಾರ ಔಷಧಗಳು ರವಾನೆಯಾಗುತ್ತವೆ. ಆದರೆ, ಮೂರು ತಿಂಗಳಿನಿಂದ ಆಸ್ಪತ್ರೆಗಳು ವಿವಿಧ ಔಷಧಗಳಿಗೆ ಬೇಡಿಕೆ ಸಲ್ಲಿಸಿದರೂ ಬೇಡಿಕೆಯ ಶೇ 30ರಷ್ಟು ಮಾತ್ರ ಸಿಗುತ್ತಿವೆ.

‘ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಗೆ ವರ್ಷಕ್ಕೆ ಎಷ್ಟು ರೋಗಿಗಳು ಬರುತ್ತಾರೆ ಮತ್ತು ಯಾವೆಲ್ಲ ಔಷಧಗಳು ಅಗತ್ಯ ಇವೆ ಎಂಬ ವಾರ್ಷಿಕ ಲೆಕ್ಕಾಚಾರದ ಆಧಾರದಲ್ಲಿ ಪೂರೈಕೆಗೆ ಸರ್ಕಾರ ಟೆಂಡರ್ ಕರೆಯುತ್ತದೆ. ಪ್ರಸ್ತುತ ವರ್ಷ ಜ್ವರ, ಶೀತದಂತಹ ಅನಾರೋಗ್ಯ ಸಮಸ್ಯೆ ಹೆಚ್ಚಾಗಿದೆ. ನಿಗದಿತ ಅವಧಿಗೂ ಮುನ್ನವೇ ಕೆಲ ಔಷಧ ಖಾಲಿಯಾಗಿದೆ’ ಎಂದು ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಶಶಿ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉಗ್ರಾಣದಲ್ಲಿ ಕೆಲ ಔಷಧಗಳ ಕೊರತೆ ಇರುವುದನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಶೀಘ್ರ ಪೂರೈಸುವುದಾಗಿ ತಿಳಿಸಿದ್ದಾರೆ. ಜಿಲ್ಲೆ, ತಾಲ್ಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇರುವ ಆಯುಷ್ಮಾನ್ ಭಾರತ್ ಸೇರಿ ಕೆಲ ವಿಶೇಷ ಹಣಕಾಸು ನಿಧಿಗಳಡಿ ಅಗತ್ಯ ಔಷಧಗಳ ಖರೀದಿ ನಡೆದಿದೆ. ಧಾರವಾಡ ಜಿಲ್ಲೆಯ ಉಗ್ರಾಣದಲ್ಲಿ ಸದ್ಯ 348 ಬಗೆಯ ಔಷಧಗಳಿದ್ದು, ಅಗತ್ಯಕ್ಕೆ ತಕ್ಕಷ್ಟು ಪೂರೈಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಐ.ವಿ ದ್ರಾವಣ ತೀವ್ರ ಕೊರತೆ

ಬಳ್ಳಾರಿಯಲ್ಲಿ ಈಚೆಗೆ ಬಾಣಂತಿಯರ ಸಾವಿನ ಪ್ರಕರಣದ ನಂತರ ರಾಜ್ಯದಾದ್ಯಂತ ಸರ್ಕಾರಿ ಆಸ್ಪತ್ರೆಯಲ್ಲಿ ಐ.ವಿ ದ್ರಾವಣದ ಕೊರತೆ ತೀವ್ರವಾಗಿದೆ. ಔಷಧ ಉಗ್ರಾಣದಿಂದ ಪೂರೈಕೆಯಾದ ದ್ರಾವಣಗಳನ್ನು ಬಳಸದಂತೆ ಆರೋಗ್ಯ ಇಲಾಖೆ ಎಲ್ಲಾ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ದ್ರಾವಣ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅದರ ವರದಿ ಇನ್ನೂ ಸರ್ಕಾರದ ಕೈ ಸೇರಿಲ್ಲ. ಬಹುತೇಕ ಜಿಲ್ಲಾಸ್ಪತ್ರೆಗಳ ಗೋದಾಮುಗಳಲ್ಲಿ ಐ.ವಿ ದ್ರಾವಣಗಳ ಬಾಟಲ್ಗಳು ಮೂಟೆಗಟ್ಟಲೆ ಸಂಗ್ರಹವಾಗಿವೆ. ಇದರಿಂದಾಗಿ ಅನಿವಾರ್ಯವಾಗಿ ಆಸ್ಪತ್ರೆಗಳು ಅಗತ್ಯಕ್ಕೆ ತಕ್ಕಷ್ಟು ಐ.ವಿ ದ್ರಾವಣವನ್ನು ಖಾಸಗಿ ಔಷಧಾಲಯಗಳಿಂದ ಖರೀದಿಸುತ್ತಿವೆ.

1. ನಾಲ್ಕು ವರ್ಷದಿಂದ ಹೊಸ ಟೆಂಡರ್ ಕರೆದಿಲ್ಲ

2. ಟೆಂಡರ್ ಅನುಸಾರವೇ ಔಷಧಗಳ ಪೂರೈಕೆ

3. ವರ್ಷಗಳು ಕಳೆದಂತೆ ರೋಗಿಗಳ ಸಂಖ್ಯೆ ಹೆಚ್ಚಳ

4. ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣದ ನಂತರ ಔಷಧ ವಿತರಣೆ ನಿಧಾನ

5. ಆರೋಗ್ಯ ಇಲಾಖೆಯ ಕಟ್ಟುನಿಟ್ಟಿನ ಸೂಚನೆ

ಪ್ಯಾರಾಸಿಟಮೋಲ್ ಸೇರಿ ಕೆಲ ಅಗತ್ಯ ಔಷಧಗಳ ಕೊರತೆಯಿದ್ದು, ಸ್ಥಳೀಯ ಆಸ್ಪತ್ರೆಗಳ ಆರೋಗ್ಯ ನಿಧಿಯಿಂದ ಖರೀದಿಸಲು ಸೂಚಿಸಲಾಗಿದೆ
ಡಾ. ಶಶಿ ಪಾಟೀಲ,ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಧಾರವಾಡ

ತುರ್ತು ಸಂದರ್ಭದಲ್ಲಿ ಬೇಕಾಗುವ ಔಷಧಗಳು ನಮ್ಮಲ್ಲಿ ಲಭ್ಯವಿವೆ. ಅದರ ಹೊರತಾಗಿಯೂ ಬೇರೆ ಔಷಧಗಳ ಅಗತ್ಯವಿದ್ದರೆ ಹೊರಗಡೆಯಿಂದ ಖರೀದಿಸುತ್ತಿದ್ದೇವೆ
ಶ್ರೀಧರ ದಂಡಪ್ಪನವರ, ಮುಖ್ಯವೈದ್ಯಾಧಿಕಾರಿ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ

ಔಷಧ ಉಗ್ರಾಣದಲ್ಲಿ ಯಾವ್ಯಾವ ಔಷಧಗಳು ಇಲ್ಲ ಮತ್ತು ಅವು ಎಷ್ಟು ಪ್ರಮಾಣದಲ್ಲಿ ಬೇಕು ಎಂಬ ಬಗ್ಗೆ ಪರಿಶೀಲಿಸಲಾಗುವುದು
ಕನಗವಲ್ಲಿ, ವ್ಯವಸ್ಥಾಪಕ ನಿರ್ದೇಶಕಿ, ರಾಜ್ಯ ಔಷಧ ಉಗ್ರಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.