ಶಿರಸಿ: ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಎರಡು ದಿನಗಳ ಹಿಂದೆಯೆ ಕೋವಿಡ್ ದೃಢಪಟ್ಟಿದೆ.

ಸೋಮವಾರದಿಂದ ಸಂಸತ್ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ ಶುಕ್ರವಾರ ಅವರು ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನದ ಮೂಲಕ ತೆರಳಿದ್ದರು. ಅಲ್ಲಿಗೆ ತಲುಪಿದ ಬಳಿಕ ಎನ್ ಐಸಿಪಿಆರ್ ಆಸ್ಪತ್ರೆಯಲ್ಲಿ ಕೋವಿಡ್ ತಪಾಸಣೆಗೊಳಪಟ್ಟಿದ್ದರು. ಈ ವೇಳೆ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ.

ಆದರೆ ಅನಂತಕುಮಾರ್ ಗೆ ಸೋಂಕಿನಯಾವುದೇ ಲಕ್ಷಣವಿರಲಿಲ್ಲ. ಹೀಗಾಗಿ ಅವರು ದೆಹಲಿಯ ನಿವಾಸದಲ್ಲಿ ಕ್ವಾರಂಟೈನ್ ಗೊಳಪಟ್ಟಿದ್ದಾರೆ. ಶಿರಸಿಯ ಅವರ ನಿವಾಸಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿ ಕುಟುಂಬದವರ ಗಂಟಲುದ್ರವ ಪರೀಕ್ಷಿಸಿದ್ದು ಅವರೆಲ್ಲರ ವರದಿ ನೆಗೆಟಿವ್ ಬಂದಿದೆ ಎಂದು ಸಂಸದರ ಆಪ್ತರೋರ್ವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.