ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಇದೊಂದು ಷಡ್ಯಂತ್ರವಾಗಿದೆ. ರಾಜ್ಯಪಾಲರ ನಡೆ ಅಕ್ಷಮ್ಯ ಅಪರಾಧ ವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು,
ಇದು ಒಂದು ಷಡ್ಯಂತ್ರ ಅನ್ನೋದು ನಮಗೆ ಮೊದಲೇ ಗೊತ್ತಿತ್ತು, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲ ಸಂವಿಧಾನಿಕ ಹುದ್ದೆಗಳನ್ನು ಸರ್ವನಾಶ ಮಾಡುತ್ತಿದೆ. ಇಡಿ, ಐಟಿ, ಸಿಬಿಐ ಎಲ್ಲವನ್ನೂ ದುರುಪಯೋಗ ಮಾಡಿಕೊಂಡಿದೆ. ರಾಜ್ಯಪಾಲರ ಕಚೇರಿಯೂ ಈಗ ಬಿಜೆಪಿ ಕಚೇರಿ ಆಗಿದೆ.
ರಾಜ್ಯಪಾಲರು ಯಾವ ಮಟ್ಟಕ್ಕೆ ಇಳಿದಿದ್ದಾರೆ ಅನ್ನುವನ್ನು ತೋರಿಸುತ್ತದೆ. ಅವರು ಬಿಜೆಪಿಯ ಕೈಗೊಂಬೆಯಂತೆ ಮಾಡುತ್ತಿದ್ದಾರೆ. ನಾವು ಕಾನೂನಿನ ಹೋರಾಟ ಮಾಡುತ್ತಿದ್ದೇವೆ. ಸಿಎಂ ಜಗ್ಗುವುದೂ ಇಲ್ಲ, ಬಗ್ಗಯವುದೂ ಇಲ್ಲ ಎಂದು ಹೇಳಿದರು.
ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಸಂತೋಷ ಹೆಗ್ಡೆ ಅವರೇ ವರದಿ ಕೊಟ್ಟಿದ್ದರು. ಆದರೆ ಆಗ ರಾಜ್ಯಪಾಲರು ಕೂಲಂಕಷ ಯೋಚಿಸಿ ಪ್ಯಾಷಿಕ್ಯೂಷನ್ ಅನುಮತಿ ಕೊಟ್ಟಿದ್ದರು.
ಆ ಪ್ರಕರಣಕ್ಕೂ ಈಗಿನ ವಿಚಾರಕ್ಕೂ ಹೋಲಿಕೆ ಮಾಡಲು ಆಗದು ಎಂದರು.
ನಾವು ಇದನ್ನು ಎದುರಿಸಿ ಗೆಲ್ಕುತ್ತೇವೆ, ಕಾಂಗ್ರೆಸ್ ಗೆ ಶಕ್ತಿ ಕೊಡುವ ಕೆಲಸ ಮಾಡುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.