ಕಲಬುರಗಿ: 'ಭಾರತದ ರಾಷ್ಟ್ರಗೀತೆಯನ್ನು ಬ್ರಿಟಿಷ್ ಅಧಿಕಾರಿಯನ್ನು ಸ್ವಾಗತಿಸಲು ಬರೆಯಲಾಗಿತ್ತು ಎಂಬ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ ಅಸಂಬದ್ಧ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಸಂಸದ ಕಾಗೇರಿ ವಿಡಿಯೊ ಹಂಚಿಕೊಂಡಿರುವ ಸಚಿವ ಪ್ರಿಯಾಂಕ್, 'ಮತ್ತೊಂದು ದಿನ, ಮತ್ತೊಂದು ಆರ್.ಎಸ್.ಎಸ್. ವಾಟ್ಸ್ ಆ್ಯಪ್ ಇತಿಹಾಸ ಪಾಠ! ಸಂಸದ ಕಾಗೇರಿ ಅವರು ನಮ್ಮ ರಾಷ್ಟ್ರಗೀತೆಯು 'ಬ್ರಿಟಿಷ್' ಸ್ವಾಗತಗೀತೆ ಎಂದು ಪ್ರತಿಪಾದಿಸಿದ್ದಾರೆ. ಇದು ಶುದ್ಧ ಅಸಂಬದ್ಧ' ಎಂದು ಕಿಡಿಕಾರಿದ್ದಾರೆ.

'ರವೀಂದ್ರನಾಥ ಟ್ಯಾಗೋರ್ ಅವರು 1911ರಲ್ಲಿ ಭರೋತೋ ಭಾಗ್ಯೋ ಬಿಧಾತ ಎಂಬ ಸ್ತುತಿಗೀತೆಯನ್ನು ಬರೆದರು; ಅದರ ಮೊದಲ ಚರಣ 'ಜನ ಗಣ ಮನ'ವಾಯಿತು. ಇದನ್ನು ಮೊದಲು 1911ರ ಡಿಸೆಂಬರ್ 27ರಂದು ಕೋಲ್ಕತ್ತದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಲ್ಲಿ ಹಾಡಲಾಯಿತು. ರಾಜಮನೆತನಕ್ಕೆ ಗೌರವವಾಗಿ ಅಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

'ಇದು 'ಭಾರತ ಭಾಗ್ಯ ವಿಧಾತ'ನನ್ನು ವಂದಿಸುತ್ತದೆ ಮತ್ತು ಇದು 'ಐದನೇ ಜಾರ್ಜ್, ಆರನೇ ಜಾರ್ಜ್ ಅಥವಾ ಬೇರೆ ಯಾವುದೇ ಜಾರ್ಜ್ ಆಗಿರಲು ಸಾಧ್ಯವೇ ಇಲ್ಲ' ಎಂದು ಸ್ವತಃ ಟ್ಯಾಗೋರ್ ಅವರು 1937 ಮತ್ತು 1939 ರಲ್ಲಿ ಸ್ಪಷ್ಟಪಡಿಸಿದ್ದರು. ತಾವು ಇತಿಹಾಸವನ್ನು ಮತ್ತೆ ನೋಡಲು ಬಯಸುವುದಿಲ್ಲ ಎಂದು ಸಂಸದರು ಹೇಳುತ್ತಾರೆ. ಆದರೆ, ಪ್ರತಿಯೊಬ್ಬ ಬಿಜೆಪಿ, ಆರ್ಎಸ್ಎಸ್ ನಾಯಕರು, ಕಾರ್ಯಕರ್ತರು ಮತ್ತು 'ಸ್ವಯಂಸೇವಕರು' Rashtriya Swayamsevak Sangh (RSS) ಮುಖವಾಣಿ ಸಂಘಟನೆಯ ಸಂಪಾದಕೀಯಗಳನ್ನು ಓದುವ ಮೂಲಕ ಇತಿಹಾಸವನ್ನು ಪುನರ್ ವಿಮರ್ಶಿಸಬೇಕು. ಸಂವಿಧಾನ, ತ್ರಿವರ್ಣ ಧ್ವಜ ಹಾಗೂ ರಾಷ್ಟ್ರಗೀತೆಯನ್ನು ಅಗೌರವಿಸುವ ದೊಡ್ಡ ಸಂಪ್ರದಾಯವನ್ನು ಆರೆಸ್ಸೆಸ್ ಹೊಂದಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ನಾನು ಬಲವಾಗಿ ಒತ್ತಾಯಿಸುತ್ತೇನೆ' ಎಂದು ಸಲಹೆ ನೀಡಿದ್ದಾರೆ.

'ಈ viRSS ಅನ್ನು ಗುಣಪಡಿಸಬೇಕಾಗಿದೆ' ಎಂದೂ ಅಭಿಪ್ರಾಯಪಟ್ಟಿದ್ದಾರೆ.
.ಜನಗಣಮನ ಬ್ರಿಟಿಷ್ ಅಧಿಕಾರಿ ಸ್ವಾಗತಕ್ಕೆ ರಚಿಸಿದ್ದ ಗೀತೆ: ಕಾಗೇರಿ